More

    ನಶಿಸುತ್ತಿರುವ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ – ಹಂಪಿ ಕನ್ನಡ ವಿವಿ ಪುರಾತತ್ವ ಸಂಗ್ರಹಾಲಯದ ಸಹಾಯಕ ಅಧಿಕಾರಿ ಡಾ.ಆರ್.ಮಂಜು ನಾಯ್ಕ ಹೇಳಿಕೆ

    ಕೊಪ್ಪಳ: ನಶಿಸುತ್ತಿರುವ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹಂಪಿ ಕನ್ನಡ ವಿವಿ ಪುರಾತತ್ವ ಸಂಗ್ರಹಾಲಯದ ಸಹಾಯಕ ಅಧಿಕಾರಿ ಡಾ.ಆರ್.ಮಂಜು ನಾಯ್ಕ ಹೇಳಿದರು.

    ನಗರದ ಸಪ್ರದ ಕಾಲೇಜಿನಲ್ಲಿ ಪುರಾತತ್ವ ಸಂಗ್ರಹಾಲಯ, ಪರಂಪರಾ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಮಾರಕಗಳ ಸ್ವಚ್ಛತೆ ಹಾಗೂ ಪರಂಪರಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ನಶಿಸುತ್ತಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವಲ್ಲಿ ನಾವೆಲ್ಲ ಬದ್ಧರಾಗಬೇಕಿದೆ. ಈ ಮೂಲಕ ಪ್ರಾಚೀನ ಐತಿಹಾಸಿಕತೆಯ ಕುರುಹುಗಳನ್ನು ಇಂದಿನ ಜನತೆಗೆ ತೋರ್ಪಡಿಸಬೇಕು. ಅಂದಾಗ ಜನರಲ್ಲಿ ಇತಿಹಾಸದ ಅರಿವು ಮೂಡಬಲ್ಲದು. ಇತಿಹಾಸ ಅರಿಯದಿದ್ದರೆ ಮುಂದಿನ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ಸ್ಮಾರಕಗಳು ನಮ್ಮ ಹಿರಿಯರು, ಪುರಾತನ ಇತಿಹಾಸದ ಸಾಕ್ಷಿಗಳಾಗಿವೆ. ಪ್ರತಿಯೊಬ್ಬರೂ ಅವುಗಳ ರಕ್ಷಣೆ ಬಗ್ಗೆ ಕಾಳಜಿ ಹೊಂದಬೇಕೆಂದರು.

    ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಮಾತನಾಡಿ, ನಮ್ಮ ಐತಿಹಾಸಿಕ ಪರಂಪರೆಯನ್ನು ಉಳಿಸಿ ಅದನ್ನು ಮುಂದಿನ ಜನಾಂಗಕ್ಕೆ ವರ್ಗಾಹಿಸುವ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಅದನ್ನು ಸರಿಯಾಗಿ ನಿರ್ವಹಿಸಿ. ಪರಂಪರಾ ಕೂಟ ರಚಿಸಿಕೊಂಡು ನಮ್ಮ ಸುತ್ತಲಿನ ಸ್ಮಾರಕಗಳನ್ನು ರಕ್ಷಿಸೋಣ ಎಂದರು. ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪರಂಪರಾಕೂಟದ ಸಂಚಾಲಕಿ ಶುಭಾ ಎಸ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮಾರುತೇಶ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಗಾಯಿತ್ರಿ ಭಾವಿಕಟ್ಟಿ , ಉಪನ್ಯಾಸಕರಾದ ಹನುಮಗೌಡ, ಶರಣಪ್ಪ ತಳವಾರ, ಮಲ್ಲೇಶಪ್ಪ ಉಳ್ಳಾಗಡ್ಡಿ, ಜ್ಞಾನೇಶ ಪತ್ತಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts