More

    ಮಸ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ; ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಹೇಳಿಕೆ

    ಮಸ್ಕಿ: ತಾಲೂಕು ಕೇಂದ್ರದಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಕೊಡಲಾಗುವುದು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಹೇಳಿದರು.

    ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭಾನುವಾರ ಬಂಜಾರ ಸಮುದಾಯದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 200 ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಕೌಶಲ ತರಬೇತಿ ಕಾರ್ಯಾಗಾರ ಮಾಡಿ ಅವರಿಗೆ ಉದ್ಯೋಗ ಕೊಟ್ಟು ವಲಸೆ ಹೋಗುವುದನ್ನು ತಡೆಗಟ್ಟುವುದಾಗಿ ತಿಳಿಸಿದರು.

    ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿರುವ ಬಂಜಾರ ಸಮುದಾಯದವರ ಹಿತವನ್ನು ಪ್ರತಾಪಗೌಡ ಪಾಟೀಲ್ ಕಾಯುತ್ತಾರೆ. ಅವರಿಗೆ ಅತಿ ಹೆಚ್ಚಿನ ಮತದಿಂದ ಗೆಲ್ಲಿಸುವಂತೆ ಸಮುದಾಯದವರಿಗೆ ಮನವಿ ಮಾಡಿದರು.

    ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಬಂಜಾರ ಸಮುದಾಯಕ್ಕೆ ಬೇಕಾದ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವೆ ಎಂದರು.

    ಬಂಜಾರ ಸಮುದಾಯದ ರಾಜ್ಯ ಆಧ್ಯಕ್ಷ ಪಾಂಡುರಂಗ ಪಮ್ಮಾರ, ತಾಂಡಾ ಅಭಿವೃದ್ಧಿ ನಿಗಮದ ಸದಸ್ಯರಾದ ಮನೋಹರ ಪವಾರ್, ಜಿ.ಬಿ.ಮಾರುತಿ ನಾಯಕ, ಜಿ.ಪ.ಸದಸ್ಯೆ ಅಮರಮ್ಮ ರಾಠೋಡ, ಬಿ.ಜೆ.ಪಿ ಮಹಿಳಾ ಮೊರ್ಚಾದ ಜಿಲ್ಲಾ ಕಾರ್ಯದರ್ಶಿ ಶಾರದಾ ರಾಠೋಡ, ಮುಖಂಡರಾದ, ಅಮರೇಶ ಅಂತರಗಂಗಿ, ಹರಿಶ್ಚಂದ್ರ ರಾಠೋಡ, ರಾಮಣ್ಣ ಮಾಸ್ತಾರ ಇದ್ದರು.

    ಮಸ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ; ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts