More

    ಪ್ರತಿ ದಿನ ಸರ್ಕಾರಿ ಕಚೇರಿ, ಜನಸಂದಣಿ ಪ್ರದೇಶ, ವಾರ್ಡ್​ವಾರು ಔಷಧ ಸಿಂಪಡಣೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದ್ದು, ದಿನೇದಿನೆ ಸೋಂಕು ಹೆಚ್ಚುತ್ತಿರುವುದರಿಂದ ಬಹುತೇಕ ಸರ್ಕಾರಿ ಕಚೇರಿಗಳು, ಪೊಲೀಸ್ ವಸತಿ ನಿಲಯಗಳು, ಜನಸಂದಣಿ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

    ಆರೋಗ್ಯ ಇಲಾಖೆ ಅಧಿಕಾರಿಗೆ ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮಂಗಳವಾರ ಲೋಕಾಯುಕ್ತ ಕಚೇರಿ, ಪ್ರವಾಸಿ ಮಂದಿರ, ಲೋಕೋಪಯೋಗಿ ಇಲಾಖೆ ಕಚೇರಿ, ಕೇಂದ್ರ ಗ್ರಂಥಾಲಯ ಮುಖ್ಯ ಕಚೇರಿ, ಆಜಾದ್ ಪಾರ್ಕ್ ಆವರಣ ಇನ್ನಿತರೆಡೆ ಸ್ಯಾನಿಟೈಸ್ ಮಾಡಲಾಯಿತು.

    ನಗರದ ಕಂಟೇನ್ಮೆಂಟ್ ಜೋನ್​ಗಳಲ್ಲಿ ನಿತ್ಯ ಸ್ಯಾನಿಟೈಸ್ ಮಾಡಿ ನಂತರ ವಾರ್ಡ್ ಮಟ್ಟದಲ್ಲಿ ಔಷಧ ಸಿಂಪಡಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯ 35 ವಾರ್ಡ್​ಗಳಲ್ಲೂ ಈ ಕಾರ್ಯ ನಡೆಯುತ್ತಿದ್ದು ಕರೊನಾ ಕುರಿತು ಬೂತ್ ಮಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಂಟೇನ್ಮೆಂಟ್ ವಲಯಗಳಾದಾಗ ಜನ ಮನೆಯಿಂದ ಹೊರಬಾರದಂತೆ ತಡೆಯುವುದು, ಹೊರ ಜಿಲ್ಲೆಗಳಿಂದ ಬಂದ ವ್ಯಕ್ತಿಗಳು, ಕೆಮ್ಮು-ಜ್ವರ ಇತ್ಯಾದಿ ಅನಾರೋಗ್ಯದಿಂದ ಬಳಲುತ್ತಿರುವವರ ಮಾಹಿತಿ ನೀಡುವಂತೆ ಧ್ವನಿವರ್ಧಕದ ಮೂಲಕ ಸಾರಲಾಗುತ್ತಿದೆ. ಜತೆಗೆೆ ಮನೆ ಮನೆಗೆ ತೆರಳಿ ಸರ್ಕಾರದ ನಿಯಮಾವಳಿ ಪಾಲಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿ ತಿಳಿವಳಿಕೆ ಹೇಳುತ್ತಿದ್ದಾರೆ.

    ಪ್ರತಿ ದಿನ ಹೌಸಿಂಗ್​ಬೋರ್ಡ್, ಹಿರೇಮಗಳೂರು, ಬೈಪಾಸ್ ರಸ್ತೆ, ವಿಜಯಪುರ, ಉಪ್ಪಳ್ಳಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಕಟೇಂನ್ಮೆಂಟ್ ಜೋನ್​ನಲ್ಲಿ ಸ್ಯಾನಿಟೈಸ್ ಮುಗಿದ ನಂತರ ವಾರ್ಡ್​ವಾರು ಬೆಳಗ್ಗೆ 6.30ರಿಂದ ರಾತ್ರಿ 7ರವರೆಗೆ ಔಷಧ ಸಿಂಪಡಿಸಲಾಗುತ್ತಿದೆ. 10 ಸಿಬ್ಬಂದಿಯನ್ನು ಈ ಕೆಲಸಕ್ಕಾಗಿಯೇ ನಿಯೋಜಿಸಲಾಗಿದೆ. ಸ್ವಚ್ಛತಾ ಕಾರ್ಯವನ್ನೂ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts