More

    ನಾಡಿನಿಂದ ಕಾಡಿಗೆ…; ಪ್ಯಾನ್ ಇಂಡಿಯನ್ ಚಿತ್ರದಲ್ಲಿ ಮೇಘಾ ಶೆಟ್ಟಿ

    ‘ಜೊತೆ ಜೊತೆಯಲಿ’ ಧಾರಾವಾಹಿಯಿಂದಲೇ ನಾಡಿನ ಹೆಂಗಳೆಯರ ಮನಗೆದ್ದಿರುವ ನಟಿ ಮೇಘಾ ಶೆಟ್ಟಿ, ಕಿರುತೆರೆಯಷ್ಟೇ ಪ್ರಾಮುಖ್ಯತೆಯನ್ನು ಹಿರಿತೆರೆಗೂ ನೀಡುತ್ತಿದ್ದಾರೆ. ಧಾರಾವಾಹಿ ಜತೆಯಲ್ಲಿಯೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಮೂರನೇ ಸಿನಿಮಾಕ್ಕೂ ಸಹಿ ಹಾಕಿದ್ದಾರೆ. ವಿಶೇಷ ಏನೆಂದರೆ ಆ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಸಿದ್ಧವಾಗಲಿದೆ.

    ಈ ಮೊದಲು ‘ಜಿಲ್ಕ’ ಹೆಸರಿನ ಸಿನಿಮಾ ಮಾಡಿದ್ದ ನಟ ಕವೀಶ್ ಶೆಟ್ಟಿ, ಈ ಚಿತ್ರಕ್ಕೆ ನಾಯಕ. ಅವರಿಗಿಲ್ಲಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ. ಹಾಗಾದರೆ ಏನಿದು ಸಿನಿಮಾ? ಈ ಬಗ್ಗೆ ಚಿತ್ರದ ನಾಯಕಿ ಮೇಘಾ ಒಂದಷ್ಟು ಮಾಹಿತಿಯನ್ನು ‘ವಿಜಯವಾಣಿ’ಗೆ ನೀಡಿದ್ದಾರೆ. ‘ಲವ್ ಸ್ಟೋರಿ ಮತ್ತು ಕಮರ್ಷಿಯಲ್ ದೃಷ್ಟಿಯಿಂದ ನನಗೆ ಇದೊಂದು ಹೊಸ ರೀತಿಯ ಸಿನಿಮಾ. ಸೌಮ್ಯ ಸ್ವಭಾವದ ಪಾತ್ರದ ಜತೆಗೆ ಬೇರೆ ರೀತಿಯಲ್ಲಿಯೂ ನನ್ನನ್ನು ನಿರ್ದೇಶಕರು ತೋರಿಸುತ್ತಿದ್ದಾರೆ. ಕಾಡಿಗೆ ಸಂಬಂಧಿಸಿದ ಸಿನಿಮಾ ಆಗಿರುವುದರಿಂದ ಮೈಸೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎಂಬುದು ಮೇಘಾ ಮಾತು.

    ಈ ಸಿನಿಮಾ ಹೊರತುಪಡಿಸಿದರೆ, ನಟ ಗಣೇಶ್ ಜತೆಗಿನ ‘ತ್ರಿಬಲ್ ರೈಡಿಂಗ್’ ಶೂಟಿಂಗ್ ಕೆಲಸವನ್ನು ಮೇಘಾ ಮುಗಿಸಿದ್ದಾರೆ. ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿರುವ ‘ದಿಲ್ ಪಸಂದ್’ ಚಿತ್ರ ದಲ್ಲಿಯೂ ಬಿಜಿಯಾಗಿದ್ದಾರೆ. ‘ಸದ್ಯ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅದು ಮುಗಿಯುತ್ತಿದ್ದಂತೆ ನವೆಂಬರ್ 20ರಿಂದ ಹೊಸ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದೇನೆ’ ಎನ್ನುತ್ತಾರೆ. ಕನ್ನಡ, ಮರಾಠಿ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿದ್ಧವಾಗಲಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಇಂಡಿಯನ್ ಫಿಲಂ ಫ್ಯಾಕ್ಟರಿ ಸಂಸ್ಥೆಯಡಿ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ನಿರ್ವಿುಸು ತ್ತಿದ್ದಾರೆ.

    ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts