More

    ರಸ್ತೆ ಅಭಿವೃದ್ಧಿಗೊಳಿಸಿಕೊಂಡ ಉದ್ಬಾಳ ಗ್ರಾಮಸ್ಥರು

    ಮಸ್ಕಿ: ಮನಸ್ಸು ಮಾಡಿದರೆ ಏನು ಬೇಕಿದ್ದರೂ ಸಾಧನೆ ಮಾಡಬಹುದು ಎಂಬುದನ್ನು ತಾಲೂಕಿನ ಉದ್ಬಾಳ ಗ್ರಾಮದ ಗ್ರಾಮಸ್ಥರು ಸಾಕ್ಷೀಕರಿಸಿದ್ದಾರೆ. ಸರ್ಕಾರದ ಹಣಕ್ಕಾಗಿ ಕಾಯದೆ ಉದ್ಬಳಾ ಗ್ರಾಮದಿಂದ ಹಸಮಕಲ್ ಗ್ರಾಮದವರೆಗಿನ 3.5 ಕಿ.ಮೀ ರಸ್ತೆಯನ್ನು ಗ್ರಾಮಸ್ಥರೇ ಹಣ ತೊಡಗಿಸಿ ಶ್ರಮದಾನದ ಮೂಲಕ ರಸ್ತೆಯನ್ನು ಬುಧವಾರ ದುರಸ್ತಿಗೊಳಿಸಿಕೊಂಡು ಅಭಿವೃದ್ಧಿಗೆ ಹೊಸ ಭಾಷ್ಯೆ ಬರೆದಿದ್ದಾರೆ.

    ಈ ಮೊದಲು ಎಚ್‌ಕೆಡಿಬಿಯ ಮೈಕ್ರೋ ಯೋಜನೆಯಲ್ಲಿ ಈ ರಸ್ತೆ ಅಭಿವೃದ್ಧಿಯನ್ನು ಸೇರಿಸಲಾಗಿತ್ತು. ಬದಲಾದ ಸಂದರ್ಭದಲ್ಲಿ ಇದಕ್ಕೆ ಮೀಸಲಿದ್ದ ಹಣವನ್ನು ವಿಮಾನ ನಿಲ್ದಾಣದ ಕಾಮಗಾರಿಗಾಗಿ ವರ್ಗಾಹಿಸಲಾಗಿದೆ ಎಂದು ತಿಳಿದು ಬಂದಿದ್ದು, ಗ್ರಾಮಸ್ಥರು ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾದರು.

    ಉದ್ಬಾಳ ಗ್ರಾಮದ ಮುಖಂಡರು, ಗ್ರಾಪಂ ಅಧ್ಯಕ್ಷರು, ಯುವಕರು ಶ್ರಮದಾನದ ಮುಖಾಂತರ ರಸ್ತೆ ವಿಸ್ತರಣೆ ಕುರಿತು ಚರ್ಚಿಸಿದರು. ಗ್ರಾಮದಲ್ಲಿದ್ದ ಪ್ರತಿ ಮನೆಯವರನ್ನು ಭೇಟಿ ಮಾಡಿ ಹಣದ ಸಹಕಾರ ಕೋರಿದರು. ನೂರಕ್ಕೂ ಹೆಚ್ಚು ಜನ ಧನ ಸಹಾಯ ಮಾಡಿದರೆ, ಉಳಿದವರು ತಮ್ಮಲ್ಲಿದ್ದ ಟ್ರ್ಯಾಕ್ಟರ್ ಕಾಮಗಾರಿ ಬಳಕೆಗೆ ಉಚಿತವಾಗಿ ನೀಡಿ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದರು.

    ಈ ಮೊದಲಿದ್ದ ಕಚ್ಚಾ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅಕ್ಕಪಕ್ಕದಲ್ಲಿ ಜಾಲಿಗಿಡಗಳನ್ನು ಕಡಿದು, ರಸ್ತೆಗೆ ಮರಮ್ ಹಾಕಿ ಗಟ್ಟಿಮುಟ್ಟಾದ ರಸ್ತೆ ನಿರ್ಮಾಣ ಮಾಡುವ ಮೂಲಕ ಉದ್ಬಾಳ ಗ್ರಾಮಸ್ಥರು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

    ರುದ್ರಗೌಡ ಗೌಡೂರು, ಅಜೇಯ ನಾಡಗೌಡ, ಶಂಕರರಾವ್ ಕುಲಕರ್ಣಿ, ಮಹಾಂತೇಶ ಕಡಾಮುಡಿಮಠ, ಯಂಕಣ್ಣ ಕಮತರ್, ಕಂಟೆಪ್ಪ ನಾಯಕ್, ಚಂದ್ರಶೇಖರ ನಾಯಕ್, ವೀರೇಶ ಕಮತರ್, ಗ್ರಾಪಂ ಅಧ್ಯಕ್ಷ ಅಂಬಣ್ಣ ಗೌಂಡಿ, ಅಮರೇಶ ಗೌಡರ್, ನೀಲಕಂಠಪ್ಪ ನಾಯಕ, ಬಸವರಾಜ ನಾಯಕ್ ಸೇರಿದಂತೆ ಅನೇಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.

    ಉದ್ಬಾಳ -ಹಸಮಕಲ್ ರಸ್ತೆ ಕಚ್ಚಾ ರಸ್ತೆಯಾಗಿತ್ತು. ಈ ರಸ್ತೆ ಮುಖಾಂತರ ಉದ್ಬಾಳ ಗ್ರಾಮಸ್ಥರು ತಮ್ಮ ಹೊಲಗಳಿಗೆ ಮತ್ತು ಹಸಮಕಲ್ ಮುಖಾಂತರ ಸಿಂಧನೂರಿಗೆ ಹೋಗುತ್ತಿದ್ದರು. ಮಳೆಗಾಲವಾದ್ದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಸರ್ಕಾರದ ಕಡೆ ಮುಖ ಮಾಡದೆ ಗ್ರಾಮಸ್ಥರ ನೆರವಿನಿಂದ ಶ್ರಮದಾನದ ಮುಖಾಂತರ ರಸ್ತೆ ನಿರ್ಮಾಣ ಮಾಡಿದ್ದೇವೆ.
    | ವೀರೇಶ ಕಮತರ ಉದ್ಬಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts