More

    ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ರಾಕೇಶ್ ರೈ ಗರಂ

     

    • ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಅಕ್ರಮ ಸಕ್ರಮ ಸರ್ಕಾರಿ ಕೃಷಿ ಜಮೀನುಗಳ ಸಕ್ರಮಗೊಳಿಸುವ ಸಭೆ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
      194 ಕಡತಗಳನ್ನು ವಿಲೇವಾರಿ ಮಾಡಲಾಯಿತು. ಆರು ಕಡತಗಳನ್ನು ಮರುಪರಿಶೀಲಿಸಲಾಯಿತು. ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ , ತಹಸೀಲ್ದಾರ್ ಅನಂತಶಂಕರ್, ಉಪತಹಸೀಲ್ದಾರ್‌ಗಳಾದ ಮನೋಹರ ಕೆ.ಟಿ., ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.
      ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕಡೆಂಜಿ ಮಾತನಾಡಿ ತಹಸೀಲ್ದಾರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಡತವೊಂದರ ಮಂಜೂರಾತಿ ಬಗ್ಗೆ ಪ್ರಸ್ತಾಪಿಸಿದಾಗ ಅದಕ್ಕೆ ಕಾನೂನು ತೊಡಕು ಇದೆ ಎಂದು ತಹಸೀಲ್ದಾರ್ ಉತ್ತರಿಸಿದರು. ಅರ್ಹ ಕಡತಗಳನ್ನು ಅನವಶ್ಯವಾಗಿ ತಡೆಹಿಡಿದು ಬಡವರ ರಕ್ತ ಹೀರುತ್ತೀರಿ ಎಂದು ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ರಾಕೇಶ್ ರೈ ಕೆಡೆಂಜಿ ಮಾತನಾಡಿ, ಕೆಲವು ಕಡತಗಳನ್ನು ತಡೆಹಿಡಿಯುತ್ತೀರಿ ಎಂದು ತಹಸೀಲ್ದಾರವವ ವಿರುದ್ಧ ಹರಿಹಾಯ್ದರು. ಗೋಳಿತೊಟ್ಟು ಗ್ರಾಮದ ಗಣೇಶ್ ಬೊಟ್ಟಿಮಜಲು ಎಂಬುವರ ಕಡತ ಮಂಜೂರು ಹಂತಕ್ಕೆ ಬಿಡಲಿಲ್ಲ. ಈಗ ಕೇಳಿದರೆ ಕಾನೂನು ತೊಡಕು ಹೇಳುತ್ತೀರಿ, ಆದರೆ ಅದೇ ಸರ್ವೇ ನಂಬರ್‌ನಲ್ಲಿ ಇತರರು ನೀಡಿದ ಅರ್ಜಿ ಸಕ್ರಮ ಮಾಡಿದ್ದೀರಿ. ಅವರಿಗೆ ಅನ್ಯಾಯ ಮಾಡಬೇಡಿ ಎಂದರು.
      ತಹಸೀಲ್ದಾರರು ಕೆಲವು ವಿಷಯಗಳಿಗೆ ಕಾನೂನು ತೊಡಕಿನ ವಿಷಯ ಮುಂದಿಟ್ಟು ಮಾತನಾಡಿದರೆ ಉಳಿದ ಬಹುತೇಕ ಆರೋಪಗಳಿಗೆ ನಿರುತ್ತರಾಗಿದ್ದರು.
    •  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts