More

    ನಮ್ಮ ಮೆಟ್ರೋದಿಂದ ಮತ್ತೊಂದು ಮೈಲಿಗಲ್ಲು: 1184 ಮೀ.​ ಸುರಂಗ ಕೊರೆದು ಹೊರಬಂದ TBM ತುಂಗಾ

    ಬೆಂಗಳೂರು: ಸುರಂಗ ಕೊರೆಯುವ ಯಂತ್ರ ಟಿಬಿಎಂ ತುಂಗಾ” 1184 ಮೀಟರ್​ ದೂರದ ಸುರಂಗವನ್ನು ಕೊರೆದು ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ನಿಲ್ದಾಣದಲ್ಲಿ ಇಂದು (ಡಿ.06) ಯಶಸ್ವಿಯಾಗಿ ಹೊರಬಂದಿದೆ. ಈ ಮೂಲಕ ನಮ್ಮ ಮೆಟ್ರೋಗೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಟಿಬಿಎಂ ತುಂಗಾ ಎರಡನೇ ಪ್ರಗತಿಯನ್ನು ಸಾಧಿಸಿದೆ.

    2022ರ ಅಕ್ಟೋಬರ್ 31ರಂದು ವೆಂಕಟೇಶಪುರ ನಿಲ್ದಾಣದಿಂದ ತುಂಗಾ ಟಿಬಿಎಂ ಕಾಮಗಾರಿಯನ್ನು ಆರಂಭಿಸಿತ್ತು. ಇಂದು (ಡಿ.06) ಅರೇಬಿಕ್ ಕಾಲೇಜು ಬಳಿಯ ಕಾಡುಗೊಂಡನಹಳ್ಳಿ (ಕೆ.ಜಿ ಹಳ್ಳಿ) ನಿಲ್ದಾಣದಲ್ಲಿ 1184.4ಮೀ ಕಾಮಗಾರಿಯನ್ನು ಪೂರ್ಣಗೊಳಿಸಿ ಹೊರಬಂದಿದೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಜರ್ಮನ್ ನಿರ್ಮಿತ ತುಂಗಾ ಟಿಬಿಎಂ ಯಂತ್ರವನ್ನು ಮೊದಲ ಬಾರಿಗೆ 2021ರ ಜುಲೈ 23ರಂದು ನಗರದಲ್ಲಿ ಪ್ರಾರಂಭಿಸಲಾಯಿತು. ಮೊದಲ ಕಾರ್ಯಾಚರಣೆಯಲ್ಲಿ ವೆಂಕಟೇಶಪುರ ಮತ್ತು ಟ್ಯಾನರಿ ರಸ್ತೆಯ ನಡುವೆ 1,260 ಮೀಟರ್ ಸುರಂಗವನ್ನು ಕೊರೆಯಲು 13 ತಿಂಗಳುಗಳನ್ನು ತೆಗೆದುಕೊಂಡಿತು. ತನ್ನ ಎರಡನೇ ಕಾರ್ಯಯೋಜನೆಯನ್ನು 2022ರ ಅ.31ರಂದು ಪ್ರಾರಂಭಿಸಿ, ಇಂದು ಯಶಸ್ವಿಯಾಗಿ ಮುಗಿಸಿದೆ. ಈ ಯಂತ್ರವು 401 ದಿನಗಳಲ್ಲಿ 1,184.4 ಮೀಟರ್‌ ದೂರದ ಸುರಂಗವನ್ನು ಕೊರೆದಿದೆ. ದಿನಕ್ಕೆ ಸರಾಸರಿ 2.99 ಮೀಟರ್‌ಗಳನ್ನು ಕೊರೆದಿದೆ.

    ಬಿಎಂಆರ್​ಸಿಎಲ್​ ಪಿಂಕ್ ಲೈನ್‌ನಲ್ಲಿ 20.99 ಕಿಮೀ ಸುರಂಗ ಮಾರ್ಗವನ್ನು ಕೊರೆಯಲು ನಿಯೋಜಿಸಿರುವ ಒಂಬತ್ತು ಯಂತ್ರಗಳಲ್ಲಿ ತುಂಗಾ ಕೂಡ ಒಂದು. ಇವುಗಳಲ್ಲಿ ಏಳು ಯಂತ್ರಗಳಾ ಉರ್ಜ, ವರದ, ಅವ್ನಿ, ಲವಿ, ವಿಂಧ್ಯಾ, ವಾಮಿಕಾ ಮತ್ತು ರುದ್ರ ತಮ್ಮ ಕೆಲಸವನ್ನು ಮುಗಿಸಿವೆ. ಇದೀಗ ತುಂಗಾ ಕೂಡ ತನ್ನ ಕೆಲಸವನ್ನು ಪೂರ್ತಿ ಮಾಡಿದೆ. ವೆಂಕಟೇಶಪುರ ಮತ್ತು ಕೆ.ಜಿ.ಹಳ್ಳಿ ನಡುವಿನ 1,186 ಮೀಟರ್ ದೂರದ ಕಾಮಗಾರಿ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಸ್ತುತ ಪ್ರಗತಿಯೊಂದಿಗೆ ಒಟ್ಟು 20992 ಮೀಟರ್‌ಗಳಲ್ಲಿ 18832.30 ಮೀ ಅಂದರೆ ಶೇ 89.70% ರಷ್ಟು ಸುರಂಗ ಮಾರ್ಗದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪಿಂಕ್ ಲೈನ್‌ನ 12 ಭೂಗತ ನಿಲ್ದಾಣಗಳಲ್ಲಿ ಕೆಲಸವು ವೇಗದಲ್ಲಿ ನಡೆಯುತ್ತಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

    ಸಾಫ್ಟ್‌ವೇರ್ ಉದ್ಯೋಗ ಬಿಡಿ ಲೆಹೆಂಗಾ ಮಾರಾಟ ಮಾಡಿ.. ಪದವೀಧರನ ಸಲಹೆಗೆ ಬೆಚ್ಚಿಬಿದ್ದ ನೆಟ್ಟಿಗರು..

    ಮೂರೂ ರಾಜ್ಯಗಳ ಸಿಎಂ ಸ್ಥಾನಕ್ಕೆ ಹೊಸ ಮುಖಗಳು! ಬಿಜೆಪಿ ಹಿಂದಿರುವ ಲೆಕ್ಕಾಚಾರಗಳೇನು?

    ಅದಾನಿ ಆಸ್ತಿ 88,000 ಕೋಟಿ ರೂ.ಹೆಚ್ಚಳ; ಬಿಲಿಯನೇರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನ, ಸಂಪತ್ತು ಹೆಚ್ಚಾಗೋಕೆ ಕಾರಣ ಇದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts