More

    ಕನ್ನಡ ಕೆಲಸಗಳಿಗೆ ಸದಾ ಸಹಕಾರ; ಶಾಸಕ ಆರ್. ಬಸನಗೌಡ ತುರವಿಹಾಳ ಹೇಳಿಕೆ

    ಮಸ್ಕಿ: ಕಸಾಪ ಹಮ್ಮಿಕೊಳ್ಳುವ ಕನ್ನಡ ಹಾಗೂ ಸಾಹಿತ್ಯದ ಕೆಲಸಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಶಾಸಕ ಆರ್. ಬಸನಗೌಡ ತುರವಿಹಾಳ ಹೇಳಿದರು.

    ಇದನ್ನೂ ಓದಿರಿ: ಬಿ.ಜಿ.ಅಣ್ಣಿಗೇರಿ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭ-ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠ : ತೋಂಟದ ಶ್ರೀಗಳು

    ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭಾನುವಾರ ಕಸಾಪ ಹಮ್ಮಿಕೊಂಡಿದ್ದ ಜಗದೇವಿ ಡಾ.ಶಿವಶರಣಪ್ಪ ಇತ್ಲಿ ದತ್ತಿ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನಾಡು-ನುಡಿ ರಕ್ಷಣೆಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ ಎಂದ ಅವರು, ಕಸಾಪ ತಾಲೂಕು ಘಟಕಕ್ಕೆ ಕನ್ನಡ ಭವನ ನಿರ್ಮಿಸಲು ಪುರಸಭೆಯಿಂದ ನಿವೇಶನ ಹಾಗೂ ಬೇಕಾದ ಅನುದಾನ ನೀಡುವ ಭರವಸೆ ನೀಡಿದರು.

    ಡಾ.ಕೆ.ಶಿವರಾಜ ಮಾತನಾಡಿ, ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಪ್ರದೇಶ ಯಾವುದಾದರು ಇದ್ದರೆ ಅದು ಕಲ್ಯಾಣ ಕರ್ನಾಟಕ ಮಾತ್ರ ಎಂದರು. ಶೂನ್ಯ ಬಂಡವಾಳದಲ್ಲಿ ಆರೋಗ್ಯ ಕಾಪಾಡಲು ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಮಿತ ಊಟ, ವ್ಯಾಯಾಮ, ಸುಖಕರ ನಿದ್ದೆಯಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.

    ದತ್ತಿ ದಾನಿ ಡಾ. ಶಿವಶರಣಪ್ಪ ಇತ್ಲಿ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ಬ್ಯಾಳಿ ಇದ್ದರು.

    ಎಸ್ಸೆಸ್ಸೆಲ್ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನೂತನ ಶಾಸಕ ಆರ್. ಬಸನಗೌಡ ತುರುವಿಹಾಳ, ಅತ್ಯುತ್ತಮ ವೈದ್ಯ ಪ್ರಶಸ್ತಿ ಪಡೆದ ಡಾ.ಕೆ. ಶಿವರಾಜ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts