More

    ಪ್ರತಿಯೊಬ್ಬರ ಜ್ಞಾನ ಭಂಡಾರ ವೃದ್ಧಿಯಾಗಲಿ

    ಸಿರಿಗೇರಿ: ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹತ್ತು ದಿನಗಳ ಕಾಲ ನಡೆಯುವ ಬಸವ ದರ್ಶನದ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನದ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

    ಸಂಚಾರ ಜಂಗಮರಾದ ನಿರಂಜನ ಸ್ವಾಮೀಜಿ ಪ್ರವಚನ ನೀಡಿ, ಮನಸ್ಸನ್ನು ನಿಗ್ರಹಿಸಿಕೊಂಡು ಜ್ಞಾನದ ಭಂಡಾರ ವೃದ್ಧಿಸಿಕೊಳ್ಳಬೇಕು. ವಚನಕಾರರು ತಮ್ಮ ಅನುಭಾವವನ್ನು ಸಮಾಜಕ್ಕೆ ತಿಳಿಸಿಕೊಟ್ಟು ಪರಿತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬರೂ ಆತ್ಮಶುದ್ಧಿ ಮಾಡಿಕೊಂಡು ತಮ್ಮ ಕರ್ತವ್ಯಗಳನ್ನು ಮಾಡುತ್ತ ಹೋಗಿ. ಜೀವನದ ಆಗು-ಹೋಗುಗಳ ಬಗ್ಗೆ ಅರಿತು ಬಾಳಬೇಕೆಂದು ಭಕ್ತರಿಗೆ ತಿಳಿಸಿದರು.

    ಬಿಡುವಿನ ಸಮಯದಲ್ಲಿ ಧ್ಯಾನಾಸಕ್ತರಾಗಿ ತಮ್ಮ ದುಃಖ ದುಮ್ಮಾನಗಳನ್ನು ದೂರ ಮಾಡಿಕೊಂಡರೆ, ಮನಸ್ಸು ಹಗುರವಾಗಲಿದೆ. ಇತರರಿಗೆ ತೊದರೆ ಮಾಡದೇ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಬಸವಣ್ಣ, ಮಡಿವಾಳ ಮಾಚಯ್ಯ, ಚನ್ನಮಲ್ಲಿಕಾರ್ಜುನ, ಅಕ್ಕಮಹಾದೇವಿ, ಇತರರ ವಚನಗಳನ್ನು ಆಲಿಸಿ ಶಿವಶರಣರ ತತ್ವಾದರ್ಶಗಳನ್ನು ಪಾಲಿಸುವಂತೆ ಕಿವಿಮಾತು ಹೇಳಿದರು.

    ಹತ್ತು ದಿನಗಳ ಕಾಲ ಹಿಮಾಲಯನ್ ಧ್ಯಾನಯೋಗ ನಡೆಸಲಾಗುತ್ತಿದ್ದು, ಉಸಿರಾಟದ ಕ್ರಮ, ವಿವಿಧ ಆಸನಗಳು, ಪ್ರಾಣಾಯಾಮ ಹೇಳಿಕೊಡಲಾಗುವುದು. ಆಸಕ್ತರು ಭಾಗವಹಿಸಬಹುದು. ಗುಂಡಿಗನೂರು, ಹಾವಿನಾಳು, ಮುದ್ದಟ್ಟನೂರು, ಎಂ.ಸೂಗೂರು, ಸಿದ್ದರಾಂಪುರ, ದಾಸಾಪುರ, ಕೊಂಚಿಗೇರಿ, ಶಾನಾವಾಸಪುರ, ಭೈರಾಪುರ, ನಡಿವಿ ಗ್ರಾಮದ ಭಕ್ತರು ಭಾಗವಹಿಸಿದ್ದರು.

    ಪ್ರಮುಖರಾದ ಬಸವಮಠದ ಬಸವಭೂಷಣ ಸ್ವಾಮೀಜಿ, ಬಸವರಾಜಪ್ಪ ಶರಣರು, ಜೆ.ಮಲ್ಲಿಕಾರ್ಜುನಗೌಡ, ಎಸ್.ಎನ್.ವಿರುಪಾಕ್ಷಗೌಡ, ಗೋಡೆ ಚಂದ್ರಶೇಖರ್‌ಗೌಡ, ಹೂಗಾರ್ ಬಸವರಾಜ್, ಎಸ್.ಎನ್.ಬುಜ್ಜಿಗೌಡ, ಪಾಠ ಶಾಲಾ ಮಠದ ಬಸವರಾಜ ಸ್ವಾಮಿ, ಸಿ.ಎಂ.ಮರುಳಸಿದ್ದಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts