More

    ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಮನವಿಗೆ ಸ್ಪಂದಿಸಿದ ಬಿಸಿಯೂಟ ಕಾರ್ಯಕರ್ತೆಯರು; ಪ್ರತಿಭಟನೆ ಹಿಂದಕ್ಕೆ

    ಬೆಂಗಳೂರು: ಶಿಕ್ಷಣ ಸಚಿವರ ಮನವಿಗೆ ಸ್ಪಂದಿಸಿದ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದಿದ್ದಾರೆ. ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲು ಸಚಿವರ ಬಳಿ ಪ್ರತಿಭಟನಾಕಾರರು ಮನವಿ ಮಾಡಿದ್ದರು. ಅದರಂತೆ ಇದೇ ತಿಂಗಳು 13ರಂದು ಸಚಿವರ ಜತೆ ಸಭೆ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ.

    ಬಿಸಿಯೂಟ ಸಂಘಟನೆಯ ಪದಾಧಿಕಾರಿಗಳು ಹಾಗೂ ಪ್ರೌಢಶಿಕ್ಷಣ ಸಚಿವರ ಜತೆ ನಡೆದ ಸಭೆಯಲ್ಲಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಯ ಕುರಿತು ‌ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಚಿವರ ಮನವಿಗೆ ಒಪ್ಪಿ ಕಾರ್ಯಕರ್ತೆಯರು ಪ್ರತಿಭಟನೆ ಕೈಬಿಟ್ಟಿದ್ದಾರೆ.

    ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಬಿಸಿಯೂಟ ಕಾರ್ಯಕರ್ತೆಯರದ್ದು ಪ್ರಮುಖ ಮೂರ್ನಾಲ್ಕು ಬೇಡಿಕೆಗಳಿವೆ. ಬಿಸಿಯೂಟ ಹೊರತು ಪಡಿಸಿ ಬೇರೆ ಕೆಲಸಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ಒಂದು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಗಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಸುವುದನ್ನು ಹೊರತುಪಡಿಸಿ ಕಾರ್ಯಕರ್ತೆಯರನ್ನು ಬೇರೆ ಕೆಲಸಗಳನ್ನು ಮಾಡಿಸಿಕೊಳ್ಳದಂತೆ‌ ಸೂಚಿಸಲಾಗಿದೆ..

    ವೇತನ ಹೆಚ್ಚಿಗೆ ಮಾಡುವ ಕುರಿತು ಈಗಾಗಲೇ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ನಮಗೆ ಎಷ್ಟು ಹೊರೆಯಾಗುತ್ತೋ ಅದನ್ನು ಗಮನಿಸದೇ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.

    ಕೆಲ ಶಾಲೆಗಳಲ್ಲಿ ಎನ್​ಜಿಓ ಮೂಲಕ ಊಟದ ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟ ಖಾಸಗಿಕರಣದ ಕುರಿತು ಯೋಚನೆಗಳಿಲ್ಲ. ಅದು ಆಯಾ ಎಸ್​ಡಿಎಂಸಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts