More

    ಮೀ ಟೂ ಆರೋಪ: ಮಾನನಷ್ಟ ಕೇಸ್ ಹಾಕಿದ್ದ ಮಾಜಿ ಕೇಂದ್ರ ಸಚಿವಗೆ ಮುಖಭಂಗ

    ನವದೆಹಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್ ಅವರು ಇಂದು ಮುಖಭಂಗಕ್ಕೆ ಒಳಗಾಗಿದ್ದಾರೆ.
    ಪತ್ರಕರ್ತೆ ಪ್ರಿಯಾ ರಮಣಿ ಎನ್ನವರು ಎಂ.ಜೆ.ಅಕ್ಬರ್ ವಿರುದ್ಧ ಮೀ ಟೂ ಆರೋಪ ಮಾಡಿದ್ದರು. ಇದರ ವಿರುದ್ಧ ನವದೆಹಲಿಯ ಹೆಚ್ಚುವರಿ ಮುನ್ಸಿಪಲ್ ಕೋರ್ಟ್​ನಲ್ಲಿ ಅಕ್ಬರ್ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು.
    ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಎಂ.ಜೆ.ಅಕ್ಬರ್ ಅವರ ಅರ್ಜಿಯನ್ನು ವಜಾಗೊಳಿಸಿ, ಪ್ರಕರಣದಿಂದ ಪ್ರಿಯಾ ರಮಣಿ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
    ”ಮಹಿಳೆಯು ತನ್ನ ವಿರುದ್ಧ ಅನ್ಯಾಯಗೊಳಗಾಗಿದ್ದನ್ನು ಸಮಾಜದ ಎದುರು ಹೇಳಿಕೊಂಡಾಗ ಅವಳನ್ನು ಶಿಕ್ಷಿಸಲಾಗುವುದಿಲ್ಲ ಎಂದು ಖಡಕ್ ಆಗಿ ಕೋರ್ಟ್ ಹೇಳಿದೆ. ಅಲ್ಲದೇ ಭಾರತದ ಸಂವಿಧಾನವು ಮಹಿಳೆಗೆ ತಾನು ಅನುಭವಿಸಿದ ಸಂಕಷ್ಟ, ನೋವುಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ನೀಡಿದೆ ಎಂದಿದೆ. ಬಹುತೇಕ ಸಂದರ್ಭದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಗಳು ಮುಚ್ಚಿದ ಬಾಗಿಲು ಒಳಗೇ ನಡೆಯುತ್ತವೆ. ಹೀಗಾಗಿ ಮಹಿಳೆ ತನಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ” ಎಂದು ನ್ಯಾಯಾದೀಶ ರವೀಂದ್ರ ಕುಮಾರ್ ಪಾಂಡೆ ಹೇಳಿದ್ದಾರೆ.
    ಕೋರ್ಟ್​ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ ಅವರು, ”ಆದೇಶ ತುಂಬಾ ಸಂತಸ ತರಿಸಿದೆ. ಕೋರ್ಟ್ ನನ್ನ ಆರೋಪಗಳನ್ನು ಒಪ್ಪಿದೆ. ಇದರಿಂದ ಭವಿಷ್ಯದಲ್ಲಿ ಮತ್ತಷ್ಟು ಮಹಿಳೆಯರು ತಾವು ಅನುಭವಿಸಿದ ದೌರ್ಜನ್ಯಗಳನ್ನು ಸಮಾಜದ ಮುಂದೆ ತೆರದಿಡಲಿದ್ದಾರೆ” ಎಂದು ಹೇಳಿದ್ದಾರೆ.
    2018 ರಲ್ಲಿ ಮಿ ಟೂ ಅಭಿಯಾನ ಆರಂಭವಾದಾಗ ಪತ್ರಕರ್ತೆ ಪ್ರಿಯಾ ರಮಣಿ ಕೂಡ ತಾವು ಅಕ್ಬರ್ ಅವರಿಂದ ಅನುಭವಿಸಿದ ದೌರ್ಜನ್ಯವನ್ನು ಟ್ವಿಟ್ ಮೂಲಕ ತಿಳಿಸಿದ್ದರು. 20 ವರ್ಷದ ಹಿಂದೆ ಅಕ್ಬರ್ ಅವರ ಬಳಿ ನಾನು ಉದ್ಯೋಗ ಕೇಳಿಕೊಂಡು ಹೋದಾಗ, ಅವರು ಹೋಟೆಲ್ ಕೋಣೆಯೊಂದಕ್ಕೆ ನನ್ನನ್ನು ಕರೆಯಿಸಿಕೊಂಡು ನನ್ನ ಜೊತೆ ಅಸಭ್ಯ ವರ್ತನೆ ತೋರಿದ್ದರು ಎಂದು ಆರೋಪಿಸಿದ್ದರು.
    2018 ರಲ್ಲಿ ಕೇಂದ್ರ ಸಚಿವರಾಗಿದ್ದಾಗ ಅಕ್ಬರ್ ಅವರು ಪ್ರಿಯಾ ರಮಣಿ ವಿರುದ್ಧ ಕೋರ್ಟ್​ನಲ್ಲಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಮತ್ತೆ ವಿಶ್ವದ ಶ್ರೀಮಂತನಾದ ಜೆಫ್ ಬೆಜೋಸ್; ಹಿಂದೆ ಬಿದ್ದವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts