More

    ಐಷಾರಾಮಿ ಜೀವನಕ್ಕಾಗಿ ತಾಯಿಯನ್ನೇ ಯುವತಿಯನ್ನಾಗಿಸಿದ ಮಗ: ಇವರ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

    ಹೈದರಾಬಾದ್​: ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ನಕಲಿ ಪ್ರೋಫೈಲ್​ ಸೃಷ್ಟಿಸಿ ಕ್ಯಾಲಿಫೋರ್ನಿಯಾ ಮೂಲದ ಅನಿವಾಸಿ ಭಾರತೀಯರೊಬ್ಬರಿಗೆ ತೆಲಂಗಾಣ ಕುಟಂಬವೊಂದು 65 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    ಬಂಧಿತರನ್ನು ಮಾಳವಿಕ ದೇವತಿ (44) ಆಕೆಯ ಮಗ ವೆಂಕಟೇಶ್ವರ ಲಲಿತ್​ ಗೋಪಾಲ್​ ದೇವತಿ (22) ಎಂದು ಗುರುತಿಸಲಾಗಿದ್ದು, ಮಾಳವಿಕ ಪತಿ ಶ್ರೀನಿವಾಸ್​ ದೇವತಿ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಹರಿದ, ಮಾಸಿದ ಧ್ವಜ ಹಾರಿಸಿದ ಗ್ರಾಪಂ: ಬಚಾವ್ ಆಗಲು ಹೋಗಿ ಮತ್ತೊಂದು ಎಡವಟ್ಟು

    ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ವರುಣ್​ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ನಾನು ಮೋಸದ ಜಾಲಕ್ಕೆ ಬೀಳುತ್ತಿದ್ದೇನೆ ಎಂಬುದನ್ನು ಅರಿಯದೇ ವರುಣ್​ ಬರೋಬ್ಬರಿ 65 ಲಕ್ಷ ರೂ. ಅನ್ನು ಮಾಳವಿಕ ಬ್ಯಾಂಕ್​ ಖಾತೆಗೆ ವರ್ಗಾಯಿಸಿದ್ದರು.

    ಕೀರ್ತಿ ಮಾಧವನೇನಿ ಹೆಸರಿನಲ್ಲಿ ಮಾಳವಿಕ ಮ್ಯಾಟ್ರಿಮೋನಿಯದಲ್ಲಿ ನಕಲಿ ಪ್ರೊಫೈಲ್​ ತೆರೆದು ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಅಲ್ಲದೆ, ನಾನೋರ್ವ ವೈದ್ಯೆ ಆಗಿದ್ದು, ಹೈದರಾಬಾದ್​ನ ಜಿಬಿಲಿ ಹಿಲ್ಸ್​ನಲ್ಲಿ ಮನೆಯಿದೆ. ಅನೇಕ ಆಸ್ತಿಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರು.

    ಭರತ್​ ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಪ್ರೊಫೈಲ್​ ತೆರೆಯಲು ಮಾಳವಿಕ ಮಗ ಗೋಪಾಲ್​ ಸಹಾಯ ಮಾಡಿದ್ದ. ಸಂಪರ್ಕಕ್ಕೆ ಬಂದ ಹಾಗೂ ವಧು ಹುಡುಕುತ್ತಿದ್ದ ವರುಣ್​ರೊಂದಿಗೆ ಮಾಳವಿಕ ಚಾಟ್​ ಮಾಡುತ್ತಿದ್ದಳು. ಕತೆ ಕಟ್ಟಿದ್ದ ಮಾಳವಿಕ, ಕೀರ್ತಿ ಹೆಸರಿನಲ್ಲಿ ನನ್ನ ತಂದೆ ಸಾವಿಗೀಡಾದ ಮೇಲೆ ನನಗೂ ಮತ್ತು ನನ್ನ ತಾಯಿ (ಮಹಾಲಕ್ಷ್ಮಿ ಮಾಧವನೇನಿ ಎಂಬ ಹೊಸ ಪಾತ್ರ ಸೃಷ್ಟಿ) ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿದೆ ಎಂದು ನಂಬಿಸಿದ್ದಳು.

    ಇದನ್ನೂ ಓದಿ: ‘ಆ ವೇಳೆ ಕಾಲುಗಳು ಒಂದಕ್ಕೊಂದು ಹೊಂದಿಕೊಂಡಿದ್ದವಾ’ ಎಂದು ಮಹಿಳೆಗೆ ಅಶ್ಲೀಲ ಪ್ರಶ್ನೆ ಕೇಳಿದ್ದ ಜಡ್ಜ್​ ಔಟ್​…

    ಆಸ್ತಿಯನ್ನು ವರ್ಗಾಯಿಸುವಂತೆ ತಾಯಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಆಸ್ತಿ ನನ್ನಲ್ಲೇ ಉಳಿಯುವುದಕ್ಕಾಗಿ ಮದುವೆ ಆಗಬೇಕೆಂದುಕೊಂಡಿದ್ದೇನೆ ಎಂದಿದ್ದಳು. ಹೀಗೆ ಇಬ್ಬರ ನಡುವೆ ಚಾಟಿಂಗ್​ ನಡೆದಿತ್ತು. ಕೆಲವು ವಾರಗಳ ಬಳಿಕ ಆಸ್ತಿ ವಿಚಾರವಾಗಿ ಕಾನೂನು ಹೋರಾಟ ನಡೆಸಲು ಹಣದ ಸಹಾಯ ಮಾಡುವಂತೆ ವರುಣ್​ ಬಳಿ ಮಾಳವಿಕ ಕೇಳಿದ್ದಳು. ಇತ್ತ ಕಾನೂನು ಹೋರಾಟ ಮುಗಿದು ಆಸ್ತಿ ಕೀರ್ತಿ ವಶವಾದರೆ ನನಗೂ ಸಮಪಾಲು ಬರುತ್ತದೆ ಎಂದು ದುರಾಸೆಪಟ್ಟ ವರುಣ್​ ಹಿಂದೆ-ಮುಂದೆ ನೋಡದೆ ಹಣ ವರ್ಗಾಯಿಸಿಬಿಟ್ಟ. ಹಣ ಬಂದ ಕೂಡಲೇ ಮಾಳವಿಕ ಚಾಟ್​ ಮಾಡುವುದನ್ನು ನಿಲ್ಲಿಸಿಬಿಟ್ಟಳು. ಬಳಿಕ ಮೋಸ ಹೋಗಿರುವುದು ಅರ್ಥವಾಗಿ ವರುಣ್​ ಜುಬಿಲಿ ಹಿಲ್ಸ್​ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸ್ನೇಹಿತನ ಮೂಲಕವೇ ಔಪಚಾರಿಕವಾಗಿ ದೂರು ಸಹ ದಾಖಲಿಸಿದ್ದಾರೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್​ ಮೂಲಕ ಪೊಲೀಸರಿಗೆ ಹೇಳಿಕೆ ಸಹ ನೀಡಿದ್ದಾರೆ.

    ಮಾಳವಿಕ ವಿರುದ್ಧ ಪ್ರಕರಣ ದಾಖಲಿಸಿದ್ದು ಪೊಲೀಸರಿಗೆ ಇದೇ ಮೊದಲೇನಲ್ಲ. ನಲ್ಲಕುಂಟ ಮತ್ತು ಮರೇಡ್​ಪಲ್ಲಿಯಲ್ಲೂ ಮಾಳವಿಕ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ಗೀತಾಂಜಲಿ ಹೆಸರಿನಲ್ಲಿ ಎನ್​ಆರ್​ಐಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಸೈಬರ್​ ಕ್ರೈಂನಲ್ಲೂ ದಾಖಲಾಗಿದೆ. ಅದ್ಧೂರಿ ಜೀವನ ನಡೆಸಲು ಹಾಗೂ ಆರ್ಥಿಕ ಸಂಕಷ್ಟದಿಂದ ಅಪರಾಧ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಶಾಲಾ ಬಾಲಕಿ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಸಿಕ್ತು ಜಾಮೀನು…!

    ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್, ಮಾಲ್ ‌ಓಪನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts