More

    ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

    ಬೆಂಗಳೂರು: ಕನ್ನಡ ಚಲನಚಿತ್ರ ಕಪ್​ (ಕೆಸಿಸಿ)- 2023 ಟೂರ್ನಿಯಲ್ಲಿ ಡಾರ್ಲಿಂಗ್​ ಕೃಷ್ಣ ನೇತೃತ್ವದ ಹಾಗೂ ಟೀಮ್​ ಇಂಡಿಯಾ ಮಾಜಿ ಆಟಗಾರ ಸುರೇಶ್​ ರೈನಾರನ್ನು ಒಳಗೊಂಡ ಗಂಗಾ ವಾರಿಯರ್ಸ್​ ತಂಡ ಅದ್ಭುತ ಗೆಲುವಿನೊಂದಿಗೆ ಟ್ರೋಫಿ ಮುಡಿಗೇರಿಸಿಕೊಂಡಿದೆ.

    ನಿನ್ನೆ (ಫೆ.25) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ವಿಜಯನಗರ ಪ್ಯಾಟ್ರಿಯಾಟ್ಸ್​ ವಿರುದ್ಧ ಗಂಗಾ ವಾರಿಯರ್ಸ್​ ಗೆಲುವು ಸಾಧಿಸಿತು. ತಂಡದ ಗೆಲುವಿನಲ್ಲಿ ಸುರೇಶ್​ ರೈನಾ ಪ್ರಮುಖ ಪಾತ್ರ ವಹಿಸಿದರು. ಕೇವಲ 29 ಎಸೆತದಲ್ಲಿ ಅಜೇಯ 54 ರನ್​ ಬಾರಿಸಿದರು. ಬೌಲಿಂಗ್​ನಲ್ಲೂ ಚಮತ್ಕಾರ ತೋರಿ 2 ವಿಕೆಟ್​ ಪಡೆದರು. ಅಲ್ಲದೆ, ಒಂದು ರನೌಟ್​ ಸಹ ಮಾಡುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

    ಇದನ್ನೂ ಓದಿ: ಮ್ಯಾನ್​ಹೋಲ್ ಸ್ವಚ್ಛತೆಗೆ ರೋಬಾಟ್: ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಬಳಕೆ

    ಪಂದ್ಯ ಗೆದ್ದ ಬಳಿಕ ಖುಷಿ ವ್ಯಕ್ತಪಡಿಸಿರುವ ಸುರೇಶ್​ ರೈನಾ, ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದು ಅದ್ಭುತ ಅನುಭವ. ಅನೇಕ ನೆನಪುಗಳನ್ನು ಮತ್ತೆ ಹೊತ್ತು ತಂದಿತು. ಕೆಸಿಸಿಗೆ ಧನ್ಯವಾದಗಳು. ಟೂರ್ನಿಯನ್ನು ಚೆನ್ನಾಗಿ ಆಯೋಜನೆ ಮಾಡಿದ್ದ ಸಹೋದರ ಕಿಚ್ಚ ಸುದೀಪ್​ಗೂ ಧನ್ಯವಾದಗಳು ಮತ್ತು ಮುಂದಿನ ಸೀಸನ್​ಗೆ ಎದುರು ನೋಡುತ್ತಿದ್ದೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರು ಸ್ಯಾಂಡಲ್‌ವುಡ್ ತಾರೆಯರು ಮತ್ತು ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರನ್ನು ಕರೆತರುವ ಮೂಲಕ 2 ದಿನಗಳ ಟಿ10 ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. (ಏಜೆನ್ಸೀಸ್​)

    View this post on Instagram

    A post shared by Suresh Raina (@sureshraina3)

    ಮ್ಯಾನ್​ಹೋಲ್ ಸ್ವಚ್ಛತೆಗೆ ರೋಬಾಟ್: ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಬಳಕೆ

    ಗಾಡಿ ಹರಾಜು ಗೋಲ್ಮಾಲ್ ದೃಢ! ಇನ್​ಸ್ಪೆಕ್ಟರ್, ಹೆಡ್ ಕಾನ್​ಸ್ಟೆಬಲ್ ವಿರುದ್ಧ ಕಮಿಷನರ್​ಗೆ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts