More

    ನನಗೆ ಕರೊನಾ ಪಾಸಿಟಿವ್ ಇಲ್ಲ – ಅನಿಲ ಬೆನಕೆ

    ಬೆಳಗಾವಿ: ಕರೊನಾ ಸೋಂಕಿನ ಲಕ್ಷಣ ಕಂಡುಬಂದಿದ್ದರಿಂದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಮುನ್ನೆಚ್ಚರಿಕೆಗಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಶಾಸಕರಿಗೆ ಸೋಂಕು ತಗುಲಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಮಾಹಿತಿ ಬಗ್ಗೆ ‘ವಿಜಯವಾಣಿ’ಯೊಂದಿಗೆ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಜ್ವರ ಕಾಣಿಸಿಕೊಂಡಿದ್ದರಿಂದ ಶನಿವಾರ ನಾನು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡಿದ್ದೆ. ಸೋಮವಾರ ವರದಿ ಬಂದಿದ್ದು, ಮನೆಯಲ್ಲಿಯೇ ಇರುವಂತೆ ವೈದ್ಯರೂ ತಿಳಿಸಿದ್ದಾರೆ. ಆದರೆ, ಈವರೆಗೂ ವೈದ್ಯಾಧಿಕಾರಿಗಳು ನನಗೆ ಕರೊನಾ ಪಾಸಿಟಿವ್ ಬಂದಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.

    ಎರಡು ದಿನದ ಹಿಂದೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಮಂಡ್ಯ ಜಿಲ್ಲೆಯ ಓರ್ವ ಶಾಸಕರ ಸಂಪರ್ಕಕ್ಕೆ ಬಂದಿದ್ದರಿಂದ ಮುನ್ನೆಚ್ಚರಿಕೆಗಾಗಿ ಶಾಸಕ ಅಭಯ ಪಾಟೀಲ ಮತ್ತು ನನಗೆ ವೈದ್ಯರ ಸಲಹೆ ಮೇರೆಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಆದರೆ, ಇಬ್ಬರ ವರದಿಯೂ ನೆಗಟಿವ್ ಬಂದಿತ್ತು. ಆದರೆ, ವೈದ್ಯಾಧಿಕಾರಿಗಳು ಸೋಮವಾರ ಕರೆ ಮಾಡಿ, ಮುನ್ನೆಚ್ಚರಿಕೆಗಾಗಿ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿದ್ದಾರೆ. ಇನ್ನೂ ಒಂದು ವಾರ ಮನೆಯಲ್ಲೇ ಇರುವುದಾಗಿ ಅವರು ತಿಳಿಸಿದರು.

    ಇನ್ನು, ಶಾಸಕರು ಶುಕ್ರವಾರವಷ್ಟೇ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ ಅವರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರಿಂದ ಸಚಿವ ಅಂಗಡಿ, ಶಾಸಕ ಅಭಯ ಪಾಟೀಲ, ಪರ್ತಕರ್ತರು ಹಾಗೂ ಸಚಿವರ, ಶಾಸಕರ ಆಪ್ತ ಸಹಾಯಕರಲ್ಲಿ ಇದೀಗ ಆತಂಕ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts