More

    ಬಾಲ ರಾಮಯ್ಯನಾಗಿ ಆಕಾಶ್; ‘ಲೀಡರ್ ರಾಮಯ್ಯ’ ಚಿತ್ರದಲ್ಲಿ ನಟಿಸಲಿರುವ ಮಾ. ಆಕಾಶ್

    ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ೋಷಣೆಯಾಗಿತ್ತು. ಸತ್ಯರತ್ನಂ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಇದೀಗ ಚಿತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಬಾಲ್ಯದ ಪಾತ್ರಕ್ಕೆ ಮಾಸ್ಟರ್ ಆಕಾಶ್ ಆಯ್ಕೆಯಾಗಿದ್ದಾರೆ.

    ಕಳೆದ ವರ್ಷ ತೆರೆಗೆ ಬಂದ ‘ೈಟರ್’ ಚಿತ್ರದಲ್ಲಿ ನಾಯಕ ವಿನೋದ್ ಪ್ರಭಾಕರ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದ ಆಕಾಶ್ ಸದ್ಯ 9ನೇ ತರಗತಿ ಓದುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಾಲ್ಯದಿಂದ ಹಿಡಿದು ಪಿಯುವರೆಗಿನ ದಿನಗಳ ಕಥೆಯಲ್ಲಿ ಆಕಾಶ್ ಕಾಣಿಸಿಕೊಳ್ಳಲಿದ್ದಾರೆ. ಇಂದು ಆಕಾಶ್ ಹುಟ್ಟುಹಬ್ಬದ ಪ್ರಯುಕ್ತ ನಾಲ್ಕು ಹೊಸ ಚಿತ್ರಗಳ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

    ಈ ಬಗ್ಗೆ ಸಂತಸ ಹಂಚಿಕೊಂಡಿರುವ ಆಕಾಶ್, ‘ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು. ಅದಕ್ಕೆ ಅಪ್ಪ – ಅಮ್ಮನಿಂದ ಸಹಕಾರ ಸಿಕ್ಕಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾಸ್ಟರ್ ಬಳಿ ಸ್ಟಂಟ್ಸ್, ನಿರ್ದೇಶಕ ಲಕ್ಕಿ ಶಂಕರ್ ಸರ್ ಬಳಿ ಆಕ್ಟಿಂಗ್ ಕಲಿಯುತ್ತಿದ್ದೇನೆ. ಹಾಗೆಯೇ ಡಾನ್ಸ್, ವರ್ಕೌಟ್ ಸೇರಿ ಸಿನಿಮಾಗೆ ಬೇಕಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಈ ವರ್ಷದ ಹುಟ್ಟುಹಬ್ಬದಂದು ನಾಲ್ಕು ಸಿನಿಮಾಗಳು ೋಷಣೆಯಾಗಿರುವುದು ಖುಷಿ ನೀಡಿದೆ’ ಎಂದು ಹೇಳಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts