More

    ಕೇಂದ್ರದಿಂದ ಮಹತ್ವದ ನಿರ್ಧಾರ; ಕನ್ನಡ, ತಮಿಳು ಸೇರಿ 13 ಭಾಷೆಗಳಲ್ಲಿ CAPF ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪರೀಕ್ಷೆ

    ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (CAPF) ಕಾನ್ಸ್‌ಟೇಬಲ್ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಗೃಹ ವ್ಯವಹಾರಗಳ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಅಭ್ಯರ್ಥಿಗಳು ಇನ್ನು ಮುಂದೆ ಕನ್ನಡ, ತೆಲುಗು, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ.

    ಇದನ್ನೂ ಓದಿ: ಚುನಾವಣಾ ಜಾಗೃತಿ ಅಭಿಯಾನಕ್ಕೆ ಎನ್​ಜಿಒ ಸಾಥ್; ​ಸಮುದ್ರ ತೀರ, ರೈಲು, ಬಸ್ಸು, ಸಂತೆಗಳಲ್ಲಿ ಮತದಾರರಿಗೆ ಮನವರಿಕೆ

    ಅವಕಾಶ ಸದುಪಯೋಗಪಡಿಸಿಕೊಳ್ಳಿ

    ಕೇಂದ್ರದ ಈ ಮಹತ್ವದ ನಿರ್ಧಾರದಿಂದ ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಎದುರಿಸಬಹುದಾಗಿದೆ. ಈ ಮೊದಲು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಪ್ರತಿಯೊಂದು ರಾಜ್ಯದ ಯುವಕ-ಯುವತಿಯರು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆಯನ್ನು ಎದುರಿಸುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಎಮ್​ಎಚ್​ಗೆ ಆದೇಶದಲ್ಲಿ ಉಲ್ಲೇಖಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್​-ಬಿಜೆಪಿ ಉತ್ತರ-ದಕ್ಷಿಣ ಗುರಿ; ಹೆಚ್ಚು ಸ್ಥಾನಕ್ಕೆ ಎರಡೂ ಪಕ್ಷಗಳಿಂದ ಸ್ಪಷ್ಟ ಲೆಕ್ಕಾಚಾರ

    ಕನ್ನಡದ ಕೈಂಕರ್ಯಕ್ಕೆ ಬಿಜೆಪಿಯೇ ಭರವಸೆ!

    ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಹಾಗೂ ರೈಲ್ವೆ ಚೀಟಿಗಳನ್ನು ಕನ್ನಡದಲ್ಲಿ ಮೊದಲು ಮುದ್ರಿಸಲು ಆರಂಬಿಸಿದ್ದು ಬಿಜೆಪಿ. ಇದೀಗ CAPF ಕಾನ್ಸ್ಟೇಬಲ್ ಹುದ್ದೆಗಳ ಪರೀಕ್ಷೆಯಲ್ಲೂ ಕನ್ನಡಕ್ಕೆ ಮನ್ನಣೆ ದೊರೆತಿದೆ. ಕನ್ನಡದ ಕೈಂಕರ್ಯಕ್ಕೆ ಬಿಜೆಪಿಯೇ ಭರವಸೆ ಎಂಬುದು ವಿರೋಧಿಗಳಿಗೂ ತಿಳಿದಿದೆ! ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

    ಕ್ರೆಡಿಟ್ ಹೋಗಬೇಕಾದ್ದು ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗಲ್ಲ

    ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ನಮ್ಮ ಹಕ್ಕು. ಅದನ್ನು ಈವರೆಗೆ ನಮಗೆ ನಿರಾಕರಿಸಲಾಗಿತ್ತು. ಈ ತಪ್ಪನ್ನು ನಮ್ಮ ತೀವ್ರ ಪ್ರತಿಭಟನೆಯ ಕಾರಣಕ್ಕೆ ಸರಿಪಡಿಸಲಾಗಿದೆ. ಇದರ ಕ್ರೆಡಿಟ್ ಕನ್ನಡಿಗರು ಮತ್ತು ಭಾಷಾಪ್ರೇಮಿಗಳಿಗೆ ಹೋಗಬೇಕೆ ಹೊರತು, ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗೆ ಅಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದೆ.

    ಇದನ್ನೂ ಓದಿ: ಸರ್ಕಾರಿ ನೌಕರರೇ ಹುಷಾರ್​; ಕರ್ತವ್ಯಕ್ಕೆ ಬಾರದಿದ್ರೆ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts