More

    ಇಂದಿನಿಂದ ದುನಿಯಾ ಮತ್ತಷ್ಟು ದುಬಾರಿ: ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವು ತುಟ್ಟಿ, ಗ್ರಾಹಕರ ಜೇಬಿಗೆ ಕತ್ತರಿ

    ಬೆಂಗಳೂರು: ಸರ್ಕಾರ ಬದಲಾದರೂ ಕೂಡ ಜನರ ಬವಣೆ ಮಾತ್ರ ಇನ್ನೂ ತಗ್ಗಿಲ್ಲ. ಹೊಸ ಸರ್ಕಾರ ಬಂದರೆ ಬೆಲೆ ಏರಿಕೆಯ ಬಿಸಿ ಕೊಂಚ ತಗ್ಗಬಹುದು ಅಂದುಕೊಂಡಿದ್ದ ಜನರ ನಿರೀಕ್ಷೆ ಇಂದು ಅಕ್ಷರಶಃ ಹುಸಿಯಾಗಿದೆ. ಜನರ ಬದುಕು ಮತ್ತಷ್ಟು ದುಬಾರಿ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಇಂದಿನಿಂದ ದುನಿಯಾ ಇನ್ನಷ್ಟು ದುಬಾರಿಯಾಗಿದ್ದು, ಜನರ ಜೇಬಿನಲ್ಲಿರುವ ಹಣ ಖಾಲಿಯಾಗುವ ವೇಗ ಮತ್ತಷ್ಟು ಹೆಚ್ಚಾಗಲಿದೆ.

    ಇಂದಿನಿಂದ ಪ್ರತಿ ಲೀಟರ್​ ಹಾಲಿನ ದರ 3 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೆ, ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯಲ್ಲೂ ಶೇ. 10 ರಷ್ಟು ಹೆಚ್ಚಳವಾಗಿದೆ. ಇನ್ನು ತರಕಾರಿಗಳ ಬೆಲೆಯಂತೂ ಗಗನಕ್ಕೇರಿದೆ. ಇವುಗಳ ಬೆಲೆಯನ್ನು ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ.

    ಹಿಂದಿನ ಹಾಲಿನ ದರ ಹಾಗೂ ಇಂದಿನಿಂದ ಜಾರಿಯಾದ ಪರಿಷ್ಕೃತ ದರ ಕೆಳಕಂಡಂತಿದೆ.
    1. ನಂದಿನಿ( ಟೋನ್ಡ್ ಹಾಲು)
    * ಹಿಂದಿನ ದರ ಅರ್ಧ ಲೀಟರ್​ಗೆ 20 ಹಾಗೂ ಒಂದು ಲೀಟರ್​ಗೆ 39 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಿದೆ.

    2. ನಂದನಿ (ಡಬಲ್ ಟೋನ್ಡ್ ಹಾಲು)
    * ಹಿಂದಿನ ಹಾಲಿನ ದರ ಅರ್ಧ ಲೀಟರ್​ 19 ಹಾಗೂ ಒಂದು ಲೀಟರ್‌ಗೆ 38 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್​ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಹೆಚ್ಚಾಗಿದೆ.

    3. ನಂದಿನಿ ಶುಭಂ
    * ಹಿಂದಿನ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್ 45 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್​ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಿದೆ.

    4. ನಂದಿನಿ ಸ್ಪೆಷಲ್
    * ಹಿಂದಿನ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್​ಗೆ 45 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್​ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಹೆಚ್ಚಳವಾಗಿದೆ.

    ಇದನ್ನೂ ಓದಿ: 25 ಲಕ್ಷ ರೂ. ಹೂಡಿಕೆ ಮಾಡಿದರೆ 36 ಲಕ್ಷ ರೂ. ಕೊಡುವುದಾಗಿ ಹೇಳಿ ವಂಚನೆ; ಪ್ರಕರಣ ದಾಖಲು

    5. ನಂದಿನಿ ( ಸಮೃದ್ಧಿ)
    * ಹಿಂದಿನ ದರ ಅರ್ಧ ಲೀಟರ್​ಗೆ 24 ಹಾಗೂ ಒಂದು ಲೀಟರ್​ಗೆ 48 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್​ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಿದೆ.

    6. ನಂದಿನಿ ಹಸುವಿನ ಹಾಲು
    * ಹಿಂದಿನ ದರ ಅರ್ಧ ಲೀಟರ್​ಗೆ 22 ಹಾಗೂ ಲೀಟರ್‌ಗೆ 44 ರೂಪಾಯಿ.
    * ಇಂದಿನ ದರ ಅರ್ಧ ಲೀಟರ್​ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ ಹೆಚ್ಚಾಗಿದೆ.

    ಜೇಬು ಸುಡಲಿದೆ ಹೋಟೆಲ್​ ಬಿಲ್​​

    ಇಂದಿನಿಂದ ರಾಜ್ಯದ ಎಲ್ಲ ಹೋಟೆಲ್​ಗಳ ಮೆನು ಕೂಡ ಬದಲಾಗಲಿದೆ. ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಹೋಟೆಲ್ ತಿಂಡಿ ತಿನಿಸುಗಳ ದರ ಹೆಚ್ಚಳವು ಆಗಿದೆ. ಇಂದಿನಿಂದ ಶೇ. 5 ರಿಂದ 10 ರವರೆಗೆ ದರ ಏರಿಕೆ ಆಗಲಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆ ದರ ಹೆಚ್ಚಳ ಅನಿವಾರ್ಯ ಎಂದು ಹೋಟೆಲ್​ ಮಾಲೀಕರ ಸಂಘ ಸ್ಪಷ್ಟನೆ ನೀಡಿದೆ.

    ಟೀ, ಕಾಫಿ ದರ 2 ರಿಂದ 8 ರೂ. ವರೆಗೆ ಏರಿಕೆಯಾದರೆ, ರೈಸ್ ಬಾತ್​ನ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಲಿದೆ. ಊಟದ ಮೇಲೆ 15 ರಿಂದ 30 ರೂ. ವರೆಗೂ ಏರಿಕೆಯಾಗಲಿದೆ.

    ತರಕಾರಿ ಬಲು ತುಟ್ಟಿ

    ಬೆಲೆ ಏರಿಕೆಯಿಂದ ಅಡುಗೆ ಮನೆಗೆ ರೆಡ್ ಅಲರ್ಟ್ ಘೋಷಿಸಿದಂತಾಗಿದೆ. ಅತ್ತ ಹಾಲಿನ ದರ, ಇತ್ತ ಹೋಟೆಲ್ ತಿನಿಸು ದುಪ್ಪಟ್ಟು. ಇನ್ನು ಮಾರುಕಟ್ಟೆ ಕಡೆ ಹೋದರೆ ಅಲ್ಲಿ ತರಕಾರಿ ದರ ಕೇಳಿದ್ರೆ ತಲೆ ಸುತ್ತೋದಂತು ಗ್ಯಾರಂಟಿ. ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟಗಾಗಿದೆ. ಬೆಲೆ ಏರಿಕೆಯಿಂದ ಸಿಲಿಕಾನ್​ ಸಿಟಿ ಮಂದಿ ಕಂಗಾಲಾಗಿದ್ದಾರೆ.

    ಇನ್ನೂ ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? (ಕೆಜಿಗಳಲ್ಲಿ)
    * ಟೊಮ್ಯಾಟೊ – 150 ರೂಪಾಯಿ
    * ಮೆಣಸಿನಕಾಯಿ – 50 ರೂಪಾಯಿ
    * ಕ್ಯಾರೆಟ್ – 50 ರೂಪಾಯಿ
    * ಶುಂಟಿ -100 ರೂಪಾಯಿ
    * ಹುರಳಿಕಾಳು – 125 ರೂಪಾಯಿ
    * ಬದನೆಕಾಯಿ- 60 ರೂಪಾಯಿ
    * ಹುಕೋಸು- 50 ರೂಪಾಯಿ
    * ಸೌತೆಕಾಯಿ- 40 ರೂಪಾಯಿ
    * ಡಬ್ಬಲ್ ಬೀನ್ಸ್- 240 ರೂಪಾಯಿ
    * ಬಟಾಣಿ -198 ರೂಪಾಯಿ
    * ನುಗ್ಗೇಕಾಯಿ- 65 ರೂಪಾಯಿ
    * ನವಿಲಿಕೋಸು- 80 ರೂಪಾಯಿ
    * ಅವರೇಬೇಳೆ – 250 ರೂಪಾಯಿ
    * ಬೆಂಡೆಕಾಯಿ- 70 ರೂಪಾಯಿ
    * ಬೆಳ್ಳುಳ್ಳಿ – 150 ರೂಪಾಯಿ
    * ಸಬ್ಬಕ್ಕಿ/ನುಗ್ಗೆ ಸೊಪ್ಪು – 100 ರೂಪಾಯಿ
    * ಕೊತ್ತಂಬರಿ ಸೊಪ್ಪು – 90 ರೂಪಾಯಿ
    * ಕೆಂಪು ಎಲೆಕೋಸು – 100 ರೂಪಾಯಿ
    *ಹೆಸರು ಮೊಳಕೆ ಕಾಳು – 100 ರೂಪಾಯಿ
    * ಕರಿಬೇವು – 50 ರೂಪಾಯಿ
    * ಸುವರ್ಣಗಡ್ಡೆ – 75 ರೂಪಾಯಿ
    * ಹಾಗಲಕಾಯಿ – 60 ರೂಪಾಯಿ

    ಡ್ರ್ಯಾಗನ್​ ಫ್ರೂಟ್ಸ್​ ನಿಯಮಿತ ಸೇವನೆಯಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ

    ಪರಿಶಿಷ್ಟರ ಕಲ್ಯಾಣ ಗ್ಯಾರಂಟಿ: ಗ್ಯಾರಂಟಿ ಯೋಜನೆಗಳಿಗೆ 11000 ಕೋಟಿ ರೂ. ಎಸ್​ಸಿಎಸ್​ಪಿ ಟಿಎಸ್​ಪಿ ಅನುದಾನ

    ಖಾಲಿಯಾಗುತ್ತಿದೆ ಆಲೂಗಡ್ಡೆ ಕಣಜ!; ನಿಧಾನವಾಗಿ ಕಣ್ಮರೆ ಆಗುತ್ತಿರುವ ಬೆಳೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts