More

    ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ

    ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್​ ನಗರದಲ್ಲಿ ಪಿಒಕೆ ನಿವಾಸಿಗಳು ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರದೇಶವನ್ನು ಹಾದುಹೋಗುವ ನೀಲಂ ಮತ್ತು ಜೇಲಂ ನದಿಗಳಿಗೆ ಅಡ್ಡಲಾಗಿ ಅಕ್ರಮವಾಗಿ ಅಣೆಕಟ್ಟೆ ನಿರ್ಮಾಣ ಮತ್ತು ಕೊಹಾಲಾ ಜಲವಿದ್ಯುತ್​ ಘಟಕದ ಸ್ಥಾಪನೆ ವಿರೋಧಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಪಾಕಿಸ್ತಾನ ಮತ್ತು ಚೀನಾಗಳು ಅಕ್ರಮವಾಗಿ ಅಣೆಕಟ್ಟೆಯನ್ನು ಕಟ್ಟುವುದರಿಂದ ಪರಿಸರಕ್ಕೆ ಭಾರಿ ಹಾನಿಯಾಗುತ್ತದೆ ಎಂಬುದು ಅವರ ಆರೋಪವಾಗಿದೆ. ಪ್ರತಿಭಟನೆಯ ಭಾಗವಾಗಿ ಅವರು #SaveRiversSaveAJK ಎಂಬ ಹ್ಯಾಷ್​ಟ್ಯಾಗ್​ ಅನ್ನು ಟ್ವಿಟ್ಟರ್​ನಲ್ಲಿ ಆರಂಭಿಸಿದ್ದಾರೆ.

    ಇದನ್ನೂ ಓದಿ: ಚೀನಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಒಯ್ದ ಉಯ್ಗುರ್​ ಸಮುದಾಯ

    ಪಾಕಿಸ್ತಾನ ಮತ್ತು ಚೀನಾಗಳು ಯಾವ ಒಪ್ಪಂದದನ್ವಯ ಈ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟೆಗಳನ್ನು ಕಟ್ಟುತ್ತಿವೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ನದಿಗಳನ್ನು ಆಕ್ರಮಿಸಿಕೊಳ್ಳುವ ಮೂಲಕ ಉಭಯ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.

    ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್​ನ ಭಾಗವಾಗಿ ಚೀನಾದ ಕಂಪನಿಯೊಂದು 1,124 ಮೆಗಾವಾಟ್​ ಸಾಮರ್ಥ್ಯದ ಜಲವಿದ್ಯುತ್​ ಘಟಕವನ್ನು ನಿರ್ಮಿಸುತ್ತಿದ್ದು, ಇದಕ್ಕಾಗಿ 2.4 ಶತಕೋಟಿ ಡಾಲರ್​ ಹಣ ವೆಚ್ಚ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಅಣೆಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

    ಜಿಹಾದಿಗಳ ಜಹಗೀರು ಪಿಒಕೆಯಲ್ಲಿ ಲೈಂಗಿಕ ಜೀತ ಪದ್ಧತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts