More

    ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿತ: ಬೆಂಗಳೂರಲ್ಲಿ ತಾಯಿ-ಮಗು ದುರ್ಮರಣ

    ಬೆಂಗಳೂರು: ನಾಗವಾರ ಬಳಿ ಮಂಗಳವಾರ ಬೆಳಗ್ಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದ ದುರ್ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ತಾಯಿ-ಮಗು ಮೃತಪಟ್ಟಿದ್ದಾರೆ.

    ಹೊರಮಾವಿನ ಮುಖ್ಯರಸ್ತೆಯಲ್ಲಿರುವ ಡಿಎಸ್​ ಮ್ಯಾಕ್ಸ್​ ಅಪಾರ್ಟ್​ಮೆಂಟ್​ನ ನಿವಾಸಿ ತೇಜಸ್ವಿನಿ (26) ಮತ್ತು ವಿಹಾನ್ (ಎರಡೂವರೆ ವರ್ಷ) ಮೃತರು.

    ಗದಗ ಮೂಲದ ಲೋಹಿತ್​ ಕುಮಾರ್​ ಮತ್ತು ತೇಜಸ್ವಿನಿ ದಂಪತಿ ಇಬ್ಬರೂ ಬೆಂಗಳೂರಿನಲ್ಲಿ 10 ವರ್ಷಗಳಿಂದ ವಾಸವಿದ್ದರು. ಇಬ್ಬರೂ ಸಿವಿಲ್ ಇಂಜಿನಿಯರ್​ ಆಗಿದ್ದರು. ಮಕ್ಕಳಿಬ್ಬರನ್ನೂ ಬೇಬಿ ಸಿಟ್ಟಿಂಗ್​ಗೆ ಬಿಟ್ಟು, ಪತ್ನಿಯನ್ನ ಕಂಪನಿ ಬಳಿ ಡ್ರಾಪ್​ ಮಾಡಿ ಬಳಿ ತಾನೂ ಕೆಲಸಕ್ಕೆ ಹೋಗಲೆಂದು ಪತ್ನಿ-ಮಕ್ಕಳನ್ನು ಬೈಕ್​ನಲ್ಲಿ ಲೋಹಿತ್ ಕರೆದುಕೊಂಡು ಹೋಗುತ್ತಿದ್ದರು. ದುರಾದೃಷ್ಟವಶಾತ್​ ಚಲಿಸುತ್ತಿದ್ದ ಬೈಕ್​ ಮೇಲೆ ಮೆಟ್ರೋ ಪಿಲ್ಲರ್​ ಕುಸಿದಿದ್ದು, ನಾಲ್ವರೂ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಇವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ಮೃತಪಟ್ಟಿದ್ದಾರೆ. ಲೋಹಿತ್​ ಮತ್ತು ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

    ಅತ್ತ ತಾಯಿ-ಮಗು ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

    ‘ನಮ್ಮ ಮೆಟ್ರೋ’ ಪಿಲ್ಲರ್​ ದುರಂತ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ

    ಕನಕಪುರದಲ್ಲಿ ಶಾಲಾ ಬಸ್​ಗೆ ಬಾಲಕಿ ಬಲಿ! ತರಗತಿ ಮುಗೀತು ಮನೆಗೆ ಹೋಗಿ ಅಮ್ಮನ ಮಡಿಲು ಸೇರಬೇಕು ಅನ್ನುವಷ್ಟರಲ್ಲಿ ಘೋರ ದುರಂತ…

    ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts