More

    IPL 2024: ಸೋಲಿನಿಂದ ಕಂಗಾಲಾಗಿದ್ದ ಲಕ್ನೋಗೆ ಬಂತು ಆನೆಬಲ! ತಂಡ ಸೇರಿದ ಸ್ಟಾರ್​ ಬೌಲರ್​

    ಲಕ್ನೋ: ಏಪ್ರಿಲ್ 19ರಂದು ರುತುರಾಜ್ ಗಾಯಕ್ವಾಡ್​ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಲಕ್ನೋ ಸೂಪರ್ ಜೈಂಟ್ಸ್ (LSG) ಪಂದ್ಯಕ್ಕೆ ಮುಂಚಿತವಾಗಿಯೇ ಇದೀಗ ಲಕ್ನೋ ತಂಡಕ್ಕೆ ಸ್ಟಾರ್​ ವೇಗಿಯ ಎಂಟ್ರಿಯಾಗಿದ್ದು, ಇದು ಕೆ.ಎಲ್. ರಾಹುಲ್ ಪಡೆಗೆ ಆನೆಬಲ ತುಂಬಿದಂತಾಗಿದೆ.

    ಇದನ್ನೂ ಓದಿ: ಬಾಲಕಿ ಅಪಹರಿಸಿ ಜಮೀನು ಬರೆಸಿಕೊಂಡ ಡಿಕೆ ಶಿವಕುಮಾರ್: ಮಾಜಿ ಪ್ರಧಾನಿ ದೇವೇಗೌಡ ಗಂಭೀರ ಆರೋಪ

    ಸಣ್ಣ ಇಂಜುರಿಯಿಂದ ಬಳಲುತ್ತಿದ್ದ ಮಯಾಂಕ್ ಯಾದವ್ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ತಮ್ಮ ವೇಗದ ಬೌಲಿಂಗ್‌ಗೆ ಮರಳಲು ಸಜ್ಜಾಗಿದ್ದಾರೆ. ಮಯಾಂಕ್ ವಾಪಾಸ್​ ಆಗಿರುವುದು ಸದ್ಯ ತಂಡಕ್ಕೆ ಮತ್ತಷ್ಟು ಬಲ ಹೆಚ್ಚಿಸಿದ್ದು, ಬಲಿಷ್ಠ ತಂಡ ಎಂದೇ ಹೆಸರುವಾಸಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೆಣಸಾಡಲು ಉತ್ತಮ ಫಾರ್ಮ್​ ಹೊಂದಿದಂತಾಗಿದೆ.

    ಮಯಾಂಕ್ ಕೇವಲ ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಗಾಯಗೊಂಡಿದ್ದರು. ತದನಂತರ ಮುಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮ್ಯಾಚ್​​ಗಳಲ್ಲಿ ಇಂಜುರಿಯಿಂದ ಹೊರಉಳಿದರು. ಅವರ ಅನುಪಸ್ಥಿತಿಯಲ್ಲಿ, ಲಕ್ನೋ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಇದೀಗ ಅವರ ರೀ-ಎಂಟ್ರಿ ಗೆಲುವು ತಂದುಕೊಡಲಿದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts