More

    ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಗಮ್ಮತ್ತು: ಖರೀದಿದಾರರ- ರೈತರು ಸಮಾಗಮ

    ಬೆಂಗಳೂರು: ರೈತರು- ಖರೀದಿದಾರರ ಸಮಾಗಮ, ಬಾಯಲ್ಲಿ ನಿರೂರಿಸುವ ಸಿರಿಧಾನ್ಯಗಳಿಂದ ತಯಾರಿಸಿರುವ ತರಹೇವಾರಿ ಆಹಾರಗಳ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ದೇಶೀಯ ಮಾರುಕಟ್ಟೆ ಬಲವರ್ಧನೆ, ರ್ತು ಉತ್ತೇಜನ, ಸಿಹಿತಿನಿಸು ತಿಂದು ಸಂಭ್ರಮಿಸಿದ ಜನರು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕುನೂಗ್ಗಲು…

    ‘ಸಿರಿಧಾನ್ಯ ಮತ್ತು ಸಾವಯವ: ಪರಂಪರೆಯ ಕೃಷಿ- ಭವಿಷ್ಯದ ಪೋಷಣೆ’ ಪರಿಕಲ್ಪನೆಯಡಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಇಲಾಖೆ, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಶುಕ್ರವಾರ ಕಂಡುಬಂದ ಚಿತ್ರಣವಿದು.

    ರಾಗಿ, ಹಾರಕ, ಸಾಮೆ, ಊದಲು, ಕೊರಲು, ಬರಗು, ನವಣೆ ಸೇರಿ ವಿವಿಧ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ತಿನಿಸುಗಳು ಜನರನ್ನು ಆಕರ್ಷಿಸುತ್ತಿವೆ. ಸಿರಿಧಾನ್ಯದಿಂದ ತಯಾರಿಸಿದ್ದ ಚಕ್ಕುಲಿ, ರಾಗಿ ಲಡ್ಡು, ನವಣೆ ಶ್ಯಾವಿಗೆ, ರಾಗಿ ಅಂಬಲಿ, ಸಜ್ಜೆ ಅಂಬಲಿ, ಮೈಸೂರು ದೋಸೆ, ಮೆಣಸು ಪೊಂಗಲ್, ಮಿಲೆಟ್ ಮುರುಕ್ಕು, ಮಿಲೆಟ್ ಖಾರಾ ಚಿವ್ಹಾ, ಮಿಲೆಟ್ಸ್ ಬೈಟ್ಸ್, ಮಿಲೆಟ್ಸ್ ಸಿಹಿ ಚಿವ್ಹಾ ಸೇರಿ ಇತರ ತಿನಿಸುಗಳನ್ನು ತಿಂದು ಖುಷಿಪಟ್ಟರು.

    ಪಾಲಿಶ್ ರಹಿತ ಧಾನ್ಯ ಚಟ್ನಿಪುಡಿ, ಉಪ್ಪಿನಕಾಯಿ, ಕೈಮಗ್ಗ, ಖಾದಿ, ಕರಕುಶಲ ಉತ್ಪನ್ನ, ನವಣೆ ಬಿಸಿ ಬೇಳೆಬಾತ್, ಸಾಮೆ ಪೊಂಗಲ್, ಊದಲು ಪುಳಿಯೋಗರೆ, ಸಾಮೆ ಒಬ್ಬಟ್ಟು, ನಾಟಿ ಬೆಲ್ಲದ ಟೀ, ಕಾಫಿ ಉತ್ಪನ್ನಗಳ ಪ್ರಾತ್ಯಕ್ಷಿಕೆ ಸ್ಥಾಪಿಸಲಾಗಿದೆ. ಹಿಟ್ಟು, ರವಾ, ಶಾವಿಗೆ, ಪಾಸ್ತಾ, ಮಾಲ್ಟ್‌ಪುಡಿ, ಬೇಕರಿ ಉತ್ಪನ್ನಗಳು, ಕುಕೀಸ್, ಲಡ್ಡು, ಮುರುಕು, ನಿಪ್ಪಟ್ಟು, ಪಾಪಡ್, ಬೇಯಿಸಲು ಸಿದ್ಧವಾಗಿರುವ ಮಿಶ್ರಣಗಳ ದೋಸೆ, ಇಡ್ಲಿ, ಉಪ್ಪಿಟ್ಟು, ಬಿಸಿಬೇಳೆ ಬಾತ್, ಪಾಯಸ, ಕಿಚಡಿ ಜನಾಕರ್ಷಣೆಯ ಕೇಂದ್ರವಾಗಿವೆ.

    ಮೇಳವು ರೈತರ, ಖರೀದಿದಾರರ, ಮಾರಾಟಗಾರರ ಸಮಾಗಮಕ್ಕೆ ಸಾಕ್ಷಿಯಾಯಿತು. ನಾಡಿನ ಸಿರಿಧಾನ್ಯ ಆಹಾರ ಪದಾರ್ಥಗಳ ಜತೆಗೆ ಹೊರ ರಾಜ್ಯಗಳ ಸಿರಿಧಾನ್ಯಗಳ ಆಹಾರ ಪದಾರ್ಥಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಿರಿಧಾನ್ಯಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಆರಂಭದ ದಿನದಂದೇ ಮಳಿಗೆಗಳಲ್ಲಿ ಜನಸಾಗರವೇ ಹರಿದುಬಂತು. ಕೃಷಿ ವಿವಿಯ ಕಾಲೇಜು ವಿದ್ಯಾರ್ಥಿಗಳು ಮಳಿಗೆಗಳಿಗೆ ಭೇಟಿ ನೀಡಿ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿರುವುದು ವಿಶೇಷವಾಗಿತ್ತು. ರಾಜ್ಯದ ಸಾವಯವ ಕೃಷಿ ನೀತಿ, ಸುಸ್ಥಿರ ಪದ್ಧತಿಗಳು, ತಾಂತ್ರಿಕತೆಗಳು, ಸಿರಿಧಾನ್ಯ ಉತ್ಪನ್ನಗಳ ವೈವಿಧ್ಯಮ ತಿನಿಸುಗಳನ್ನು ಪ್ರದರ್ಶಿಸಲಾಗಿದೆ.

    ಭ್ರಷ್ಟಾಚಾರ ಪೊಲೀಸ್ ಇಲಾಖೆ ಘನತೆಗೆ ಧಕ್ಕೆ; ಪೊಲೀಸ್ ಆಯುಕ್ತ ಬಿ. ದಯಾನಂದ್ ಬೇಸರ

    400ಕ್ಕೂ ಅಧಿಕ ಮಳಿಗೆಗಳು
    ಮೇಳದಲ್ಲಿ ಅಂದಾಜು 400ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಣಿಪುರ, ಬಿಹಾರ ಸೇರಿ 17 ರಾಜ್ಯಗಳಿಂದ ಸಿರಿಧಾನ್ಯ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಿರಿಧಾನ್ಯ ಮತ್ತು ಸಾವಯವ ಆಹಾರ ಮಳಿಗೆ, ಅಂತಾರಾಷ್ಟ್ರೀಯ ಮತ್ತು ಮಾರುಕಟ್ಟೆದಾರರ ಸಭೆ, ಗ್ರಾಹಕರ ಸಂಪರ್ಕ, ರೈತರ ಕಾರ್ಯಾಗಾರ ಪೆವಿಲಿಯನ್ ಸ್ಥಾಪಿಸಲಾಗಿದೆ. ಸಾವಯವ ಮತ್ತು ನೈಸರ್ಗಿಕ ಉತ್ಪಾದಕರು, ಸಗಟು, ಚಿಲ್ಲರೆ ವ್ಯಾಪಾರಿಗಳು, ಸ್ವಸಹಾಯ ಗುಂಪುಗಳು, ರ್ತದಾರರು ಮತ್ತು ಆಮದುದಾರರು ಸೇರಿ ವ್ಯಾಪಾರ ಮತ್ತು ಉತ್ತೇಜನ, ಜ್ಞಾನ ಹಂಚಿಕೆ ವೇದಿಕೆ, ಸಿರಿಧಾನ್ಯ ಸಮ್ಮೇಳನ, ರೈತರ ಕಾರ್ಯಾಗಾರಗಳು, ಬಿ2ಬಿ, ಖರೀದಿದಾರರು ಮತ್ತು ಮಾರಾಟಗಾರರ ಭೇಟಿ, ಗ್ರಾಹಕ ಸಂಪರ್ಕ ಕಾರ್ಯಕ್ರಮ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

    ರೈತರು ಭೇಟಿ
    ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ಮಳಿಗೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯತ್ತಿದ್ದರು. ಸಾರ್ವಜನಿಕರು ಸೇರಿ ವಿದ್ಯಾರ್ಥಿಗಳು ಮಳಿಗೆ ಮುಂಭಾಗ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ವಿವಿಯ ವಿಜ್ಞಾನಿಗಳು, ಸಿರಿಧಾನ್ಯ ಮತ್ತು ನೈಸರ್ಗೀಕ ಕೃಷಿಯ ಬಗ್ಗೆ ಕನ್ನಡದಲ್ಲೇ ವಿವರಿಸಿದರು. ‘ಭಾರತದ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವ’, ಸಾವಯುವ ಕೃಷಿ ಪ್ರಾಮುಖ್ಯತೆ ಮತ್ತದರ ಸವಾಲುಗಳು, ಮೌಲ್ಯವರ್ಧನೆಯಲ್ಲಿ ಯುವ ನವೋದ್ಯಮಿಗಳು ಪಾತ್ರ ಸೇರಿ ಹಲವು ವಿಚಾರಗಳ ಕುರಿತು ತಜ್ಞರು ಬೆಳಕು ಚೆಲ್ಲಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts