More

  ಕೆರೆ ವಿಸ್ತೃತ ಯೋಜನೆ ತಯಾರಿಸಿ

  ಗಂಗಾವತಿ; ತಾಲೂಕಿನ ಸಂಗಾಪುರದ ಶ್ರೀ ಲಕ್ಷ್ಮೀನಾರಾಯಣ ಕೆರೆಯನ್ನು ಅಭಿವೃದ್ಧಿ ಜತೆಗೆ ಪ್ರವಾಸಿ ತಾಣವನ್ನಾಗಿ ರೂಪಿಸುವಂತೆ ಒತ್ತಾಯಿಸಿ ಚಾರಣ ಬಳಗದ ಸದಸ್ಯರು ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಶನಿವಾರ ಮನವಿ ಸಲ್ಲಿಸಿದರು.

  ಇದನ್ನೂ ಓದಿ: ಮೈಸೂರು ಪಾಲಿಕೆ ಬಜೆಟ್: ಪೇ ಆ್ಯಂಡ್ ಪಾರ್ಕಿಂಗ್ ಜಾರಿ, ಕೆರೆ-ಕಲ್ಯಾಣ-ಉದ್ಯಾನಗಳ ಅಭಿವೃದ್ಧಿ

  ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ಮಾತನಾಡಿ, ಕೆರೆಯಲ್ಲಿ ಮುಳ್ಳುಗಂಟಿಗಳು ಬೆಳೆದು ಹೂಳು ತುಂಬಿದೆ. ನೀರು ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

  ಕೆರೆ ಸ್ವಚ್ಛಗೊಳಿಸಿದರೆ ಸಾವಿರಾರು ಎಕರೆ ಪ್ರದೇಶದ ಭೂಮಿಗೆ ನೀರು ದೊರೆಯುತ್ತದೆ. ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಲಿದ್ದು, ಸುತ್ತಲಿನ ಪ್ರದೇಶದ ಅಂತರ್ಜಲ ಹೆಚ್ಚಾಗಲಿದೆ. ಕೆರೆ ಸುಂದರೀಕರಣದ ಜತೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕಿದೆ.

  ಕೆರೆ ವೀಕ್ಷಿಸಿ ವಿಸ್ತೃತ ಯೋಜನೆ ತಯಾರಿಸುವಂತೆ ಒತ್ತಾಯಿಸಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಅಣ್ಣಪ್ಪ, ವೀರೇಶ ಸುಳೇಕಲ್, ವೀರೇಶ ಬಲಕುಂದಿ, ಪ್ರಲ್ಹಾದ್ ಕುಲಕರ್ಣಿ, ಜಗದೀಶ ಮಾಲಿಪಾಟೀಲ್ ಇತರರಿದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts