More

    ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶ ನಾಳೆ

    ಗದಗ: ರಾಜ್ಯದ ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುರುಬರ ಎಸ್​ಟಿ ಮೀಸಲಾತಿ ಹೋರಾಟ ಸಮಿತಿಯಿಂದ ನ. 29 ರಂದು ಬಾಗಲಕೋಟೆಯ ಕಾಳಿದಾಸ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ. ಆದರೆ, ಆಳುವ ಪಕ್ಷಗಳ ನಿರಾಸಕ್ತಿಯಿಂದಾಗಿ ನನೆಗುದಿಗೆ ಬಿದ್ದಿದೆ ಎಂದರು.

    ರಾಜ್ಯದ ಕೊಡಗು, ಬೀದರ್, ಚಾಮರಾಜನಗರ ಭಾಗಗಳಲ್ಲಿ ಕಂಡು ಬರುವ ಜೇನು ಕುರುಬ, ಕಾಡು ಕುರುಬ, ಗೊಂಡ ಕುರುಬ, ರಾಜಗೊಂಡ ಸೇರಿ ಕುರುಬ ಜನಾಂಗದ ಉಪಪಂಗಡಗಳನ್ನು ಈಗಾಗಲೇ ಎಸ್​ಟಿಗೆ ಸೇರಿಸಲಾಗಿದೆ. ಅದೇ ಮೀಸಲಾತಿಯನ್ನು ರಾಜ್ಯದ ಇಡೀ ಕುರುಬ ಸಮಾಜಕ್ಕೆ ವಿಸ್ತರಿಸಬೇಕು. ಇದರಿಂದ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳು ದೊರೆಯಲಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.

    ಕುರುಬ ಸಮಾಜಕ್ಕೆ ಎಸ್​ಟಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಈಗಾಗಲೇ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಿದ್ದು, ಅದರ ಭಾಗವಾಗಿ ನ. 29ರಂದು ಬಾಗಲಕೋಟೆಯಲ್ಲಿ ಐದು ಜಿಲ್ಲೆಗಳನ್ನು ಒಳಗೊಂಡಂತೆ ಬೃಹತ್ ಸಮಾವೇಶ ನಡೆಯಲಿದ್ದು, ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಮಾಜದ ಶಾಸಕರು, ಸಚಿವರು ಹಾಗೂ ವಿವಿಧ ಕನಕ ಪೀಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ವಿವರಿಸಿದರು.

    ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾದ ಹೊಸಳ್ಳಿ, ಮಂಜುಳಾ ಹುಳಕಣ್ಣವರ ಉಪಸ್ಥಿತರಿದ್ದರು.

    ಸ್ವ-ಇಚ್ಛೆಯಿಂದ ಪಾಲ್ಗೊಳ್ಳಿ

    ಮುಂಡರಗಿ: ನ. 29ರಂದು ಬಾಗಲಕೋಟೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಸಮಾಜ ಬಾಂಧವರು ಸ್ವ-ಇಚ್ಛೆಯಿಂದ ಪಾಲ್ಗೊಳ್ಳಬೇಕು ಎಂದು ಎಸ್ಟಿ ಹೋರಾಟ ಸಮಿತಿ ವಿಭಾಗೀಯ ಸಂಚಾಲಕ ಡಿ.ಡಿ. ಮೋರನಾಳ ತಿಳಿಸಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಎಸ್​ಟಿ ಮೀಸಲಾತಿಗೆ ಸೇರಿಸಬೇಕು ಎಂಬುದರ ಕುರಿತು ಕಾಗಿನೆಲೆ ಶ್ರೀ ಕನಕಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಸೆಪ್ಟೆಂಬರ್​ನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಕಾಗಿನೆಲೆಯಲ್ಲಿ ನ. 8ರಂದು ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಸಲಾಗಿದೆ. ಇದೀಗ ವಿಭಾಗ ಮಟ್ಟದ ಸಮಾವೇಶ ನಡೆಸಲಾಗುತ್ತದೆ. ಕನಕಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಜ. 14ರಂದು ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಫೆ.7ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮಾಹಿತಿಗಾಗಿ ಮೊ.ಸಂ. 87479 60876 ಹಾಗೂ 99014 21685ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಸುರೇಶ ಹಲವಾಗಲಿ, ಶಿವನಗೌಡ ಗೌಡರ, ಶ್ರೀನಿವಾಸ ಅಬ್ಬಿಗೇರಿ, ವೆಂಕಟೇಶ ಯಕ್ಲಾಸಪೂರ, ಗಣೇಶ ಹಾತಲಗೇರಿ, ಲಕ್ಷ್ಮಪ್ಪ ಮಲಾರ್ಜಿ ಇತರರಿದ್ದರು.

    ಲಕ್ಷ್ಮೇಶ್ವರದಲ್ಲಿ ಸಮಿತಿ ರಚನೆ

    ಲಕ್ಷ್ಮೇಶ್ವರ: ಬಾಗಲಕೋಟೆಯಲ್ಲಿ ನಡೆಯುವ ಸಮಾವೇಶ ಹಿನ್ನೆಲೆಯಲ್ಲಿ ಅಮೋಘಿಮಠ ಸಿದ್ದಯ್ಯನವರ ಸಾನ್ನಿಧ್ಯದಲ್ಲಿ ಪಟ್ಟಣದಲ್ಲಿ ಹಾಲುಮತ ಸಮಾಜದವರಿಂದ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.

    ಸಮಾವೇಶದ ಯಶಸ್ವಿಗಾಗಿ ತಾಲೂಕು ಸಮಿತಿ ರಚಿಸಿ ಬಾಲೇಹೊಸೂರಿನ ಗ್ರಾಪಂ ಮಾಜಿ ಸದಸ್ಯ ಯಲ್ಲಪ್ಪ ಸೂರಣಗಿ ಅಧ್ಯಕ್ಷರನ್ನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಪ್ಪ ಸೂರಣಗಿ, ಮುದಕಣ್ಣ ಗದ್ದಿ ಅವರನ್ನು ಆಯ್ಕೆ ಮಾಡಲಾಯಿತು.

    ‘ಸಮಾವೇಶದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು’ ಎಂದು ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಸಂಘಟನಾ ಪ್ರಮುಖ ಅರುಣ ಅಣ್ಣಿಗೇರಿ ಮನವಿ ಮಾಡಿದರು. ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ, ರಮೇಶ ಸಂಚಗಾರ, ಗೋವಿಂದಪ್ಪ ಶರಸೂರಿ, ತಿಪ್ಪಣ್ಣ ಸಂಶಿ, ನೀಲಪ್ಪ ಶರಸೂರಿ, ಹನಮಂತಪ್ಪ ಹುರುಕನವರ, ಛಾಯಪ್ಪ ಬಸಾಪುರ, ರಾಮಣ್ಣ ರಿತ್ತಿ, ಮಂಜುನಾಥ ಜೋಗಿ, ನೀಲಪ್ಪ ಕೋರಣ್ಣವರ, ಮಾಲತೇಶ ಹೊಳಲಾಪುರ, ಸಿದ್ದು ದುರಗಣ್ಣವರ, ಶಿವರಾಜ ಹೆಗ್ಗಣ್ಣವರ, ಅಣ್ಣಪ್ಪ ರಾಮಗೇರಿ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts