More

  ದೃಢ ಸಂಕಲ್ಪದಿಂದ ರಥ ನಿರ್ಮಾಣ

  ಮಸ್ಕಿ: ಎರಡನೇ ಶ್ರೀಶೈಲ ಎಂದೇ ಪ್ರಸಿದ್ಧವಾಗಿರುವ ಮಸ್ಕಿ ಮಲ್ಲಿಕಾರ್ಜುನ ಭಕ್ತರ ದೃಢವಾದ ಸಂಕಲ್ಪದಿಂದ ನೂತನ ರಥ ನಿರ್ಮಾಣವಾಗಿದೆ. ಫೆ.24 ರಂದು ಸಂಜೆ 5ಕ್ಕೆ ಜರುಗಲಿರುವ ರಥೋತ್ಸವವನ್ನು ಭಕ್ತರು ಯಶಸ್ವಿಗೊಳಿಸಲಿ ಎಂದು ಮಸ್ಕಿ ಗಚ್ಚಿನ ಮಠದ ವರರುದ್ರ ಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

  ಇದನ್ನೂ ಓದಿ: ಪ್ರಧಾನಿ ಮೋದಿ ನಿಂದನೆ: ರಾಹುಲ್​ ವಿರುದ್ಧ ಅಮಿತ್​ ಶಾ ಆಕ್ರೋಶ

  ಪಟ್ಟಣದ ಗಚ್ಚಿನ ಮಠದಲ್ಲಿ ಶನಿವಾರ ಮಲ್ಲಿಕಾರ್ಜುನ ದೇವರ ನೂತನ ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಭಕ್ತರ ಸಹಕಾರದಿಂದ 1 ಕೋಟಿ ರೂ.ವೆಚ್ಚದಲ್ಲಿ ನೂತನ ರಥ ನಿರ್ಮಾಣ ಮಾಡಲಾಗಿದೆ. ಈ ರಥವು ಪರಂಪರೆ ಕೊಂಡೊಯ್ಯೂವ ಕಾರ್ಯ ಮಾಡಲಿದೆ. ಜರುಗಲಿದೆ ಎಂದರು.

  ರಥ ನಿರ್ಮಾಣ ಸಮಿತಿಯ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಕಳೆದ ವರ್ಷ ನೂತನ ರಥ ನಿರ್ಮಾಣಕ್ಕೆ ಗ್ರಾಮದ ಹಿರಿಯರು ಧೃಡ ಸಂಕಲ್ಪ ಮಾಡಿದ ಪರಿಣಾಮ ಮಲ್ಲಿಕಾರ್ಜುನ ದೇವರ ಭಕ್ತರ ಸಹಕಾರದಿಂದ ನೂತನ ರಥ ನಿರ್ಮಾಣವಾಗಿದೆ. ಜಾತ್ರೆಯನ್ನು ಸರ್ವ ಸಮುದಾಯದವರು ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದರು.

  ರಥ ನಿರ್ಮಾಣ ಸಮಿತಿಯ ಪ್ರಮುಖರಾದ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾರ್ಗದರ್ಶನದಂತೆ ರಥ ನಿರ್ಮಾಣವಾಗಿದೆ. ಹಲವಾರು ವರ್ಷಗಳಿಂದ ಹಳೆಯ ರಥೋತ್ಸವ ಯಶಸ್ವಿಗೆ ದುಡಿದ ಭೋವಿ ಸಮಾಜ, ರಥಕ್ಕೆ ಎಣ್ಣೆ ಹಚ್ಚುವವರು, ಕಂಬಾರರು ಹಾಗೂ ಪೊರೋಹಿತರಿಗೆ ಸತ್ಕಾರ, ಶ್ರೀಶೈಲದಿಂದ ಗಂಗಾಜಲ ತಂದು ಹೋಮ ಹವನ, ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

  ರಥ ನಿರ್ಮಾಣ ಸಮಿತಿಯ ಪ್ರಮುಖರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಡಾ.ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಎಚ್.ಬಿ ಮುರಾರಿ, ಅಪ್ಪಾಜಿಗೌಡ ಪಾಟೀಲ, ಪಂಚಾಕ್ಷರಯ್ಯ ಕಂಬಾಳಿಮಠ, ಘನಮಠದಯ್ಯ ಸಾಲಿಮಠ, ಉಮೇಶ ನಾಗಲಿಕರ್, ವರ್ತಕ ಮಲ್ಲಪ್ಪ ಕುಡತನಿ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts