More

    ಕಾರ್ಮಿಕ ಚಳವಳಿಗೆ ಬೇಕು ಬಲ ಹುತಾತ್ಮರ ದಿನಾಚರಣೆಯಲ್ಲಿ ರಾಘವೇಂದ್ರ ನಾಯರಿ

    ದಾವಣಗೆರೆ: ಇಂದು ಕಾರ್ಮಿಕರ ಶೋಷಣೆ ಹಾಗೂ ಬಂಡವಾಳಷಾಹಿಗಳ ಪೋಷಣೆ ನಡೆಯುತ್ತಲೇ ಇದೆ. ಇದರ ನಡುವೆ ಕಾರ್ಮಿಕ ಸಂಘಟನೆ ಹಾಗೂ ಚಳವಳಿ ಕಟ್ಟಬೇಕಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ ಹೇಳಿದರು.

    ಆವರಗೆರೆಯಲ್ಲಿ ಶನಿವಾರ, ಹಿರಿಯ ಕಾರ್ಮಿಕ ಮುಖಂಡರಾದ ಶೇಖರಪ್ಪ, ಸುರೇಶ್ ಅವರ 56ನೇ ವರ್ಷದ ಹುತಾತ್ಮರ ದಿನಾಚರಣೆ ಹಾಗೂ ಮಾಜಿ ಶಾಸಕ ಪಂಪಾಪತಿ ಅವರ 21ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದಾವಣಗೆರೆ ನಗರದಲ್ಲಿ 53 ವರ್ಷದ ಹಿಂದೆ ಘಟಿಸಿದ ಹಿರಿಯ ಕಾರ್ಮಿಕ ಮುಖಂಡರ ಬಲಿದಾನ, ಕಾರ್ಮಿಕ ಚಳವಳಿ ದಿಕ್ಸೂಚಿಯಾಯಿತು. ಹೋರಾಟಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡುವ ಜತೆಗೆ ಕಾರ್ಮಿಕ ಸಂಘಟನೆಗೂ ಶಕ್ತಿ ತುಂಬಲಾಯಿತು. ಹಿರಿಯರ ಹೋರಾಟಗಳಿಂದ ನಾವಿಂದು ಸರಿಯಾದ ಪ್ರೇರಣೆ ಪಡೆಯಬೇಕು ಎಂದರು.
    ಎಲ್ಲರಿಗೂ ಅನ್ನ, ವಸತಿ, ಉದ್ಯೋಗ ಅತ್ಯಗತ್ಯ. ಆದರೆ ಕರೊನಾ ನಂತರದಲ್ಲಿ ಶೇ.50 ಕ್ಕೂ ಹೆಚ್ಚು ಕಾರ್ಖಾನೆಗಳು ಸ್ಥಗಿತವಾದರೆ ಅಷ್ಟೇ ಪ್ರಮಾಣದ ಉದ್ಯೋಗ ಕಡಿತವಾದವು. ಇದರ ನಡುವೆಯೂ ನಾವು ಬದುಕಿಗಾಗಿ ಹೋರಾಟ ನಡೆಸಬೇಕಿದೆ. ಬಂಡವಾಳಿಗರ ಶೋಷಣೆಯ ಈ ಹೊತ್ತಿನಲ್ಲಿ ಕಾರ್ಮಿಕ ಹಾಗೂ ಸಮಕಾಲೀನ ಪ್ರಜ್ಞೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
    ಎಐಟಿಟಿಯುಸಿ ರಾಜ್ಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಆನಂದರಾಜ್ ಮಾತನಾಡಿ ಪ್ರತಿ ವರ್ಷವೂ ಹುತಾತ್ಮರ ಸ್ಮರಣೆ ನಡೆಯುತ್ತದೆ, ಭಾಷಣವನ್ನೂ ಮಾಡುತ್ತೇವೆ. ಆದರೆ ಯುವಕರಿಗೆ ಇದರ ಇತಿಹಾಸದ ತಿಳಿವಳಿಕೆ ನೀಡುವಲ್ಲಿ ನಾವಿನ್ನೂ ಹಿಂದಿದ್ದೇವೆ. ಕಾರ್ಮಿಕ ವರ್ಗಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ ಎಂದರು.
    ಒಂದು ಕಾಲದಲ್ಲಿ ಕಮ್ಯುನಿಸ್ಟ್ ವಿಜೃಂಭಿಸಿತ್ತು. ಮುಖಂಡರು ಗಲ್ಲಿ-ಗಲ್ಲಿಗೆ ಬರಲೂ ಹೆದರುವ ಕಾಲ ಅದಾಗಿತ್ತು. ಇಂದು ನಮ್ಮ ಸಂಖ್ಯೆ ಕಡಿಮೆ ಇದ್ದರೂ ಕಮ್ಯುನಿಸ್ಟ್ ಪಕ್ಷವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷಕ್ಕೆ ಪಕ್ಷ ಶತಮಾನೋತ್ಸವ ವರ್ಷವನ್ನು ಆಚರಿಸಿಕೊಳ್ಳಲಿದೆ. ಎಐಟಿಯುಸಿ ಸಂಘಟನೆ 103ನೇ ವರ್ಷಾಚರಣೆ ಮಾಡುತ್ತಿದೆ ಎಂದು ಹೇಳಿದರು.
    ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ ಹೋರಾಟದ ಜತೆಗೆ ಸಾರ್ವಜನಿಕ ಸೇವೆಯಲ್ಲಿಯೂ ಕಮ್ಯುನಿಷ್ಟರು ದಾವಣಗೆರೆಯಲ್ಲಿ ತೊಡಗಿಸಿಕೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ವಿಚಾರಗಳು ಸ್ಮರಣೆಗೆ ಬರುತ್ತಿಲ್ಲ ಎಂದರು.
    ದಾವಣಗೆರೆಗೆ ಸಾರಿಗೆ ಬಸ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬರಲು ಕಾರಣೀಕರ್ತರಾದ ಪಂಪಾಪತಿ ಅವರು ಓದಿದ್ದು ನಾಲ್ಕನೇ ತರಗತಿ ಆದರೂ ಸಾಮಾಜಿಕ ಕಳಕಳಿ ಹೊಂದಿದ್ದರು. ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ನೀಡಿದ ಉತ್ತರದ ಪ್ರತಿಯನ್ನು ಹರಿದು ಹಾಕಿ ಕನ್ನಡಪ್ರೇಮ ಮೆರೆದಿದ್ದರು. ಜನಮಾನಸದಲ್ಲಿ ಉಳಿಯುವಂಥ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
    ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಎಂ.ಬಿ.ಶಾರದಮ್ಮ,
    ಸಹ ಕಾರ್ಯದರ್ಶಿ ಆವರಗೆರೆ ವಾಸು,ಇಪ್ಟಾ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಷಣ್ಮುಖಸ್ವಾಮಿ ,ಸಿಪಿಐ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಟಿ.ಎಸ್.ನಾಗರಾಜ, ಜಿ.ಎಸ್.ಬಸವರಾಜಪ್ಪ, ಜಿ.ಯಲ್ಲಪ್ಪ, ವಿ.ಲಕ್ಷ್ಮಣ, ಎಸ್.ಎಸ್.ಮಲ್ಲಮ್ಮ, ಜ್ಯೋತಿಲಕ್ಷ್ಮೀ, ಆನಂದಮೂರ್ತಿ, ಬಾನಪ್ಪ, ಐರಣಿ ಚಂದ್ರು ಇತರರಿದ್ದರು.

    namdu mugithanna
    Show quoted text

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts