More

    ಕೊನೆಯ ದಿನಗಳಲ್ಲಿ ಬಾಧಿಸುವ ಮುಟ್ಟಿನ ನೋವುಗಳಿಗೆ ಇಲ್ಲಿದೆ ಉಪಯುಕ್ತ ಸಲಹೆಗಳು…

    ಮಹಿಳೆಯರು 50 ವರ್ಷ ಆಸು ಪಾಸಿನಲ್ಲಿದ್ದಾಗ ಮುಟ್ಟು ನಿಲ್ಲಲು ಶುರುವಾಗುತ್ತದೆ. ಇದು ಮಹಿಳೆಯರ ಆರೋಗ್ಯ ವಿಷಯದಲ್ಲಿ ಮಹತ್ವದ ಘಟ್ಟವಾಗಿದ್ದು, ಈ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

    ಮುಟ್ಟಿನ ಸಮಸ್ಯೆ ಬಾಧಿಸುವಾಗ ಮಹಿಳೆಯರು ಮಂಕಾಗುವುದುಂಟು. ಏನೋ ದೊಡ್ಡ ಆರೋಗ್ಯ ಸಮಸ್ಯೆ ಆಗಿದೆ ಎಂದು ಆತಂಕಕ್ಕೊಳಗಾಗುತ್ತಾರೆ. ಆದರೆ, ಈ ವಿಷಯಕ್ಕೆ ಹೆದರುವ ಅವಶ್ಯಕತೆಯಿಲ್ಲ. ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ. ಅದಕ್ಕೆ ಮನೆಯಲ್ಲೇ ಮಾಡಿಕೊಳ್ಳಬೇಕಾದ ಆರೈಕೆಗಳು ಏನು ಎಂಬುದನ್ನು ನಾವೀಗ ತಿಳಿಯೋಣ.

    ನಿದ್ರಾಹೀನತೆ: ಮಹಿಳೆಯರಿಗೆ ಸಾಮನ್ಯವಾಗಿ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಹೆಚ್ಚಾಗಿ ನಿದ್ರೆಯ ಕೊರತೆಯಿಂದ ಬಳಲುತ್ತಾರೆ. ಇದನ್ನು ಕಡಿಮೆ ಮಾಡಲು ತಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು, ಬೀಜಗಳು, ಮಾಂಸ, ಬಾದಮಿ, ಗೋಡಂಬಿ ಹಾಗೂ ಮೆಗ್ನೀಸಿಯಮ್ ಇರುವ ಆಹಾರಗಳನ್ನು ಸೇವಿಸಿ. ಇದು ನಿಮಗೆ ನೈರ್ಸಗಿಕವಾಗಿ ನಿದ್ರೆ ಬರಲು ಸಹಾಯ ಮಾಡುತ್ತದೆ.

    ರಾತ್ರಿ ಬೆವರುವಿಕೆ: ಮುಟ್ಟು ನಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಬೆವರುವಿಕೆ ಹೆಚ್ಚಾಗಿರುತ್ತದೆ. ಅದರಲ್ಲೂ ರಾತ್ರಿ ಹೊತ್ತು ಹೆಚ್ಚು ಬೆವೆತುಹೋಗುತ್ತಾರೆ. ಇಂತಹ ಸಮಯದಲ್ಲಿ ಬ್ಲಾಂಕೆಟ್ ಹೊದ್ದು ಮಲಗುವುದನ್ನು ಬಿಡಿ. ತೆಳುವಾದ ಕಾಟನ್ ಬ್ಲಾಂಕೆಟ್ ಅನ್ನೇ ಬಳಸಿ. ಕಿಟಕಿ, ಬಾಗಿಲನ್ನು ತೆರೆದು ಚೆನ್ನಾಗಿ ಗಾಳಿ ಆಡುವ ವಾತಾವರಣವನ್ನು ಮನೆಯೊಳಗೆ ನಿರ್ಮಿಸಿಕೊಳ್ಳಿ. ಇದರಿಂದ ರಾತ್ರಿ ಹೊತ್ತು ಆರಾಮದಾಯಕ ನಿದ್ರೆ ಬರುತ್ತದೆ.

    ತಡವಾಗಿ ಅಥವಾ ವೇಗವಾಗಿ ಋತುಸ್ರಾವ: ಋತು ಚಕ್ರ ನಿಲ್ಲುವಾಗ ಮಹಿಳೆಯರಿಗೆ 15 ದಿನ ಅಥವಾ 3 ತಿಂಗಳಿಗೆ ಒಮ್ಮೆ ಮುಟ್ಟಾಗಬಹುದು ಇದಕ್ಕೆ ಕೆಂಪು ಅಥವಾ ಕುಚುಲಕ್ಕಿ ಊಟವನ್ನು ಮಾಡಿ ಮತ್ತು ರಾಸಯಾನಿಕಯುಕ್ತ ಆಹಾರಗಳು ಅಥವಾ ಜಂಕ್​ ಫುಡ್​ ಸೇವನೆ ನಿಲ್ಲಿಸಿ.

    ಒಣಗಿದ ಚರ್ಮ ಮತ್ತು ಕಣ್ಣುಗಳು : ಹೆಚ್ಚಿನ ಮಹಿಳೆಯರಲ್ಲಿ ಮಾತ್ರ ಈ ರೀತಿಯ ಲಕ್ಷಣಗಳು ಕಾಣಿಸುತ್ತವೆ. ಆದರೆ, ಇವು ಶಾಶ್ವತವಲ್ಲ, ಸ್ವಲ್ಪ ಸಮಯದ ನಂತರ ಮಾಯವಾಗುತ್ತವೆ. ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಬಳಸಿ. ಹೆಚ್ಚು ನೀರನ್ನು ಸೇವಿಸಿಲು ವೈದರು ಸಲಹೆ ನೀಡುತ್ತಾರೆ.

    ಖಿನ್ನತೆ, ಆಂತಕ, ಎದೆ ನೋವು: ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯವು ಮುಖ್ಯ. ಸಾಮನ್ಯವಾಗಿ ಮಹಿಳೆಯರು ಕಾರಣವಿಲ್ಲದೆ ಸಿಟ್ಟಾಗುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರೀತಿ ವಿಶ್ವಾಸ ತುಂಬಾ ಮುಖ್ಯ. ನಿಯಮಿತವಾಗಿ ವಾಕಿಂಗ್, ಜಾಗಿಂಗ್ ಅಥವಾ ಯೋಗದಂತಹ ಅಭ್ಯಾಸಗಳಿಂದ ಸಮತೋಲಿತ ಮನಸ್ಥಿತಿಯನ್ನು ನೀವು ಕಾಯ್ದುಕೊಳ್ಳಬಹುದು.

    ಸರ್ಕಾರಿ ಕೆಲಸ ಸಿಗುತ್ತೆ ಎಂಬ ಆಸೆಯಿಂದ ಸಂದರ್ಶನಕ್ಕೆ ಹೋದ ಮಹಿಳೆಯರಿಗೆ ಕಾದಿತ್ತು ಶಾಕ್​!

    ಓಟಿಟಿ ರಿಲೀಸ್​​ಗೆ ರೆಡಿಯಾದ ‘ಸಲಾರ್’: ಈ ದಿನ ಸ್ಟ್ರೀಮಿಂಗ್​ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts