More

    ಮಸ್ತಕ ಭಂಡಾರವೇ ಬಹುದೊಡ್ಡ ಸಂಪತ್ತು: ಯುಗಧರ್ಮ ರಾಮಣ್ಣ

    ಹೊಳೆಹೊನ್ನೂರು: ಹಳ್ಳಿಗಳಲ್ಲಿ ಗ್ರಾಮೀಣ ಸೊಗಡಿನ ಸಂಸ್ಕಾರ, ಸಂಸ್ಕೃತಿಗಳು ಮಾಯವಾಗುತ್ತಿವೆ. ಮಾನವ ನೀತಿ ನಿಯಮಗಳನ್ನು ಅರಿತು ಜೀವನ ನಡೆಸಬೇಕು ಎಂದು ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಹೇಳಿದರು.
    ಸಮೀಪದ ಮೈದೊಳಲಿನಲ್ಲಿ ದೊಣ್ಣೆ ಕೆಂಚಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾನಪದ ಸಿರಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಹಿರಿಯರು ಹಬ್ಬ, ಜಾತ್ರೆಯಂತಹ ಆಚರಣೆಗಳನ್ನು ಮುನ್ನೆಲೆಗೆ ತಂದರು ಎಂದರು.
    ಆಧುನಿಕತೆಯ ಭರಾಟೆಗೆ ಸಿಲುಕಿರುವ ಹೆಣ್ಣು ಮಕ್ಕಳಿಗೆ ಅಡುಗೆಯ ಸಾಮಾನ್ಯ ಜ್ಞಾನವೂ ಇಲ್ಲವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಸ್ತಕದಲ್ಲಿ ಪರಿಪೂರ್ಣ ಮಾಹಿತಿ ಇದ್ದರೆ ನೂರೊಂದು ಪುಸ್ತಕ ಬರೆಯಬಹುದು. ಮಸ್ತಕ ಭಂಡಾರಕ್ಕಿAತ ಯಾವುದೂ ದೊಡ್ಡದಿಲ್ಲ. ಮನುಷ್ಯನಿಗೆ ಪರಮಾತ್ಮ ಅಜ್ಞಾನ, ವಿಜ್ಞಾನ, ಸುಜ್ಞಾನ, ಮಹಾಜ್ಞಾನ, ದಿವ್ಯಜ್ಞಾನ, ಬ್ರಹ್ಮಜ್ಞಾನ ಎಂಬ ೬ ಜ್ಞಾನಗಳನ್ನು ಕರುಣಿಸಿದ್ದಾನೆ. ಸಕಲ ಜ್ಞಾನವನ್ನು ಅರಿತಿರುವ ಮಾನವ ಅಜ್ಞಾನಿಯಾಗುತ್ತಿದ್ದಾನೆ ಎಂದರು.
    ಮನುಷ್ಯ ತನ್ನಲ್ಲಿರುವ ರಾಕ್ಷಸ ಗುಣಗಳನ್ನು ಕಳೆದುಕೊಂಡು ಸುಜ್ಞಾನದ ಕಡೆ ಸಾಗಬೇಕಿದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಒಂದು ಅಂಗ ರಜೆ ಹಾಕಿದರೆ ದೇಹದ ಪರಿಸ್ಥಿತಿ ಕೆಡುತ್ತದೆ. ಹಾಗೆಯೇ ಮಾತುಗಳು ಎಲ್ಲೆ ಮೀರಿದರೆ ನಮ್ಮ ನಾಲಿಗೆಯೇ ನಮ್ಮ ಪಾಲಿನ ಪರಮ ವೈರಿಯಾಗಿ ಕಾಡುತ್ತದೆ ಎಂದರು.
    ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಹಾಸ್ಯ ಕವಿ ಜಗನ್ನಾಥ ಶಾಸಿö, ಸಂಗೀತಗಾರ ಜಯಪ್ಪ, ಪ್ರಮುಖರಾದ ಸಾರ್ಥಿ ರಾಜಪ್ಪ, ಭಜನೆ ಸಂಗಡಿಗರಾದ ಆಂಜನೇಯ, ಚನ್ನಕೇಶವ, ಗಣೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts