More

    ಚಿತ್ರದುರ್ಗದಲ್ಲಿ ರಾಗಿ ಬೆಳೆಗಾರರ ನೋಂದಣಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ

    ಚಿತ್ರದುರ್ಗ: ರಾಗಿ ಬೆಳೆಗೆ ತಗುಲುವ ಖರ್ಚು-ವೆಚ್ಚಕ್ಕೆ ಹೋಲಿಸಿದರೆ ಪ್ರಸ್ತುತ ನಿಗದಿಪಡಿಸಿರುವ ಬೆಂಬಲ ಬೆಲೆ ಕಡಿಮೆ ಎನಿಸಿದರೂ ಬೆಲೆ ಕುಸಿತ ನಿಯಂತ್ರಣಕ್ಕೆ ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿಸುವ ಸರ್ಕಾರ ನಿರ್ಧಾರ ಸಹಕಾರಿಯಾಗಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ನಗರದ ರೈತ ಭವನದಲ್ಲಿ ಶನಿವಾರ ರಾಗಿ ಖರೀದಿ ಕೇಂದ್ರಕ್ಕೆ ರೈತರು ಹೆಸರು ನೋಂದಾಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ರೈತರು-ಗ್ರಾಹಕರಿಬ್ಬರ ಹಿತವನ್ನೂ ಸರ್ಕಾರಗಳು ರಕ್ಷಿಸಬೇಕಿದೆ. ರಾಗಿ ಬೆಳೆ ಖರ್ಚಿಗೆ ಈಗ ನಿಗದಿ ಪಡಿಸಿರುವ ಬೆಂಬಲ ಬೆಲೆ ಸಾಲದು. ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರ ಅಪಾರ ನಷ್ಟ ಅನುಭವಿಸುವಂತಾಯಿತು ಎಂದರು.

    ವಿಶ್ವದರ್ಜೆ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚಿತ್ರದುರ್ಗದ ಹತ್ತಿ ಉತ್ತಮ ದರದಲ್ಲಿ ಮಾರಾಟವಾಗಿದೆ. ಅಕಾಲಿಕವಾಗಿ ಮಳೆ ಆಗದಿದ್ದರೆ ರೈತರು ಹತ್ತಿಯಲ್ಲಿ ಇನ್ನಷ್ಟು ಆದಾಯ ನೋಡುತ್ತಿದ್ದರು ಎಂದು ಹೇಳಿದರು.

    ಹತ್ತಿ ಜತೆ ಇನ್ನು ಹಲವು ಬೆಳೆಗಳು ಹಾನಿಯಾದವು. ಸರ್ಕಾರ ಬೆಳೆ ನಷ್ಟಕ್ಕೆ ಪರಿಹಾರ ನೀಡುತ್ತಿದ್ದರೂ, ರೈತರು ಅನುಭವಿಸಿರುವ ನಷ್ಟವನ್ನು ಸಂಪೂರ್ಣ ಭರ್ತಿ ಮಾಡಿ ಕೊಡಲು ಸಾಧ್ಯವಿಲ್ಲವೆಂಬುದು ವಾಸ್ತವ ಎಂದರು.

    ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಆಹಾರ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಕೆ.ಆರ್.ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್‌ಬಾಬು ಬಸ್ತಿಹಳ್ಳಿ, ಹಂಪಯ್ಯನಮಾಳಿಗೆ ಧನಂಜಯ, ತಿಮ್ಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts