More

    ಮೆಗಾ ಒಪಿನಿಯನ್ ಪೋಲ್​: ಎನ್​ಡಿಎಗೆ 411 ಸ್ಥಾನ; ಇಂಡಿಯಾ ಬ್ಲಾಕ್​ಗೆ 105; ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 25 ಸ್ಥಾನ

    ಮುಂಬೈ: ‘ಅಬ್ ಕಿ ಬಾರ್, 400 ಪಾರ್’ (ಈ ಬಾರಿ 400 ಮೀರಿ) ಎಂಬ ಬಿಜೆಪಿ ಘೋಷಣೆ ನಿಜವಾಗಬಹುದಾಗಿದೆ. 543 ಸದಸ್ಯರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ 411 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಮುಂಬರುವ ಲೋಕಸಭೆ 2024 ರ ಚುನಾವಣೆಯಲ್ಲಿ ಬಿಜೆಪಿ ಅಂದಾಜು 300 ಸ್ಥಾನಗಳನ್ನು ಗಳಿಸಲಿದೆ.

    ನ್ಯೂಸ್ 18 ಮೆಗಾ ಒಪಿನಿಯನ್ ಪೋಲ್​ನಲ್ಲಿ ಈ ರೀತಿಯ ಭವಿಷ್ಯ ನುಡಿಯಲಾಗಿದೆ. ಜೆಡಿಯು ಮತ್ತು ಟಿಡಿಪಿ ಸೇರಿದಂತೆ ಇತರ ಎನ್‌ಡಿಎ ಮಿತ್ರಪಕ್ಷಗಳು 61 ಸ್ಥಾನಗಳನ್ನು ಗಳಿಸುತ್ತವೆ ಎಂದು ಅಂದಾಜಿಸಲಾಗಿದೆ.

    ಕಾಂಗ್ರೆಸ್‌ನ 49 ಸ್ಥಾನಗಳನ್ನು ಒಳಗೊಂಡಂತೆ ಇಂಡಿಯಾ ಮೈತ್ರಿಕೂಟವು ಕೇವಲ 105 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಅವಧಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಗದ್ದುಗೆಗೆ ಏರುವುದನ್ನು ತಡೆಯುವ ಪ್ರಯತ್ನ ವಿಫಲವಾಗಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

    ಈ ಭವಿಷ್ಯವಾಣಿಗಳು ನಿಜವಾಗಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಎರಡನೇ ಅತ್ಯಂತ ಕೆಟ್ಟ ಸೋಲನ್ನು ಎದುರಿಸಲಿದೆ. ಈ ಹಿಂದೆ, 2014 ರ ಚುನಾವಣೆಯಲ್ಲಿ 44 ಸ್ಥಾನಗಳನ್ನು ಗೆದ್ದಿದ್ದ ಈ ಹಳೆಯ ಪಕ್ಷದ ಐತಿಹಾಸಿಕ ಕನಿಷ್ಠ ಮಟ್ಟವಾಗಿತ್ತು.

    ನ್ಯೂಸ್ 18 ಸಮೀಕ್ಷೆಯು ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಮುಖ ಲಾಭವಾಗುವ ಭವಿಷ್ಯ ನುಡಿದಿದೆ.

    ರಾಜ್ಯವಾರು ಅಭಿಪ್ರಾಯ ಸಮೀಕ್ಷೆಯ ಫಲಿತಾಂಶಗಳು ಈ ರೀತಿ ಇವೆ.

    1) ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಯು ಸ್ವೀಪ್​ ಮಾಡಲಿದೆ ಎಂದು ಸಮೀಕ್ಷೆಯು ಮುನ್ಸೂಚನೆ ನೀಡಿದೆ, ಈ ರಾಜ್ಯದಲ್ಲಿ 48 ಸ್ಥಾನಗಳ ಪೈಕಿ ಎನ್‌ಡಿಎ 41 ಸ್ಥಾನಗಳನ್ನು ಗೆಲ್ಲುತ್ತದೆ. ಮತ್ತೊಂದೆಡೆ, ಕಾಂಗ್ರೆಸ್, ಶರದ್ ಪವಾರ್ ಅವರ ಎನ್‌ಸಿಪಿ ಬಣ ಮತ್ತು ಉದ್ಧವ್ ಠಾಕ್ರೆಯ ಶಿವಸೇನೆ (ಯುಬಿಟಿ) ಒಳಗೊಂಡಿರುವ ಮಹಾರಾಷ್ಟ್ರದ ಇಂಡಿಯಾ ಬ್ಲಾಕ್ ಕೇವಲ ಏಳು ಸ್ಥಾನಗಳನ್ನು ಗಳಿಸಲಿದೆ.

    2) ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಗಮನಾರ್ಹ ಕುಸಿತವನ್ನು ನಿರೀಕ್ಷಿಸಲಾಗಿದೆ, ಆದರೆ 42 ರಲ್ಲಿ 25 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆಯಂತೆ ಬಿಜೆಪಿಯ ಸ್ಥಾನಗಳ ಲೆಕ್ಕಾಚಾರದಲ್ಲಿ ದೊಡ್ಡ ಜಿಗಿತವನ್ನು ಕಾಣಬಹುದು. ಆದರೂ, ಟಿಎಂಸಿ ತನ್ನ ರಾಜ್ಯದಲ್ಲಿ ಕೇವಲ 17 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದು, ಕಾಂಗ್ರೆಸ್ ಒಂದರಲ್ಲಿಯೂ ಗೆಲ್ಲುವುದಿಲ್ಲ.

    3) ಕರ್ನಾಟಕ: ಕರ್ನಾಟಕದಲ್ಲಿ ಎನ್‌ಡಿಎ ತನ್ನ 2019 ರ ಪ್ರದರ್ಶನವನ್ನು ಪುನರಾವರ್ತಿಸುವ ನಿರೀಕ್ಷೆಯಿದೆ, ಇಲ್ಲಿನ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತದೆ, ಆದರೆ, ಕಾಂಗ್ರೆಸ್ ಕೇವಲ ಮೂರು ಸ್ಥಾನಗಳನ್ನು ಪಡೆಯುತ್ತದೆ. ಈ ಬಾರಿ ಬಿಜೆಪಿ- ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.

    4) ಗುಜರಾತ್: ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತೆ ಗುಜರಾತ್‌ನಲ್ಲಿ ಎಲ್ಲಾ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವೀಪ್ ಮಾಡುವ ನಿರೀಕ್ಷೆಯಿದೆ. 2014 ಮತ್ತು 2019 ರಲ್ಲಿ, ಬಿಜೆಪಿ ಎಲ್ಲಾ 26 ಸ್ಥಾನಗಳನ್ನು ಗೆದ್ದಿತು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯದಲ್ಲಿ ಕಾಂಗ್ರೆಸ್​ ಸ್ಥಾನವನ್ನು ಶೂನ್ಯಕ್ಕೆ ಇಳಿಸಲಾಗಿತ್ತು.

    5) ತೆಲಂಗಾಣ: ತೆಲಂಗಾಣದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಸಮೀಕ್ಷೆಯು ಪಕ್ಷಕ್ಕೆ ಪ್ರಭಾವಶಾಲಿ ಲಾಭವನ್ನು ತೋರಿಸಿದೆ. ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ,, ಆದರೆ ಬಿಆರ್‌ಎಸ್ ಕೇವಲ ಎರಡು ಸ್ಥಾನಗಳನ್ನು ಗಳಿಸಲಿದೆ.

    6) ಒಡಿಶಾ: ಒಡಿಶಾದಲ್ಲಿ ಆಡಳಿತಾರೂಢ ಬಿಜೆಡಿ ಎಂಟು ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ 13 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

    7) ಉತ್ತರ ಪ್ರದೇಶ: ಸಂಸತ್ತಿನ 550 ಸದಸ್ಯರಲ್ಲಿ 80 ಮಂದಿ ಉತ್ತರ ಪ್ರದೇಶದವರೇ ಆಗಿದ್ದಾರೆ. ಸಮೀಕ್ಷೆಯ ಪ್ರಕಾರ, ಎನ್‌ಡಿಎ ಒಟ್ಟು 77 ಸ್ಥಾನಗಳನ್ನು ಗಳಿಸಲು ಸಜ್ಜಾಗಿದೆ, ಪ್ರಚಂಡ ವಿಜಯದ ಮುನ್ಸೂಚನೆ ನೀಡಿದರೆ, ಪ್ರತಿಪಕ್ಷ ಇಂಡಿಯಾ ಬ್ಲಾಕ್ ಎರಡು ಸ್ಥಾನಗಳನ್ನು ಗಳಿಸಲಿದೆ.

    ಅದಾನಿ ಗ್ರೂಪ್‌ನ ಸಿಮೆಂಟ್ ಕಂಪನಿಯ ಷೇರುಗಳ ಬೆಲೆಯಲ್ಲಿ ಸತತ ಕುಸಿತ ಏಕೆ?

    ಟಾಟಾ ಕಂಪನಿ ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಳ: ನುವಾಮಾ ಬ್ರೋಕರೇಜ್​ ಸಂಸ್ಥೆ ಹೇಳಿದ್ದೇನು?

    ಮಹಾದೇವ ಬೆಟ್ಟಿಂಗ್​ ಪ್ರಕರಣ ಜತೆ 30ಕ್ಕೂ ಹೆಚ್ಚು ಕಂಪನಿಗಳ ಕನೆಕ್ಷನ್​: ಸ್ಮಾಲ್​ ಕ್ಯಾಪ್​ ಸ್ಟಾಕ್​ಗಳ ರಕ್ತಪಾತಕ್ಕೆ ಕಾರಣವಾದ ಈ ಹಗರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts