More

    ಸರ್ಕಾರದ ವಿಡಿಯೋ ಕಾನ್ಫರೆನ್ಸ್​ ವೇಳೆ ಟಾಪ್​ಲೆಸ್​ ಆದ ಮೆಕ್ಸಿಕೋ ಸಂಸದೆ…!

    ಮೆಕ್ಸಿಕೋ: ಕಳೆದ ವಾರ ನಡೆದ ಸರ್ಕಾರಿ ವಿಡಿಯೋ ಕಾನ್ಫರೆನ್ಸ್​ ವೇಳೆ ಉತ್ತರ ಅಮೆರಿಕದ ಮೆಕ್ಸಿಕನ್​ ಸೆನೆಟರ್​ (ಸಂಸದೆ) ಒಬ್ಬರು ಟಾಪ್​ಲೆಸ್​ ಆಗುವ ಮೂಲಕ ಮುಜುಗರಕ್ಕೀಡಾಗಿದ್ದು, ಕ್ಯಾಮೆರಾ ಚಾಲನೆಯಲ್ಲಿರುವುದನ್ನು ತಿಳಿಯದೇ ಬಟ್ಟೆ ಬದಲಾಯಿಸಿದ್ದರಿಂದ ಈ ಪ್ರಸಂಗ ಜರುಗಿದೆ.

    ಇದನ್ನೂ ಓದಿ: ಅಕ್ಕನೊಂದಿಗೆ ಮೊಬೈಲ್​ಗಾಗಿ ಕಿತ್ತಾಡಿದ ಬಾಲಕ ಕೊನೆಗೆ ಏನು ಮಾಡಿದ ಗೊತ್ತೇ?

    ಕರೊನಾ ವೈರಸ್​ ಹಿನ್ನೆಲೆಯಲ್ಲಿ ಒಂದೆಡೆ ಸೇರುವುದು ಸರಿಯಲ್ಲ ಎಂಬ ಕಾರಣದಿಂದ ಮೆಕ್ಸಿಕನ್​ ಸರ್ಕಾರ ಜೂಮ್​ ಆ್ಯಪ್​ನಲ್ಲಿ ಸೆನೆಟರ್​ಗಳೊಂದಿಗೆ ಚರ್ಚೆ ನಡೆಸಲು ವಿಡಿಯೋ ಕಾನ್ಫರೆನ್ಸ್​ ಆಯೋಜಿಸಿತ್ತು. ಈ ವೇಳೆ ಮಾರ್ಥಾ ಸರ್ಕಾರದ ವಿಡಿಯೋ ಕಾನ್ಫರೆನ್ಸ್​ ವೇಳೆ ಟಾಪ್​ಲೆಸ್​ ಆದ ಮೆಕ್ಸಿಕೋ ಸಂಸದೆ...!ಲೂಸಿಯಾ ಮಿಚರ್ (66)​ ಅವರು ಕ್ಯಾಮರಾ ಮುಂದೆಯೇ ಬಟ್ಟೆ ಬದಲಾಯಿಸಿ ಎಲ್ಲರನ್ನೂ ಮುಜಗರಕ್ಕೀಡುಮಾಡಿದರು. ಈ ಬಗ್ಗೆ ಕ್ಷಮೆ ಕೋರಿರುವ ಲೂಸಿಯಾ ತನಗೆ ಅಷ್ಟಾಗಿ ತಾಂತ್ರಿಕ ಜ್ಞಾನವಿಲ್ಲ. ಹೀಗಾಗಿ ಈ ಪ್ರಮಾದ ಜರುಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸ್ಥಳೀಯ ಮಾಧ್ಯಮಗಳ ಪ್ರಕಾರ ಲೆಫ್ಟ್​ ವಿಂಗ್​ ನ್ಯಾಷನಲ್​ ರೀಜನರೇಷನ್ ಮೂವ್ಮೆಂಟ್​ ಪಕ್ಷದ​ ಸುಮಾರು 15 ಸೆನೆಟರ್​ಗಳು ಬ್ಯಾಂಕ್ ಆಫ್ ಮೆಕ್ಸಿಕೊದ ಗವರ್ನರ್​ರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಚರ್ಚಿಸಿದರು.

    ಈ ಬಗ್ಗೆ ಲೂಸಿಯಾ ಅವರು ಬಹಿರಂಗ ಪತ್ರ ಬರೆದಿದ್ದು, ನಿನ್ನೆ ಮುಜುಗರ ಆಗುವಂತಹ ಸನ್ನಿವೇಶ ವಿಡಿಯೋ ಕಾನ್ಫರೆನ್ಸ್ ವೇಳೆ ನಡೆಯಿತು. ನನ್ನ ಸಹೋದ್ಯೋಗಿಗಳು ಮೆಕ್ಸಿಕೋ ಆರ್ಥಿಕ ಪರಿಸ್ಥಿತಿ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಸರಿದಾರಿಗೆ ತರುವ ತಂತ್ರಗಳನ್ನು ಎಣೆಯುತ್ತಿದ್ದರು. ಇದರ ನಡುವೆ ನನ್ನ ಕಂಪ್ಯೂಟರ್​ನ ಕ್ಯಾಮೆರಾ ಆನ್​ ಆಗಿದೆ ಎಂದು ತಿಳಿಯದೇ ನಾನು ಬಟ್ಟೆ ಬದಲಾಯಿಸಿದೆ. ನನ್ನ ಪ್ರಮಾದವನ್ನು ತಕ್ಷಣ ಸಹೋದ್ಯೋಗಿಗಳು ಕರೆ ಮಾಡಿ ತಿಳಿಸಿದರು. ನನ್ನ ತಪ್ಪಿಗೆ ಕ್ಷಮೆ ಇರಲಿ, ನನಗೆ ಅಷ್ಟಾಗಿ ತಾಂತ್ರಿಕ ಜ್ಞಾನವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನಾಲ್ಕು ತಿಂಗಳ ಹಿಂದೆ ಕಾಣೆಯಾದ ಪತ್ನಿ, ಮಕ್ಕಳಿಗಾಗಿ ವ್ಯಕ್ತಿಯ ಅಲೆದಾಟ: ಕಣ್ತೆರೆಯದ ಪೊಲೀಸರು!

    ಇತ್ತ ಲೂಸಿಯಾ ಟಾಪ್​ಲೆಸ್​ ಸ್ಕ್ರೀನ್​ ಶಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ವಿಶೇಷವೆಂದರೆ ಲೂಸಿಯಾ ಅವರು ಲಿಂಗ ಸಮಾನತೆಯ ರಾಜ್ಯ ಆಯೋಗದ ಅಧ್ಯಕ್ಷೆಯು ಆಗಿದ್ದು, ತನ್ನ ದೇಹದ ಬಗ್ಗೆ ನಾನು ನಾಚಿಕೆ ಪಟ್ಟುಕೊಳ್ಳುವುದಿಲ್ಲ ಎಂದು ಟೀಕಾಕಾರರಿಗೆ ಖಡಕ್​ ಉತ್ತರ ನೀಡಿದ್ದಾರೆ. ಕೆಲವರು ಲೂಸಿಯಾ ಬೆನ್ನಿಗೆ ನಿಂತಿದ್ದಾರೆ. (ಏಜೆನ್ಸೀಸ್​)

    ಕೋವಿಡ್​ ರೋಗಿಗಳಿಗೆ ಮಲೇರಿಯಾ ಮದ್ದು; ಪರೀಕ್ಷೆ ಮುಂದುವರಿಸಿದ ವಿಶ್ವ ಆರೋಗ್ಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts