More

    ಒತ್ತಡ ಕಡಿಮೆಯಿದ್ದರೆ ಮಧ್ಯದ ಸೀಟುಗಳನ್ನು ಖಾಲಿ ಬಿಡಿ, ಇಲ್ಲವಾದರೆ ಹೀಗೆ ಮಾಡಿ…!

    ನವದೆಹಲಿ: ಮಧ್ಯದ ಸೀಟುಗಳನ್ನು ಖಾಲಿ ಬಿಟ್ಟು ವಿಮಾನದೊಳಗೆ ದೈಹಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಇಲ್ಲವೇ, ಮಧ್ಯದ ಸೀಟ್​ನಲ್ಲಿ ಕೂರುವ ಎಲ್ಲ ಪ್ರಯಾಣಿಕರಿಗೂ ಮಾಸ್ಕ್​ ಮತ್ತು ಶೀಲ್ಡ್​ ಅಲ್ಲದೆ, ಸಂಪೂರ್ಣ ಮೈಮುಚ್ಚುವ ರೀತಿಯ ಗೌನ್​ಗಳನ್ನು ಕೊಡಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾಪ್ರಧಾನ ನಿರ್ದೇಶಕರು (ಡಿಜಿಸಿಎ) ನಿರ್ದೇಶನ ನೀಡಿದ್ದಾರೆ.

    ಪ್ರಯಾಣಿಕರ ಒತ್ತಡ ಮತ್ತು ಸಂಖ್ಯೆ ಕಡಿಮೆಯಿದ್ದಲ್ಲಿ, ವಿಮಾನಯಾನ ಸಂಸ್ಥೆಗಳು ಸಾಧ್ಯವಾದಷ್ಟು ಮಧ್ಯದ ಸೀಟುಗಳು ಖಾಲಿ ಇರುವಂತೆ ನೋಡಿಕೊಳ್ಳಬೇಕು. ಒಂದೇ ಕುಟುಂಬದ ಸದಸ್ಯರಾಗಿದ್ದರೆ, ಮಧ್ಯದ ಸೀಟ್​ ಸೇರಿ ಮೂರು ಸೀಟ್​ಗಳನ್ನು ಭರ್ತಿ ಮಾಡಲು ಅಡ್ಡಿಯಿಲ್ಲ ಎಂದು ಡಿಜಿಸಿಎ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ವಾರ ಮೊದಲೇ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ

    ಕ್ಯಾಬಿನ್​ ಅನ್ನು ಪದೇಪದೆ ಸ್ಯಾನಿಟೈಸ್​ ಮಾಡುವುದು, ಕ್ಯಾಬಿನ್​ನಲ್ಲಿನ ಗಾಳಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವುದು, ಆರೋಗ್ಯದ ದೃಷ್ಟಿಯಿಂದ ಹೊರತುಪಡಿಸಿ ವಿಮಾನದಲ್ಲಿ ಆಹಾರ ಸೇವನೆ ಮತ್ತು ನೀರು ಸೇವನೆಗೆ ನಿರ್ಬಂಧಿಸುವ ಕೆಲಸ ನಿಯಮಗಳನ್ನು ಆದೇಶದಲ್ಲಿ ಪುನರುಚ್ಚರಿಸಲಾಗಿದೆ.

    ಕೋವಿಡ್​-19 ಸಾಂಕ್ರಾಮಿಕ ಹಬ್ಬದಂತೆ ತಡೆಯಲು ದೈಹಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಆದ್ದರಿಂದ, ವಿಮಾನಗಳಲ್ಲಿನ ಮಧ್ಯದ ಸೀಟುಗಳನ್ನು ಭರ್ತಿ ಮಾಡದೆ ಖಾಲಿ ಬಿಟ್ಟು, ದೈಹಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್​ ಇತ್ತೀಚೆಗಿನ ತನ್ನ ಆದೇಶದಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಡಿಜಿಸಿಎ ಈ ಆದೇಶವನ್ನು ಜಾರಿಗೊಳಿಸಿದೆ.

    ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts