More

    ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗಕ್ಕೆ ಭವ್ಯವಾದ ಸ್ಮಾರಕ!

    ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಕಂಕಣಿ ಗ್ರಾಮದಲ್ಲಿ ಬಿಷ್ಣೋಯ್ ಸಮುದಾಯದವರು ನಟ ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗದ ಗೌರವಾರ್ಥವಾಗಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಿದ್ದಾರೆ ಎಂದು ವರದಿಯಾಗಿದೆ. ಈ ಗ್ರಾಮದ ಜನರು ಜಿಂಕೆಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಬಿಷ್ಣೋಯ್ ಸಮುದಾಯಕ್ಕೆ ಸೇರಿದ ಕನಿಷ್ಠ 200 ಯುವಕರು ಈ ಕೆಲಸಕ್ಕೆ ಕೈಹಾಕಿದ್ದಾರೆ.
    1998 ರಲ್ಲಿ, ಬಾಲಿವುಡ್​ನ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ತಮ್ಮ ಹಮ್ ಸಾಥ್ ಸಾಥ್ ಹೇಚಿತ್ರದ ಶೂಟಿಂಗ್ ಸ್ಥಳದ ಬಳಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯದವರು ದಾಖಲಿಸಿದ ದೂರಿನ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ ನಂತರ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
    ಕೃಷ್ಣಮೃಗಗಳು ಮತ್ತು ಜಿಂಕೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗಿದೆ. ಇನ್ನು, ಬಿಷ್ಣೋಯಿಗಳು ಬಹುಶಃ ಪ್ರಪಂಚದ ಏಕೈಕ ಪರಿಸರ ಸ್ನೇಹಿ ಧರ್ಮವನ್ನು ಅನುಸರಿಸುತ್ತಾರೆ. 2016 ರಲ್ಲಿ ರಾಜಸ್ಥಾನದಲ್ಲಿ ವನ್ಯಜೀವಿಗಳಿಗೆ ತೊಂದರೆ ಕೊಟ್ಟು ಅಪರಾಧವನ್ನು ಮಾಡಿರುವ 1,700 ಕ್ಕೂ ಹೆಚ್ಚು ಜನರನ್ನು ಈ ಸಮುದಾಯದ ಪ್ರಯತ್ನಗಳಿಂದ, ದೂರಗಳಿಂದ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸುತ್ತಿವೆ

    ‘ಅವ್ನು ಎಲ್ಲೆಲ್ಲೋ ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts