More

    ಭವ್ಯ ಮಂದಿರಕ್ಕೆ ಅನುಗುಣವಾಗಿ ಸಕಲ ಸೌಲಭ್ಯಗಳೊಂದಿಗೆ ಸಜ್ಜಾಗುತ್ತಿದೆ ಅಯೋಧ್ಯೆ ರೈಲು ನಿಲ್ದಾಣ

    ಅಯೋಧ್ಯೆ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಯುದ್ಧೋಪಾದಿಯಲ್ಲಿ ಸಾಗಿದೆ. ಮುಂದಿನ ವರ್ಷ ಫೆಬ್ರುವರಿ ಹೊತ್ತಿಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಯೋಧ್ಯೆಯ ಈಗಾಗಲೇ ಬಹುದೊಡ್ಡ ಯಾತ್ರಾ ಸ್ಥಳವಾಗಿದೆ. ಮಂದಿರ ನಿರ್ಮಾಣವಾದ ನಂತರವಂತೂ ಯಾತ್ರಾರ್ಥಿಗಳು ಸಾಗರೋಪಾದಿಯಲ್ಲಿ ಹರಿದುಬರಬಹುದಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಅಯೋಧ್ಯೆ ರೈಲು ನಿಲ್ದಾಣವನ್ನು ಈ ಮುಂಚಿತವಾಗಿಯೇ ಆಧುನೀಕರಣಗೊಳಿಸಲು ಈಗಾಗಲೇ ಕಾಮಗಾರಿ ಕೈಗೊಂಡಿದೆ.

    ಅಯೋಧ್ಯೆ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ನೋಟವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

    ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯು 2024ರ ಜನವರಿ 15 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ರಾಮ ಮಂದಿರದಿಂದ ಪ್ರೇರಿತವಾದ ವಿನ್ಯಾಸವಿರುವ ಈ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳಿಂದ ಕೂಡಿರಲಿದೆ. ಪರಿಸರ ಸ್ನೇಹಿಯಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ. ಪವಿತ್ರ ನಗರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗುಂತೆ ಅಯೋಧ್ಯೆ ರೈಲು ನಿಲ್ದಾಣವು ಸಜ್ಜಾಗಲಿದೆ.

    ಆಧುನೀಕ ಸೌಲಭ್ಯ:

    ಹೊಸ ನಿಲ್ದಾಣದ ಕಟ್ಟಡವು ಮೂರು ಅಂತಸ್ತಿನ ರಚನೆಯನ್ನು ಹೊಂದಲಿದೆ. ಒಟ್ಟು 3,645 ಚದರ ಮೀಟರ್ ವಿಸ್ತೀರ್ಣ ಇದರದ್ದಾಗಿದೆ. ಪ್ರತಿದಿನ 49,400 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಒಳಗೊಳ್ಳಲಿದೆ. ಈ ಕಟ್ಟಡವು ಶಾಪಿಂಗ್ ಮಾಲ್‌, ಕೆಫೆಟೇರಿಯಾ, ಮನರಂಜನಾ ಸೌಲಭ್ಯ, ಪಾರ್ಕಿಂಗ್ ಸ್ಥಳ, ಆಹಾರ ಪ್ಲಾಜಾ, ಪೂಜೆ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲೋಕ್‌ ರೂಮ್, ಅನಾರೋಗ್ಯ ಕೊಠಡಿ ಮತ್ತು ಶಿಶು ಆರೈಕೆ ಕೊಠಡಿಗಳಂತಹ ಎಲ್ಲಾ ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಲಿದೆ.

    ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಮತ್ತು ಅನುಕೂಲಕ್ಕಾಗಿ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳು ಮತ್ತು ಸೇತುವೆಗಳನ್ನು ಸುಧಾರಿಸಲಾಗುತ್ತಿದೆ. ನಿಲ್ದಾಣವು 12 ಲಿಫ್ಟ್‌ಗಳು, 14 ಎಸ್ಕಲೇಟರ್‌ಗಳು, ಎರಡು 6-ಮೀ ಅಗಲದ ಮೇಲ್ಸೇತುವೆಗಳನ್ನು ಹೊಂದಲಿದೆ.

    ವಿವಿಧ ಸರ್ಕಾರಿ ಇಲಾಖೆಗಳಿಗೆ ನೇಮಕ; ಪ್ರಧಾನಿಯಿಂದ 51,000 ನೇಮಕಾತಿ ಪತ್ರಗಳ ವಿತರಣೆ

    ಚೀನಾ ಸ್ಲೋಸ್ ಇಂಡಿಯಾ ಗ್ರೋಸ್; ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts