More

    ಲೋಕದೊಳಿತಿಗೆ ಕಿವಿ,ಕಣ್ಣು ,ನಾಲಿಗೆಗಳು ಮಂಗಳ ಮಯವಾಗಲಿ

    ಗೋಕರ್ಣ: ನಮ್ಮ ಕಿವಿಗಳು ಶುಭವಾದ, ಕಲ್ಯಾಣಕರವಾದ ಮತ್ತು ಮಂಗಳ ಮಯವಾದವುಗಳನ್ನು ಮಾತ್ರ ಕೇಳುವಂತಾಗಲಿ.

    ಕಣ್ಣುಗಳಿಗೆ ಇಂತಹ ದೃಶ್ಯಗಳೇ ಬೀಳಲಿ. ನಾಲಿಗೆ ಮೇಲೆ ಇವುಗಳೇ ಉಲಿಯುವಂತಾಗಲಿ ಎನ್ನುವುದೇ ’ಭದ್ರಮ್​ಕರ್ಣೆ’ ಮಂತ್ರದ ಆಶಯವಾಗಿದೆ. ಸಮಸ್ತ ಲೋಕ ಮಂಗಳಮಯವಾಗಲು ಇದೇ ಮೂಲ ಮಂತ್ರವಾಗಿದೆ ಎಂದು ಭಾನುವಾರ ಸಂಘಟನಾ ಚಾತುರ್ವಸ್ಯದ 14ನೇ ದಿನದ ದಿವ್ಯ ಸಂದೇಶದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿದರು.

    ’ಭದ್ರಮ್ ಕರ್ಣೆಭಿ ಶ್ರುಣುಯಾಮಿ ದೇವಾಃ’ ಎನ್ನುವುದು ದೇವಭಾವ ನಮ್ಮಲ್ಲಿ ಉತ್ಪನ್ನವಾಗುವಂತೆ ಮಾಡುವ ಪಾವಿತ್ರ್ಯ ಮತ್ತು ಅರ್ಹತೆಯನ್ನು ಪ್ರಾರ್ಥಿಸುವ ಮಂತ್ರವಾಗಿದೆ.

    ಎಲ್ಲರೂ ಹಾಗೂ ಎಲ್ಲವೂ ಶುಭ ಮತ್ತು ಮಂಗಳಮಯವಾಗಿ ಒಳಿತಿಗೆ ಕಾರಣವಾದರೆ ಸಹಜವಾಗಿ ದೇಶವೂ ಮಂಗಳಮಯವಾಗುತ್ತದೆ. ಹಾಗಾದಾಗ ಅದೇ ನಿಜವಾದ ರಾಮರಾಜ್ಯ.

    ಲೋಕದ ಸಮಸ್ತರಿಗೆ ಒಳಿತನ್ನು ಬಯಸುವ ಮಂಗಳಮಯ ಸಮಾಜವೇ ನಿಜ ಅರ್ಥದ ರಾಮರಾಜ್ಯ. ಇಂತಹವುಗಳಿಂದಲೇ ತುಂಬಿದ್ದ ಅಯೋಧ್ಯೆಯನ್ನು ಮಹರ್ಷಿ ವಾಲ್ಮೀಕಿ ಭೂ ಲೋಕದ ಸ್ವರ್ಗ ಎಂದು ಕರೆದಿದ್ದಾರೆ.

    ಆದರೆ ಇಂದು ಎಲ್ಲವೂ ಕಲುಷಿತ. ನಾವು ಸೇವಿಸುವ ಗಾಳಿ, ಕುಡಿವ ನೀರು ಎಲ್ಲವೂ ವಿಷಮಯ. ಎಲ್ಲೆಡೆ ಮಂಗಳದ ಒಳಿತಿನ ಬದಲು ಕೇಡನ್ನು ಕಾಣುತ್ತಿದ್ದೇವೆ. ಆದ್ದರಿಂದ ಅಮಂಗಲ, ಅಶುಭ, ಕಲ್ಮಶ ಮತ್ತು ಕೊಳಕು ಒಡಮೂಡದ ಅಂತರ್ಯ ಮತ್ತು ಬಹಿರ್ ಶುದ್ಧಿಯ ಪವಿತ್ರ ಭಾವ ಉತ್ಪನ್ನವಾಗುವಂತಾಗಲಿ.

    ಈ ಮಂಗಳಕರ ಕಾರ್ಯ ಅಶೋಕೆಯ ಪುಣ್ಯ ಪರಿಸರದ ನಮ್ಮ ಗುರುಕುಲಗಳಿಂದಲೇ ಪ್ರಾರಂಭವಾಗಲಿ ಎಂದು ಶ್ರೀಗಳು ಸಂದೇಶ ಅನುಗ್ರಹಿಸಿ ಆಶೀರ್ವದಿಸಿದರು.

    ಧರ್ಮಸಭೆಯಲ್ಲಿ ಹವ್ಯಕ ಮಹಾ ಮಂಡಲದ ಹಿಂದಿನ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ವಸ್ಯ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಟಿ.ಜಿ. ಪ್ರಸನ್ನಕುಮಾರ, ಶೈಕ್ಷಣಿಕ ಸಂಯೋಜಕಿ ಅಶ್ವಿನಿ ಉಡುಚೆ, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts