More

    ಜನಸಹಭಾಗಿತ್ವದಿಂದ ಯೋಜನೆ ಫಲಪ್ರದ

    ಮಂಜೇಶ್ವರ: ಜನಸಹಭಾಗಿತ್ವ ಖಾತ್ರಿಪಡಿಸಿದಾಗ ಮಾತ್ರ ಯಾವುದೇ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
    ಮಂಜೇಶ್ವರ ಮೊರತ್ತಣೆಯಲ್ಲಿ ಶನಿವಾರ ಮಂಜೇಶ್ವರಂ ಇನಿಶಿಯೇಟಿವ್ ಫಾರ್ ಲೋಕಲ್ ಎಂಪವರ್‌ಮೆಂಟ್(ಮೈಲ್ಸ್) ಯೋಜನೆ ಉದ್ಘಾಟಿಸಿ ಮಾತನಾಡಿದರು.
    ಗ್ರಾಮಸಭೆಗಳು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಶಕ್ತಿಶಾಲಿ ಸಭೆಯಾಗಿದ್ದು, ಆಯಾ ಪ್ರದೇಶದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗ್ರಾಮಸಭೆಗಳಲ್ಲಿ ಸಮಗ್ರ ಚರ್ಚೆಗೊಳಗಾಗಿ ಜಾರಿಗೊಳ್ಳುವಂತಾದಾಗ ಮಾತ್ರ ತಳಮಟ್ಟದ ಜನರನ್ನು ತಲುಪಲು ಸಾಧ್ಯ ಎಂದರು.
    ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಮಿತ್ ಚೆನ್ನಿತ್ತಲ ಪ್ರಾಸ್ತಾವಿಕ ಮಾತನಾಡಿದರು.ಅಪರ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಶಾಸಕ ಎ.ಕೆ.ಎಂ ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ, ಕುಂಬಳೆ ಗ್ರಾಪಂ ಅಧ್ಯಕ್ಷೆ ತಾಹಿರಾ ಯೂಸುಫ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್. ಸೋಮಶೇಖರ, ವೋರ್ಕಾಡಿ ಗ್ರಾಪಂ ಅಧ್ಯಕ್ಷೆ ಎಸ್ ಭಾರತಿ, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಜೀನ್ ಲೆವಿನೋ ಮೊಂತಾರೊ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ, ಪೈವಳಿಕೆ ಗ್ರಾಪಂ ಅಧ್ಯಕ್ಷೆ ಕೆ.ಜಯಂತಿ, ಮಂಗಲ್ಪಾಡಿ ಗ್ರಾಪಂ ಪ್ರಭಾರ ಅಧ್ಯಕ್ಷ ಯೂಸುಫ್ ಹೇರೂರು, ಜಿಪಂ ಸದಸ್ಯರಾದ ಗೋಲ್ಡನ್ ರಹಮಾನ್, ಜಮೀಲಾ ಸಿದ್ದಿಕ್, ಕಮಲಾಕ್ಷಿ, ನಾರಾಯಣ ನಾಯ್ಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts