More

    ಲಕ್ಷಾಂತರ ರೂ. ವಂಚಿಸಿದ್ದವನ ಬಂಧನ

    ಅಂಕೋಲಾ: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಮುಂಗಡ ಹಣ ಪಡೆಯುವುದು. ವಿದೇಶಿ ಉದ್ಯೋಗದ ಆಮಿಷ ತೋರಿಸಿ ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದ ವಂಚಕನನ್ನು ಬುಧವಾರ ರಾತ್ರಿ ಪಟ್ಟಣದಲ್ಲಿ ಬಂಧಿಸಲಾಗಿದೆ.
    ಮೂಲತಃ ಕುಮಟಾ ತಾಲೂಕಿನ ಹಿರೇಗುತ್ತಿ ಈಶ್ವರ ದೇವಸ್ಥಾನದ ಹತ್ತಿರದ ನಿವಾಸಿ, ಹಾಲಿ ಕುಮಟಾದ ಗಾಂಧಿ ನಗರದ ನಾಗರಾಜ ವಿನಾಯಕ ವೆರ್ಣೆಕರ (35) ಬಂಧಿತ ವ್ಯಕ್ತಿ. ಈತ ಅಂಕೋಲಾದ ಕೆಲ ಜನರಿಂದ 5 ಸಾವಿರ ರೂ. ಮುಂಗಡ ನೀಡಿದವರಿಗೆ 1 ಲಕ್ಷ ರೂ., 25 ಸಾವಿರ ರೂ. ನೀಡಿದರೆ 5 ಲಕ್ಷ ರೂ. ಸಾಲ ನೀಡುವುದಾಗಿ ಹಾಗೂ ಕೆಲವರಿಗೆ ಉದ್ಯೋಗ, ವಿದೇಶಿ ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದ.
    ಈತನ ವಂಚನೆಯ ಕುರಿತು ಆಟೋ ಚಾಲಕ ಶಿರಕುಳಿಯ ಸಂದೀಪ ಮೋಹನ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ನಾಗರಾಜ ವೆರ್ಣೆಕರನನ್ನು ಬಂಧಿಸಲು ಸಿಪಿಐ ಕೃಷ್ಣಾನಂದ ನಾಯಕ ಮತ್ತು ಪಿಎಸ್​ಐ ಈ.ಸಿ. ಸಂಪತ್ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಮೋಹನದಾಸ ಶೇಣ್ವಿ, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ, ಸುರೇಶ ಬೆಳ್ಳುಳ್ಳಿ ಕಾರ್ಯಾಚರಣೆ ನಡೆಸಿ ವಸತಿ ಗೃಹದಲ್ಲಿ ಬಂಧಿಸಲಾಗಿದೆ.
    ಸಿಮ್ ಕಾರ್ಡ್ ಬದಲಿಸುತ್ತಿದ್ದ ಆರೋಪಿ
    ನಾಗರಾಜ ವೇರ್ಣೆಕರ ಕಾರವಾರ, ಅಂಕೋಲಾ ಹಾಗೂ ಇತರೆಡೆಯ ಕೆಲ ವಸತಿ ಗೃಹಗಳಲ್ಲಿ ಉಳಿದು ಬೇರೆ ಬೇರೆ ಮೊಬೈಲ್ ನಂಬರ್​ಗಳಿಂದ ಕರೆ ಮಾಡಿ ವ್ಯಕ್ತಿಗಳನ್ನು ಸಂರ್ಪಸಿ ಅವರಿಂದ ಹಣ ಪಡೆದು ನಂತರ ಆ ವಸತಿ ಗೃಹ ಬಿಟ್ಟು ನಾಪತ್ತೆಯಾಗುತ್ತಿದ್ದ. ಅಲ್ಲದೆ, ಹಳೇ ಸಿಮ್ ಕಾರ್ಡ್ ತೆಗೆದು, ಹೊಸ ಸಿಮ್ಾರ್ಡ್ ಬಳಸುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts