More

    ಕೆಸಿಸಿ ಪಂದ್ಯದ ವೇಳೆ ‘ಹೊಯ್ಸಳ’ ಚಿತ್ರದ ಮಾಸ್​ ಹಾಡು ಬಿಡುಗಡೆ …

    ಬೆಂಗಳೂರು: ಡಾಲಿ ಧನಂಜಯ ಅಭಿನಯದ ‘ಹೊಯ್ಸಳ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೇ ಇದೆ. ಮಾರ್ಚ್​ 30ರಂದು ರಾಮನವಮಿ ಅಂಗವಾಗಿ ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ, ಶನಿವಾರ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಬಿಡುಗಡೆಗೆ ಮೇರಿ ರೆಡಿ: ಮನೋಜ್ ನಡಲುಮನೆ ನಿರ್ದೇಶನದ ಥ್ರಿಲ್ಲರ್ ಡ್ರಾಮಾ

    ಇದೊಂದು ಮಾಸ್​ ಹಾಡಾಗಿದ್ದು, ಸಂತೋಷ್​ ಆನಂದರಾಮ್​ ಬರೆದಿದ್ದಾರೆ. ಖ್ಯಾತ ಗಾಯಕ ನಕಾಶ್ ಅಜೀಜ್ ಹಾಡಿದ್ದಾರೆ. ಇನ್ನು, ಹಾಡಿನಲ್ಲಿ ಬರುವ Rapಗೆ ಯೋಗಿ ಬಿ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    ವಿಶೇಷವೆಂದರೆ, ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ ಪಂದ್ಯದ ವೇಳೆ ಈ ಹಾಡನ್ನು ಮೊದಲು ಪ್ಲೇ ಮಾಡಲಾಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲೂ ಬಿಡುಗಡೆಯಾಗಿದ್ದು, ಎರಡೂವರೆ ಲಕ್ಷ ವೀಕ್ಷಣೆ ಪಡೆದಿದೆ.

    ಇದನ್ನೂ ಓದಿ: ‘ವೃಕ್ಷಮಾತೆ’ಯ ಜತೆಗೆ ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿಕೊಂಡ ನಟರಾಜ್​ …

    ‘ಹೊಯ್ಸಳ’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತೀಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಿದ್ದು, ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದಾರೆ. ಧನಂಜಯ್​ ಈ ಚಿತ್ರದಲ್ಲಿ ಜಯದೇವ ಹೊಯ್ಸಳ ಎಂಬ ಖಡಕ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್​ ಇದ್ದಾರೆ. ಅಚ್ಯುತ್​ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts