More

    ಲೈಂಗಿಕ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

    ವಿಜಯಪುರ: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ವಿರುದ್ಧ ಕಾನೂನುಕ್ರಮಕ್ಕೆ ಒತ್ತಾಯಿಸಿ ಹಾಗೂ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‌ಭೂಷಣ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಜಂಟಿ ಕಾರ್ಮಿಕ ಸಂಘಟನೆ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಕರ್ನಾಟಕ ಪ್ರಾಂತ ರೈತ ಸಂಘ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಹೆಮ್ಮೆಯ ಕುಸ್ತಿ ಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ದೆಹಲಿಯ ಜಂತರ್‌ಮಂತರದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಆದರೂ ದೆಹಲಿ ಪೊಲೀಸರು ಸಂಸದನ ವಿರುದ್ಧ ಇಲ್ಲಿಯವರೆಗೆ ಪ್ರಕರಣ ಸಹ ದಾಖಲಿಸಿಲ್ಲ. ಕೇವಲ ವಿಚಾರಣಾ ಸಮಿತಿಯನ್ನು ದೆಹಲಿ ಸರ್ಕಾರ ರಚನೆ ಮಾಡಿದೆ. ಅದನ್ನು ಬಿಟ್ಟು ಇಲ್ಲಿಯವರೆಗೆ ವಿಚಾರಣಾ ಸಮಿತಿ ನಡೆಸಿರುವ ವಿಚಾರಣೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಪ್ರಜಾಪ್ರಭುತ್ವದ ಹೆಮ್ಮೆಯ ಸಂಸ್ಥೆಯಾದ ಸಂಸತ್ತಿನಲ್ಲಿ ಸಂವಿಧಾನದ ನೀತಿ -ನಡಾವಳಿಗೆ ವಿರುದ್ಧವಾಗಿ, ಪುರುಷ ಅಹಂಕಾರವನ್ನು ಸಮರ್ಥಿಸುವ ಪುರೋಹಿತಶಾಹಿ ಯಜಮಾನಿಕೆಯನ್ನು ಸಂಕೇತಿಸುವ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ರಾಜಶಾಹಿ ಸಂಕೇತದ ಮ್ಯೂಸಿಯಂನಲ್ಲಿದ್ದ ರಾಜದಂಡವನ್ನು ಸಂಸತ್ತಿನ ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಪನೆ ಮಾಡಲಾಗಿದೆ ಇದು ಖಂಡನೀಯ ಎಂದರು.

    ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳ ಆತ್ಮಧೈರ್ಯ ಕುಂದಿಸುವ ಕೆಲಸವನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು. ತಕ್ಷಣ ಪೋಸ್ಕೋ ಕಾಯ್ದೆಯಡಿ ಬಿಜೆಪಿ ಸಂಸದರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

    ಲಕ್ಷೃಣ ಹಂದ್ರಾಳ, ಸುರೇಖಾ ರಜಪೂತ, ಭೀಮರಾಯ ಪೂಜಾರಿ, ಅನಿಲ ಹೊಸಮನಿ, ಖಾಜೇಸಾಬ ಕೊಲ್ಹಾರ, ಮಲ್ಲಿಕಾರ್ಜುನ ಎಚ್.ಟಿ. ಈರಣ್ಣ , ಶಿವಬಾಳವ್ವ ಕೊಂಡಗೂಳಿ, ಅನುಸೂಯ ಹಜೇರಿ, ಸೋನುಬಾಯಿ ಬ್ಯಾಳಿ, ಸಾಹೆಬ್ಬಿ ಶೇಖ, ರಾಜಮಾ ನದಾಫ್, ಸಂಗೀತಾ ಜೋಗನ್ನವರ, ಶಕೀಲಾ ಜಮಾದಾರ, ಸುಮಂಗಲಾ ಆನಂದಶೆಟ್ಟಿ, ಸುರೇಖಾ ವಾಗಮೋರೆ, ಶ್ರೀಶೈಲಗೌಡ ಬಿರಾದಾರ, ಭ ರತಕುಮಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts