More

    ಮಸ್ಕಿ, ನರೇಗಾ ಕಾರ್ಮಿಕನಿಗೆ ಕಚ್ಚಿದ ಹಾವು

    ಮಸ್ಕಿ: ತಾಲೂಕಿನ ರಂಗಾಪುರ ಬಳಿ ಹೊಲಗಾಲುವೆಯಲ್ಲಿ ಮಂಗಳವಾರ ಕಸ ತೆಗೆಯುವಾಗ ಯುವ ಕಾರ್ಮಿಕ ರಾಜುಗೆ ಹಾವು ಕಚ್ಚಿದೆ. ಆಂಜನೇಯ ಕ್ಯಾಂಪ್ ನಿವಾಸಿ ರಂಗಾಪುರ ಬಳಿ ಬೆಳಗ್ಗೆ 8ಕ್ಕೆ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇವರನ್ನು ಕೂಡಲೇ ಮಸ್ಕಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೆಂಟಿಲೇಟರ್ ಇಲ್ಲದ ಕಾರಣ ಲಿಂಗಸುಗೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕರೊನಾ ಭೀತಿಯಿಂದ ಹಟ್ಟಿ ಕಂಪನಿಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಶಿಫಾರಸು ಮಾಡಿದರು. ನಂತರ ಗುಡುದೂರು ಪಂಚಾಯತಿ ಪಿಡಿಒ ಮಲ್ಲಯ್ಯ ‘ಕಾರ್ಮಿಕನಿಗೆ ಹಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಾಗ ಗುಣಮುಖರಾದರು.

    ವೆಂಟಿಲೇಟರ್ ಅಳವಡಿಸಿ: ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಸರ್ಕಾರ ಮಾಡಬೇಕು. ತುರ್ತು ಚಿಕಿತ್ಸೆಗಾಗಿ ವೆಂಟಿಲೇಟರ್ ಸಮಸ್ಯೆಯಿಂದ ರೋಗಿಗಳನ್ನು ಬೇರೆಡೆ ಕಳಿಸುವುದು ಸರಿಯಲ್ಲ ಎಂದು ಹಾವು ಕಚ್ಚಿದ ಕಾರ್ಮಿಕನ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts