More

    ಕ್ರೀಡೆಗಳಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ

    ರಬಕವಿ/ಬನಹಟ್ಟಿ: ಕ್ರೀಡೆಗಳಿಂದ ಮಕ್ಕಳ ಮಾನಸಿಕ, ದೈಹಿಕ ಸದೃಢತೆ ಸಾಧ್ಯ. ಹೀಗಾಗಿ ನಮ್ಮ ಸಂಸ್ಥೆ ಮಕ್ಕಳಿಗೆ ಹೆಚ್ಚಿನ ಕ್ರೀಡಾ ಸಾಧನೆಗೆ ಅವಕಾಶ ಕಲಿಸುತ್ತಿದ್ದೇವೆ. ಪಿಯುಸಿ ವ್ಯಾಸಂಗದಲ್ಲಿರುವ ಸ್ವಾತಿ ಮುಳವಾಡ ಜೋಡು ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಸಂದ ಗೌರವ ಎಂದು ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ಮೇಣಿ ತಿಳಿಸಿದರು.

    ಕ್ರೀಡೆಯಲ್ಲಿ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು. ಹೈಜಂಪ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ರೋಹನ್ ಗಾಡಿವಡ್ಡರ ಸಾಧನೆಯನ್ನು ಪ್ರಶಂಸಿಸಿದ ಅವರು, ಕ್ರೀಡೆಗಳಲ್ಲಿ ಸಾಧನೆ ಮೆರೆದ ಸಾಧಕರಿಗೆ ಇಂದು ಎಲ್ಲಿಲ್ಲದ ಗೌರವ ಸಿಗುತ್ತಿದೆ. ಕ್ರೀಡಾಪಟುಗಳಿಗೆ ದೇಶದ ಉದ್ದಗಲಕ್ಕೂ ಪ್ರೋತ್ಸಾಹ ದೊರೆಯುತ್ತಿದೆ. ಸರ್ಕಾರಗಳೂ ಅಂಥ ಪ್ರತಿಭೆಗಳಿಗೆ ಸೂಕ್ತ ಮನ್ನಣೆ ನೀಡುತ್ತಿರುವುದರಿಂದ ಇದರ ಪ್ರಯೋಜನವನ್ನು ಎಲ್ಲ ಕ್ರೀಡಾಳುಗಳು ಪಡೆದುಕೊಳ್ಳಬೇಕೆಂದರು.

    ರಾಮಣ್ಣ ಸಿಂಗನ್, ಆರ್.ಎಸ್. ಕಂಕಣವಾಡಿ, ಶಿವಾನಂದ ಕರಡಿ, ಪ್ರಾಚಾರ್ಯ ಎ.ಕೆ. ಕಾಡದೇವರ, ಎ.ಎಚ್. ಬಾಗೇನ್ನವರ, ಎಸ್.ಬಿ. ಬಸಗೊಂಡನವರ, ಎಸ್.ಬಿ. ಹಟ್ಟಿ, ಬಿ.ಆರ್. ಬಾಗಲಕೋಟ, ಎಂ.ಎಸ್. ಉಮದಿ, ಆರ್.ಎಸ್. ಮಟ್ಟಿಕಲ್ಲಿ, ಎಲ್.ಜಿ. ಹುಲಕುಂದ, ವಿ.ಎ. ಲಠೆ, ಎ.ಎಸ್. ಗುಟ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts