More

    ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!

    ಚೆನ್ನೈ: ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾಕ್ಕೆ ಅಭೂತಪೂರ್ವ ಆರಂಭ ಸಿಕ್ಕಿದೆ. ಬಿಡುಗಡೆಯಾದ ನಾಲ್ಕೈದು ಭಾಷೆಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ನಡುವೆ ಸಿನಿಮಾ ನೋಡಿದ ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳಿಂದ ಸಿನಿಮಾದ ಎಚ್​ಡಿ ಪ್ರಿಂಟ್ ಲೀಕ್ ಆಗಿದೆ. ತಮಿಳ್ ರಾಕರ್ಸ್ ಚಿತ್ರವನ್ನು ಪೈರಸಿ ಮಾಡಿದ್ದಾರೆ.

    ಇದನ್ನೂ ಓದಿ: VIDEO: ಬೆಲ್ಲಿ ಡಾನ್ಸ್​ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್​

    ಲೋಕೇಶ್​ ಕನಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾದಲ್ಲಿ ಜೆಡಿ ಹೆಸರಿನ ಪಾತ್ರದಲ್ಲಿ ಪ್ರೊಫೆಸರ್​ ಆಗಿ ವಿಜಯ್ ಕಾಣಿಸಿಕೊಂಡಿದ್ದು, ಅವರ ಎದುರಿಗೆ ಖಡಕ್ ವಿಲನ್ ಅವತಾರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಇದೀಗ ಇದೇ ಸಿನಿಮಾ ಮೇಲೆ ಕಿಡಿಗೇಡಿಗಳ ವಕ್ರ ದೃಷ್ಟಿ ನೆಟ್ಟಿದ್ದು, ಆನ್​ಲೈನ್​ನ ಹಲವು ವೆಬ್​ಸೈಟ್​ಗಳಲ್ಲಿ ಸೋರಿಕೆ ಆಗಿದೆ. ಈ ವಿಚಾರ ಚಿತ್ರತಂಡದ ಗಮನಕ್ಕೆ ಬಂದಿದ್ದು, ಲಿಂಕ್​ಗಳನ್ನು ತೆರೆವುಗೊಳಿಸುವ ಕೆಲಸವೂ ನಡೆಯುತ್ತಿದೆ.

    ಇದನ್ನೂ ಓದಿ: ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

    ಮೂಲ ತಮಿಳು ಸೇರಿ ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಸರ್ಕಾರದ ನಿಮಯದ ಪ್ರಕಾರ ಶೇ. 50 ಸೀಟುಗಳ ಅನುಮತಿ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಶೋಗಳನ್ನು ಚಿತ್ರ ಪಡೆದುಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿಯೂ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ವಿಶೇಷ ಏನೆಂದರೆ, ಈ ಚಿತ್ರಕ್ಕೆ ಸ್ಪತಿಸ್ಪರ್ಧಿಗಳು ಯಾರೂ ಇರದ ಕಾರಣ, ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್​)

    ‘ಬುದ್ಧನ ಸಾವಿನ ಬಳಿಕ ಏನಾಯ್ತು?’; ರಿಷಬ್ ಶೆಟ್ಟಿ ಬಳಗದಿಂದ ಹೊಸ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts