More

    ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ IAS ಅಧಿಕಾರಿ! ಕಾರಣ ಕೇಳಿದ್ರೆ ಇಂಥವರು ಇರ್ತಾರಾ ಅಂತೀರಿ…

    ನವದೆಹಲಿ: ಐಎಎಸ್​ ಅಧಿಕಾರಿಯಾಗಬೇಕೆಂಬುದು ಅನೇಕ ಮಂದಿಯ ಬಹುದಿನಗಳ ಕನಸು. ಇದಕ್ಕಾಗಿ ಲಕ್ಷಾಂತರ ಯುಪಿಎಸ್​ಸಿ ಆಕಾಂಕ್ಷಿಗಳು ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ, ಅಂತಿಮವಾಗಿ ನೂರಾರು ಮಂದಿ ಮಾತ್ರ ಈ ಗುರಿಯನ್ನು ಮುಟ್ಟುತ್ತಾರೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆಗೆ ಏರಿದರೂ ಸಹ ಕೆಲ ಐಎಎಸ್​, ಐಪಿಎಸ್​ ಅಧಿಕಾರಿಗಳು ಕಾರಣಾಂತರಗಳಿಂದ ಹುದ್ದೆಗಳನ್ನು ತೊರೆದಂತಹ ಸಾಕಷ್ಟು ಉದಾಹರಣೆಗಳನ್ನು ನೋಡಿ ಹುಬ್ಬೇರಿಸಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.

    ನಾವಿಂದು ನಿಮಗೆ ಪರಿಚಯಿಸಲು ಹೊರಟಿವುದು ಗೌರವ್​​​ ಕೌಶಲ್​ ಎಂಬುವರು ಬಗ್ಗೆ. ಇವರು ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದು ಮಾತ್ರವಲ್ಲ, ಐಐಟಿ-ಜೆಇಇ ಮತ್ತು ಎಸ್​ಎಸ್​ಸಿ ಸಿಜಿಎಲ್​ಇ ಪರೀಕ್ಷೆಗಳನ್ನು ಸಹ ಪಾಸ್​ ಮಾಡಿದ್ದಾರೆ. ಹೇಳಬೇಕೆಂದರೆ, ಗೌರವ್​ ಅವರು ಬಹುಮುಖ ಪ್ರತಿಭೆ.​

    ಹರಿಯಾಣ ಮೂಲದ ಕೌಶಲ್, ಪಂಚಕುಲದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಐಐಟಿ ದೆಹಲಿಗೆ ಸೇರಿ, ಅದನ್ನು ತೊರೆದು ಬಿಐಟಿಎಸ್ ಪಿಲಾನಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ವ್ಯಾಸಂಗ ಮಾಡಿದರು. ಒಂದು ವರ್ಷದ ನಂತರ, ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿಯನ್ನು ಮುಗಿಸಿದ ಅವರು ಮತ್ತೆ ತಮ್ಮ ಹಾದಿಯನ್ನು ಬದಲಾಯಿಸಿದರು.

    2012ರ ಯುಪಿಎಸ್​ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕೌಶಲ್ 38ನೇ ರ್ಯಾಂಕ್​ನಲ್ಲಿ ಪಾಸಾದರು. ಬಳಿಕ ಭಾರತೀಯ ರಕ್ಷಣಾ ಎಸ್ಟೇಟ್ ಸೇವೆಗೆ (IDES) ಸೇರಿದರು. ಕಂಟೋನ್ಮೆಂಟ್ ಮಂಡಳಿಯೊಳಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಿಕೊಂಡರು ಮತ್ತು ಮಿಲಿಟರಿ ಭೂಮಿಯನ್ನು ಮೇಲ್ವಿಚಾರಣೆ ಮಾಡಿದರು. ಆದಾಗ್ಯೂ, 12 ವರ್ಷಗಳ ಸೇವೆಯ ನಂತರ ಕೌಶಲ್​ ಅವರು ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶಕರಾಗಲು ತಮ್ಮ ಸರ್ಕಾರಿ ಕೆಲಸವನ್ನೇ ತೊರೆದಿದ್ದಾರೆ.

    ಕೌಶಲ್ ಅವರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (SSC CGL) ಪರೀಕ್ಷೆ ಮತ್ತು ಎರಡು ಬಾರಿ ಜೆಇಇ ಅನ್ನು ಪಾಸ್​ ಮಾಡಿದ್ದಾರೆ. ಈ ಸಾಧನೆಗಳ ಹೊರತಾಗಿಯೂ ಅವರು ತಮಗೆ ನೀಡಿದ ಸ್ಥಾನಗಳನ್ನು ಸ್ವೀಕರಿಸದಿರಲು ನಿರ್ಧರಿಸಿದರು ಹಾಗೂ ಅಪಾಯಗಳನ್ನು ತೆಗೆದುಕೊಳ್ಳುವ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿದರು.

    ಯುಪಿಎಸ್​ಸಿಗೆ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಕೌಶಲ್ ಅವರು ಯುಪಿಎಸ್​ಸಿ ಪರೀಕ್ಷೆಯ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ UPSC ಅಭ್ಯರ್ಥಿಗಳಿಗೆ ಅಮೂಲ್ಯವಾದ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಅಪ್ಲಿಕೇಶನ್ ಸಹ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

    ಬಾಲರಾಮ ಪ್ರಾಣ ಪ್ರತಿಷ್ಠಾಗೆ ಆಹ್ವಾನ: ಅಯೋಧ್ಯೆಗೆ ತೆರಳಲು ಬಿಸಿಸಿಐನಿಂದ ವಿರಾಟ್​ ಕೊಹ್ಲಿಗೆ ಗ್ರೀನ್​ ಸಿಗ್ನಲ್​

    IPS ಹುದ್ದೆಗೆ ರಾಜೀನಾಮೆ ನೀಡಿದ ಅಸ್ಸಾಂ ಸಿಂಗಂ! ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts