ಮೆಗಾ ಬ್ಲಾಕ್‌ಬಸ್ಟರ್ ಸೇಲ್ ಘೋಷಿಸಿದ ಮೀಶೋ

ಬೆಂಗಳೂರು: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ಕಾಮರ್ಸ್ ಕಂಪನಿಯಾದ ‘ಮೀಶೋ ಇದೇ 23 ರಿಂದ 27ರವರೆಗೆ ತನ್ನ ಪ್ರಮುಖ ಹಬ್ಬದ ಮಾರಾಟ ಅಭಿಯಾನ ‘ಮೆಗಾ ಬ್ಲಾಕ್‌ಬಸ್ಟರ್ ಸೇಲ್ಸ್’ ಘೋಷಿಸಿದೆ.

ಇ-ಕಾಮರ್ಸ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುವ ತನ್ನ ಧ್ಯೇಯದ ಭಾಗವಾಗಿ ಕಂಪನಿಯು ದೇಶದ ವೈವಿಧ್ಯಮಯ ಗ್ರಾಹಕರಿಗೆ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ದರವನ್ನು ಮುಂದುವರಿಸಲಿದೆ. 30 ವಿಭಾಗಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು 6.5 ಕೋಟಿ ಉತ್ಪನ್ನಗಳ ಸಕ್ರಿಯ ಲಿಸ್ಟಿಂಗ್‌ನೊಂದಿಗೆ, ಮೀಶೋ ಗ್ರಾಹಕರಿಗೆ ಅಗ್ಗದ ದರದಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಅನ್ವೇಷಣೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಈ ವರ್ಷದ ಹಬ್ಬದ ಮಾರಾಟಕ್ಕೆ ಮುನ್ನ ಮೀಶೋ ಎಂಟು ಹೊಸ ಪ್ರಾದೇಶಿಕ ಭಾಷೆಗಳನ್ನು ತಂತ್ರಾಂಶಕ್ಕೆ ಸೇರಿಸುವ ಮೂಲಕ ತನ್ನ ಪ್ರಾದೇಶಿಕ ನೆಲೆಯನ್ನು ಬಲಪಡಿಸಿದೆ. ಬಂಗಾಳಿ, ತೆಲುಗು, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳನ್ನು ಸೇರಿಸಲಾಗಿದೆ. ಕಳೆದ ವರ್ಷದ 5 ದಿನಗಳ ವಾರ್ಷಿಕ ಮಾರಾಟ ಅಭಿಯಾನವು 4+ ದರ್ಜೆಯ ಪ್ರದೇಶಗಳಿಂದ ಶೇ.60 ಆರ್ಡರ್‌ಗಳಿಗೆ ಸಾಕ್ಷಿಯಾಯಿತು. ಮೀಶೋದಲ್ಲಿನ ಮಾರಾಟಗಾರರು ಸರಾಸರಿ ಎರಡು ವರ್ಷಗಳಲ್ಲಿ ತಮ್ಮ ವ್ಯಾಪಾರದಲ್ಲಿ ಶೇ.82 ಬೆಳವಣಿಗೆಯನ್ನು ಕಂಡಿದ್ದಾರೆ.

ಮೆಗಾ ಬ್ಲಾಕ್‌ಬಸ್ಟರ್ ಸೇಲ್ ಘೋಷಿಸಿದ ಮೀಶೋಗ್ರಾಹಕರ ತಿಳುವಳಿಕೆ ಆಧಾರದ ಮೇಲೆ ಮೀಶೋ ಮೆಗಾ ಬ್ಲಾಕ್‌ಬಸ್ಟರ್ ಸೇಲ್‌ನ ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ. ಬೇಡಿಕೆ ಪೂರೈಸಲು ಲಕ್ಷಾಂತರ ಮಾರಾಟಗಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ರೋಹಿತ್ ಶರ್ಮಾ, ರಶ್ಮಿಕಾ ಮಂದಣ್ಣ, ಕಪಿಲ್ ಶರ್ಮಾ, ತ್ರಿಶಾ ಕೃಷ್ಣನ್, ಕಾರ್ತಿ ಶಿವಕುಮಾರ್, ರಾಮ್ ಚರಣ್ ಮತ್ತು ಸೌರವ್ ಗಂಗೂಲಿ ಪ್ರಚಾರ ರಾಯಭಾರಿಗಳಾಗಿದ್ದಾರೆ. ರಿಯಾಯಿತಿ ಕೊಡುಗೆಗಳಿಗಾಗಿ ಫೋನ್‌ಪೇ ಮತ್ತು ಪೇಟಿಎಂನಂತಹ ಪ್ರಮುಖ ವ್ಯಾಲೆಟ್‌ಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಲೇಜಿಪೇ ಮೂಲಕ ಈಗ ಖರೀದಿಸಿ, ನಂತರ ಪಾವತಿಸಿ ವಿಶೇಷ ಕೊಡುಗೆಗಳನ್ನೂ ಒದಗಿಸುತ್ತಿದ್ದೇವೆ.

|ಉತ್ಕೃಷ್ಟ ಕುಮಾರ್, ಮೀಶೋ ವ್ಯಾಪಾರ ವಿಭಾಗದ ಸಿಎಕ್ಸ್‌ಒ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…