More

    ಅರ್ಥಪೂರ್ಣ ಸಮ್ಮೇಳನಕ್ಕಾಗಿ ಸಿದ್ಧತೆ – ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ ಆಹ್ವಾನ ಪತ್ರಿಕೆ ಬಿಡುಗಡೆ

    ಗಂಗಾವತಿ: ಅರ್ಥಪೂರ್ಣ ಸಮ್ಮೇಳನಕ್ಕಾಗಿ ಸಿದ್ಧತೆ ನಡೆದಿದ್ದು, ಅಕ್ಷರ ಜಾತ್ರೆ ಅದ್ದೂರಿಯಾಗಿ ನೆರವೇರಲಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಕಸಾಪದಿಂದ ಆಯೋಜಿಸಿರುವ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ಮಾ.14 ಮತ್ತು 15ರಂದು ಸಮ್ಮೇಳನ ಆಯೋಜಿಸಿದ್ದ ಮುಖ್ಯವೇದಿಕೆ,14 ಮಹಾದ್ವಾರ ಮತ್ತು 15 ಸಮಿತಿ ರಚಿಸಲಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಬಿಂಬಿಸುವ ಗೋಷ್ಠಿಗಳೊಂದಿಗೆ ಹಾಸ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಸಾಹಿತಿ ಡಾ.ಮುಮ್ತಾಜ್ ಬೇಗಂರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ವಿಶಿಷ್ಟ ರೀತಿಯ ಸಮ್ಮೇಳನಕ್ಕೆ ಕನ್ನಡ ಮನಸ್ಸುಗಳು ಒಗ್ಗೂಡುವಂತೆ ಸಲಹೆ ನೀಡಿದರು.

    ಕಸಾಪ ತಾಲೂಕಾಧ್ಯಕ್ಷ ಎಸ್.ಬಿ.ಗೊಂಡಬಾಳ್ ಮಾತನಾಡಿ, 2 ದಿನದ ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಮುಖಂಡರು ಸೇರಿ ಪಕ್ಷಾತೀತ ಮತ್ತು ಜಾತ್ಯತೀತ ಸಹಕಾರ ಸಿಕ್ಕಿದೆ. ಎಲ್ಲ ತಾಲೂಕಿನಲ್ಲಿ ಒಂದೇ ದಿನ ಸಮ್ಮೇಳನ ಆಯೋಜಿಸಿದರೆ, ತಾಲೂಕಿನಲ್ಲಿ 2 ದಿನ ಆಯೋಜಿಸಿದ್ದು, ಕೃಷಿ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸಮ್ಮೇಳನ ಸಂಚಾಲಕ ವೈ.ಆನಂದರಾವ್, ಕಸಾಪ ಪದಾಧಿಕಾರಿಗಳಾದ ಪವನಕುಮಾರ ಗುಂಡೂರ, ರುದ್ರೇಶ, ಶ್ರೀನಿವಾಸ, ಲಿಂಗಾರೆಡ್ಡಿ ಆಲೂರ್, ಶರಣೇಗೌಡ ಪೊ.ಪಾಟೀಲ್, ಸಿದ್ಧಲಿಂಗೇಶ, ವೈ.ಸತ್ಯನಾರಾಯಣ ಇತರರಿದ್ದರು.

    ಕನ್ನಡ ಸಂಘಟನೆಗಳಿಂದ ಸನ್ಮಾನ
    ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ಮುಮ್ತಾಜ್ ಬೇಗಂರನ್ನು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಅವರ ನಿವಾಸದಲ್ಲಿ ಶುಕ್ರವಾರ ಸನ್ಮಾನಿಸಿದರು. ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣನಾಯಕ, ವಿವಿಧ ಕನ್ನಡ ಪರ ಸಂಘಟನೆ ಪದಾಧಿಕಾರಿಗಳಾದ ಪಂಪಣ್ಣನಾಯಕ, ಚನ್ನಬಸವ ಜೇಕಿನ್, ರಾಜೇಶರಡ್ಡಿ, ವಿರೂಪಾಕ್ಷಗೌಡ ನಾಯಕ, ಸೈಯ್ಯದ್ ಜೀಲಾನಿ ಪಾಷಾ, ಅರ್ಜುನ ನಾಯಕ, ರಮೇಶ ಕೋಟಿ, ಮಂಜುನಾಥ ಪತ್ತಾರ್, ಎಚ್.ಎಸ್.ಮುಧೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts