More

    ತಬಕದಹೊನ್ನಳ್ಳಿಯಲ್ಲಿನ ಮದ್ಯ ಮಳಿಗೆಗೆ ಭಾರಿ ವಿರೋಧ… ನೂರಾರು ಮಹಿಳೆಯರು ಮಾಡಿದ್ದೇನು!

    ಕಲಘಟಗಿ: ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಎಂಎಸ್​ಐಎಲ್ ಮದ್ಯ ಮಳಿಗೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಮಂಗಳವಾರ ಗ್ರಾಮದ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಮಳಿಗೆ ಬಂದ್ ಮಾಡುವಂತೆ ಪ್ರತಿಭಟನೆ ಮಾಡಿ, ತಾಲೂಕು ಅಬಕಾರಿ ನಿರೀಕ್ಷಕಗೆ ಮನವಿ ಸಲ್ಲಿಸಿದರು.

    ಗ್ರಾಮದಲ್ಲಿ ಸೋಮವಾರ ನೂತನ ಎಂಎಸ್​ಐಎಲ್ ಮಳಿಗೆ ಪ್ರಾರಂಭವಾಗಿದೆ. ಮಾರನೆಯ ದಿನವೇ ಜನ ಸೇರಿ ಮಳಿಗೆ ಸ್ಥಗಿತಗೊಳಿಸಲು ಒಕ್ಕೊರಲ ಧ್ವನಿಯಿಂದ ಆಗ್ರಹಿಸಿದರು.

    ಮನವಿ ನೀಡಿದ ಸಾರ್ವಜನಿಕರು: ತಬಕದಹೊನ್ನಳ್ಳಿ ಗ್ರಾಮದ ಹೊರಗೆ ನಿರ್ವಿುಸಿರುವ ಮದ್ಯದ ಅಂಗಡಿ ಕಟ್ಟಡವು ಬೀರವಳ್ಳಿ, ಬೆಂಡಲಗಟ್ಟಿ ರಸ್ತೆಗೆ ಹೊಂದಿಕೊಂಡಿದೆ. ಹತ್ತಿರದಲ್ಲೇ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಗಂಡು ಮಕ್ಕಳ ಶಾಲೆ ಹಾಗೂ ಹಾಸ್ಟೆಲ್ (ಮಕ್ಕಳ ವಸತಿ) ಇದ್ದು, ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಾರದು. ಹೀಗಾಗಿ ಮಳಿಗೆ ಬಂದ್ ಮಾಡುವಂತೆ ಆಗ್ರಹಿಸಿದರು.

    ಗ್ರಾಪಂ ಸದಸ್ಯ ಬಸಪ್ಪ ಬಡಪ್ಪನವರ ಮಾತನಾಡಿ, ಹಳ್ಳಿಗಳಲ್ಲಿ ಮದ್ಯದಂಗಡಿ ಪ್ರಾರಂಭವಾದರೆ ಯುವಕರು ಕುಡಿತದ ದಾಸರಾಗುತ್ತಾರೆ. ಈ ಮಳಿಗೆ ಶಾಲೆ ಮತ್ತು ಮಕ್ಕಳ ವಸತಿ ಗೃಹಕ್ಕೆ ಹೋಗುವ ದಾರಿಯಲ್ಲಿದೆ. ಆದ್ದರಿಂದ ಗ್ರಾಮದ ಮಹಿಳೆಯರು ಮತ್ತು ಹಿರಿಯರು ವಿರೋಧಿಸುತ್ತಿದ್ದಾರೆ ಎಂದರು.

    ಕಲಘಟಗಿ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು. ಸಿಪಿಐ ಶ್ರೀಶೈಲ ಕೌಜಲಗಿ, ರೇಣುಕಾ ದೊಡ್ಡಮನಿ, ಬಸವ್ವ ಕೆರಿಕಾಯಿ, ನಾಗವ್ವ ಡೊಳ್ಳಿನ, ಸಾವಕ್ಕ ಶೆರೆವಾಡ, ಫಕೀರಪ್ಪ ಬರದೇಲಿ, ಕಮಲವ್ವ ನಾಗನೂರು, ಬಸವ್ವ ಬರದೇಲಿ, ಸವಿತಾ ಕುರಿ, ವಿಜಯಲಕ್ಷ್ಮಿ ಶೆರೆವಾಡ, ಶಾಂತವ್ವ ಡೊಳ್ಳಿನ, ರೇಣವ್ವ ಕರಿಕಟ್ಟಿ, ರತ್ನವ್ವ ಉಳ್ಳಾಗಡ್ಡಿ, ಲಲಿತಾ ಕುರಿ, ಮರೆವ್ವ ಮಾದರ, ಇದ್ದರು.

    ಗ್ರಾಮಸ್ಥರು ಮತ್ತು ಮಹಿಳೆಯರು ನೀಡಿದ ಮನವಿಯನ್ನು ಸ್ವೀಕರಿಸಿದ್ದೇವೆ. ಮುಂದಿನ ಕ್ರಮಕ್ಕಾಗಿ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಆರತಿ ಅಬಕಾರಿ ನಿರೀಕ್ಷಕಿ ಕಲಘಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts