More

    ಮಠಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವೃದ್ಧಿ

    ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದ ದುರದುಂಡೇಶ್ವರ ಮಠದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗೆ ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಕಾಕತಿ ಸಿಪಿಐ ರಾಘವೇಂದ್ರ ಹಳ್ಳೂರ ಅವರು ಶುಕ್ರವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಮಠ-ಮಾನ್ಯಗಳು ಜಾತಿಭೇದ ಮಾಡದೆ ಸಮಾಜದಲ್ಲಿ ಶಾಂತಿ-ಸೌಹಾರ್ದ ನೆಲೆಸುವಂತೆ ಮಾಡುತ್ತವೆ. ತಂತ್ರಜ್ಞಾನದ ಯುಗದಲ್ಲೂ ಧರ್ಮ, ಸಂಸ್ಕೃತಿ ಬೆಳೆಸುವುದರ ಜತೆಗೆ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.

    ಶಿವಬಸವ ಸ್ವಾಮೀಜಿ ಹಾಗೂ ಗುರುಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಬೆಳಗಾವಿ ಕುಸ್ತಿ ಸಂಘಟನೆ ಅಧ್ಯಕ್ಷ ವಿಶ್ವನಾಥ ಪಾಟೀಲ, ಕುಸ್ತಿಪಟು ಪ್ರಕಾಶ ಮುಧೋಳ ವೇದಿಕೆಯಲ್ಲಿದ್ದರು. ಕಲಗೌಡ ಪಾಟೀಲ, ಚಂದ್ರಕಾಂತ ಕೇದಾರಿ, ರಾಜು ಮಾಯಣ್ಣ, ದತ್ತಾ ಸುತಾರ, ಕಲ್ಲಪ್ಪ ಸಿಂಗೆ, ಗಜಾನನ ಕಾಗಣಿಕರ, ಕಲ್ಲಣ್ಣ ದೇಸಾಯಿ, ವಜೀರ್ ಪಾಟೀಲ, ರಾಯಣ್ಣ ನರೋಟಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts