More

    ಅರಸಿಕೇರಿಯಲ್ಲಿ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ 40 ಜೋಡಿ

    ಹರಪನಹಳ್ಳಿ: ತಾಲೂಕಿನ ಅರಸಿಕೇರಿ ಕೋಲಶಾಂತೇಶ್ವರಮಠದಲ್ಲಿ ಕೋಲಶಾಂತೇಶ್ವರ ಜನ ಕಲ್ಯಾಣ ಕೇಂದ್ರ ಹಾಗೂ ಕೋಲಶಾಂತೇಶ್ವರ ಸಮಾಜಮುಖಿ ಸಾಂಸ್ಕೃತಿಕ ಕಲಾಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 40 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಈ ಸಂದರ್ಭದಲ್ಲಿ ಹೂವಿನ ಹಡಗಲಿ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು ಮಾತನಾಡಿ, ಭಕ್ತಿಗಾಗಿ, ಸಮಾಜಕ್ಕಾಗಿ ಜನರಿಗಾಗಿ ತಮ್ಮ ತನು-ಮನ-ಧನದಿಂದ ಶ್ರಮಿಸಿದವರು ಕೋಲಶಾಂತ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಎಂದರು.

    ಇದನ್ನೂ ಓದಿ: ಹಿಂದೂ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ಜೋಡಿ

    ರೈತಪರ ಚಿಂತನೆ ಮಾಡುವುದರ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ಈ ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡುತ್ತಿರುವುದು ನಿಮ್ಮ ಪುಣ್ಯ. ಕಷ್ಟ-ಸುಖಕ್ಕೆ ಅನುಗುಣವಾಗಿ ಹೊಂದಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸಬೇಕು ಎಂದರು.

    ಈ ಸಂದರ್ಭ ದಾವಣಗೆರೆಯ ಡಾ.ಉದಯಕುಮಾರ ಅವರ ಪರವಾಗಿ ಪ್ರಭಾಕರ ‘ಬಸವ ಗುರುಕಿರಣ ಪ್ರಶಸ್ತಿ’ ಸ್ವೀಕರಿಸಿದರು. ಅಣ್ಣಿಗೇರಿಯ ನಡಕಟ್ಟಿನ ಅಬ್ದುಲ್ ಖಾದರ್ ಇಮಾಮ್ ಸಾಹೇಬ್ ‘ಕೋಲಶಾಂತೇಶ್ವರ ಸೇವಾ ಪ್ರಶಸ್ತಿ’ ಸ್ವೀಕರಿಸಿದರು.

    ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಜರುಗಿದವು. ಉತ್ತಂಗಿ ಹನಸಿ ಮ.ನಿ.ಪ್ರ.ಸೋಮಶೇಖರ ಸ್ವಾಮಿಗಳು ಸಾನ್ನಿದ್ಯ ವಹಿಸಿದ್ದರು.

    ಮ.ನಿ.ಪ್ರ ಸೋಮಶೇಖರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅಣ್ಣಿಗೇರಿ ಪ್ರೊ.ಎಸ್.ಎಸ್.ಅರ‌್ಲಾಪುರ, ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ ಪಾಟೀಲ್, ನೆಲಗೊಂಡನಹಳ್ಳಿ ಭರತ್, ಬಿ.ರಾಮಣ್ಣ, ಮರಿಯಪ್ಪ, ಅಜೀಮಸಾಹೇಬ್, ಲಲಿತಮ್ಮ, ಹಾಲಪ್ಪ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts