More

    ಬಸವನಬಾಗೇವಾಡಿ ಪಟ್ಟಣದಲ್ಲಿರುವ ಮೆಘಾ ಮಾರುಕಟ್ಟೆ

    ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮೆಘಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳಿಗೆ ಭಾರಿ ಬೇಡಿಕೆ ಬಂದಿದ್ದು, ಸೋಮವಾರ ಜರುಗಿದ ಹರಾಜು ಪ್ರಕ್ರಿಯೆಯಲ್ಲಿ 43 ಮಳಿಗೆಗಳಿಗೆ 9.23 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ.

    ಪಟ್ಟಣದ ವ್ಯಾಪಾರಸ್ಥರು ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವ್ಯಾಪಾರಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಮನಗೂಳಿ-ಬಿಜ್ಜಳ, ಬಾರಖೇಡ -ಬೀಳಗಿ ಎರಡು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಹೃದಯ ಭಾಗದಲ್ಲಿರುವ 3 ಎಕರೆ ಪ್ರದೇಶದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 133 ಮಳಿಗೆಗಳ ಮೆಘಾ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.

    ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತವಾದ ಮೂಲಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಹೈಟೆಕ್ ಮೆಘಾ ಮಾರುಕಟ್ಟೆಗೆ ಕೇವಲ ಪಟ್ಟಣದ ವ್ಯಾಪಾರಸ್ಥರಲ್ಲದೆ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ವ್ಯಾಪಾಸ್ಥರು ಈ ಮೆಘಾ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಹರಾಜಿನಲ್ಲಿ ಪಡೆದುಕೊಂಡರು.

    ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಶೀಘ್ರ 27 ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಹಸ್ತಾಂತರಿಸಲಾಗುವುದು. ಉಳಿದ ಮಳಿಗೆಗಳನ್ನು ಆದಷ್ಟು ಬೇಗ ಮತ್ತೆ ಬಹಿರಂಗ ಹರಾಜು ಮೂಲಕ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ಹೇಳಿದರು.

    ಹರಾಜು ಪ್ರಕ್ರಿಯೆಯಲ್ಲಿ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಪುರಸಭೆ ವ್ಯವಸ್ಥಾಪಕ ವೀರೇಶ ಹಟ್ಟಿ, ಜೆಇ ಮಾದೇವ ಜಂಬಗಿ, ಮಹೇಶ ಹಿರೇಮಠ, ಗೀತಾಂಜಲಿ ದಾಸರ ಹಾಗೂ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವ್ಯಾಪಾರಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts