More

    ತವರಿಗೆ ಹೊರಟ ಸಂತಸದಲ್ಲಿ ಮೊಳಗಿತು ‘ವಂದೇ ಮಾತರಂ’

    ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಿಂದ ಬುಧವಾರ ಮಧ್ಯಾಹ್ನ ಹೊರಟ ಹುಬ್ಬಳ್ಳಿ- ಜೋಧಪುರ ಶ್ರಮಿಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಧಾರವಾಡ ಜಿಲ್ಲೆಯಿಂದ ರಾಜಸ್ಥಾನ ಮೂಲದ ಒಟ್ಟು 1,452 ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಹೊರಟಿದ್ದಾರೆ.

    ರೈಲ್ವೆ, ಪಾಲಿಕೆ, ಆರೋಗ್ಯ ಇಲಾಖೆ ಸಿಬ್ಬಂದಿ ವಲಸೆ ಕಾರ್ಮಿಕರಿಗೆ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಭಾವೋದ್ರೇಕಗೊಂಡ ಕಾರ್ಮಿಕರು ‘ವಂದೆ ಮಾತರಂ’, ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು. ಗುರುವಾರವೂ ಹುಬ್ಬಳ್ಳಿಯಿಂದ ಮತ್ತೊಂದು ರೈಲು ಜೋಧಪುರಕ್ಕೆ ತೆರಳಲಿದೆ.

    ಇದನ್ನೂ ಓದಿ ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಬುಧವಾರ ಬೆಳಗ್ಗೆಯೇ ಲಗೇಜು ಸಮೇತ ನಿಲ್ದಾಣ ಬಳಿ ಬಂದ ಸಾವಿರಾರು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್​ ಹಾಕಿ ನಿಲ್ದಾಣದ ಒಳಗೆ ಬಿಟ್ಟುಕೊಳ್ಳಲಾಯಿತು. ಪಾರ್ಕಿಂಗ್ ಪ್ರದೇಶದಲ್ಲಿ 15 ಪ್ರತ್ಯೇಕ ಕೌಂಟರ್​ನಲ್ಲಿ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಿದ್ದವರ ಆರೋಗ್ಯವರದಿಯನ್ನು ನೋಂದಾಯಿತ ಗುರುತಿನ ಸಂಖ್ಯೆಯಡಿ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಯಾರಿಗಾದರೂ ಕರೊನಾ ಪಾಸಿಟಿವ್​ ಕಂಡು ಬಂದರೆ ಅವರ ಹಿಸ್ಟರಿ ಕಂಡುಹಿಡಿಯಲು ಇದು ಅನೂಕೂಲ.

    ಇದನ್ನೂ ಓದಿ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!

    ತವರಿಗೆ ಹೊರಟ ಸಂತಸದಲ್ಲಿ ಮೊಳಗಿತು 'ವಂದೇ ಮಾತರಂ'
    ಹುಬ್ಬಳ್ಳಿಯಿಂದ ಶ್ರಮಿಕ ಎಕ್ಸ್ ಪ್ರೆಸ್ ರೈಲಿನ ಮೂಲಕ ರಾಜಸ್ಥಾನಕ್ಕೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಶುಭ ಹಾರೈಸಿದ ಶಾಸಕ ಅರವಿಂದ ಬೆಲ್ಲದ, ಎಂಎಲ್ಸಿ ಪ್ರದೀಪ ಶೆಟ್ಟರ್ ಹಾಗೂ ಅಧಿಕಾರಿಗಳು.

    24 ಬೋಗಿ ಹೊಂದಿರುವ ಈ ರೈಲಿನ 18 ಬೋಗಿಯಲ್ಲಿ ತಲಾ 72 ಕಾರ್ಮಿಕರು, 4 ಬೋಗಿಯಲ್ಲಿ ತಲಾ 38 ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ. ಇನ್ನುಳಿದ 2 ಬೋಗಿಯನ್ನು ಮೀಸಲು ಸ್ಥಿತಿಯಲ್ಲಿ ಇಡಲಾಗಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ಊಟೋಪಚಾರದ ವ್ಯವಸ್ಥೆ ಮಾಡಿದೆ.

    ರೈಲಿನಲ್ಲಿ ತವರಿಗೆ ಹೊರಟ ವಲಸೆ ಕಾರ್ಮಿಕರಿಗೆ ತಹಸೀಲ್ದಾರ್​ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಇತರರು ಶುಭ ಹಾರೈಸಿದರು. ಈ ರೈಲು ಗುರುವಾರ ಮಧ್ಯಾಹ್ನ 2.30ಕ್ಕೆ ಜೋಧಪುರ ತಲುಪಲಿದೆ.

    ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ವಲಸೆ ಕಾರ್ಮಿಕರು

    ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬುಧವಾರ ಮಧ್ಯಾಹ್ನ ರಾಜಸ್ಥಾನಕ್ಕೆ ಹೊರಟಿದ್ದ ಹುಬ್ಬಳ್ಳಿ- ಜೋಧಪುರ ಶ್ರಮಿಕ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಲಗೇಜು ಸಮೇತ ಸಾವಿರಾರು ವಲಸೆ ಕಾರ್ಮಿಕರು ನಿಲ್ದಾಣಕ್ಕೆ ಬಂದ ಪರಿ ಇದು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್​ ಹಾಕಿ ನಿಲ್ದಾಣದ ಒಳಗೆ ಬಿಡುತ್ತಿದ್ದರಿಂದ ಕಾರ್ಮಿಕರು ಸಾಲುಗಟ್ಟಿ ನಿಂತಿದ್ದರು. #Shramik #Hubli #MigrationWorkers #Rajasthan #Train

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 13, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts