More

    ಬಿ.ಜಿ.ಅಣ್ಣಿಗೇರಿ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭ-ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠ : ತೋಂಟದ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಎಲ್ಲ ದಾನಕ್ಕಿಂತ ವಿದ್ಯಾದಾನ ಅತ್ಯಂತ ಶ್ರೇಷ್ಠ ದಾನ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ರವಿವಾರ ನಗರದ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಬಿ. ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ ಲಿಂ. ಬಿ. ಜಿ. ಅಣ್ಣಿಗೇರಿ ಅವರ 93ನೇ ಜಯಂತಿ ಹಾಗೂ 9ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಭೂದಾನ, ಅನ್ನದಾನ, ದೇಹದಾನ, ನೇತ್ರದಾನ ಹೀಗೆ ಹಲವಾರು ದಾನಗಳಲ್ಲಿ ಶಿಣ ದಾನ ಉತಷ್ಠ ದಾನವಾಗಿದೆ. ಉಳಿದೆಲ್ಲ ದಾನಕ್ಕಿಂತ ಪಡೆದ ಶಿಣವು ಜೀವನ ಪರ್ಯಂತ ಮನುಷ್ಯನೊಂದಿಗೆ ಬರುವದು. ಅಳಿಯದ, ಕಳ್ಳತನವಾಗದ ಶಾಸ್ವತ ಜ್ಞಾನಭಂಡಾರವೇ ಶಿಕ್ಷಣ. ಶಿಣದಿಂದಲೇ ವ್ಯಕ್ತಿಯ ಬದುಕು ರೂಪಿತಗೊಳ್ಳುವದು ಎಂದರು.
    ಗದಗ ಪರಿಸರದಲ್ಲಿ ಶಿಣ ಪ್ರೇಮಿ, ತ್ಯಾಗಜೀವಿ ಲಿಂ. ಬಿ.ಜಿ.ಅಣ್ಣಿಗೇರಿ ಗುರುಗಳು ಸಲ್ಲಿಸಿದ ಸೇವೆ ಅನುಪಮವಾಗಿದೆ. ಶಿಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಅವರು ಸನ್ಯಾಸ ಜೀವನ ನಡೆಸಿ, ಶಿಕ ವೃತ್ತಿಯ ಜತೆಗೆ ತಾವಿದ್ದ ಕೊಠಡಿಯಲ್ಲಿ ವಿದ್ಯಾಥಿರ್ಗಳಿಗೆ ಪಾಠ ಹೇಳಿ ಬದುಕು ನಡೆಸಿದವರು. ಕೊಠಡಿಯಿಂದ ಆರಂಭಗೊಂಡ ಶಿಕ್ಷಣ ವೃತ್ತಿ ಕಾಲಕ್ರಮೇಣ ಗುರುಕುಲವಾಗಿ ಪರಿವರ್ತನೆಗೊಂಡಿತು. ಅಪಾರ ಶಿಷ್ಯರು ದೇಶ, ವಿದೇಶ, ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿರುವದು ಅಣ್ಣಿಗೇರಿ ಅವರ ಬೋಧನೆಯ ಗಟ್ಟಿತನ, ಮಕ್ಕಳ ಭವಿಷ್ಯ ರೂಪಿಸುವ ಕಳಕಳಿಯನ್ನು ಅಭಿವ್ಯಕ್ತಗೊಳಿಸುವದು ಎಂದು ಶ್ರೀಗಳು ಹೇಳಿದರು.
    ಡಿಪಿಐ ಜಿ. ಎಂ. ಬಸವಲಿಂಗಪ್ಪ ಮಾತನಾಡಿ ಪ್ರತಿಷ್ಠಾನವು ಉತ್ತಮ ಕಾರ್ಯ ಮಾಡುತ್ತಿದೆ. ಗದಗ ತಾಲೂಕಿನ ಎಲ್ಲ ಸರ್ಕಾರಿ ಪ್ರೌಢ ಶಾಲೆಯ ಪ್ರತಿಭಾನ್ವಿತ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರನ್ನು ಪ್ರೋತ್ಸಾಹಿಸಿರುವದು ಶ್ಲಾನೀಯ ಎಂದರು.
    ಶಿವಕುಮಾರ ಪಾಟೀಲ ಮಾತನಾಡಿ ಅಣ್ಣಿಗೇರಿ ಗುರುಗಳ ಶಿಷ್ಯರು ಸಂಟಿಕರಾಗಿ ತೋಂಟದ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರತಿಭಾ ಪ್ರತಿಷ್ಠಾನವನ್ನು ಮುನ್ನಡೆಸಿದ್ದು, ಗುರುಗಳ ಕನಸ್ಸನ್ನು ಸಾಕಾರಗೊಳಿಸಲು ಯತ್ನಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾಥಿರ್ ವಿದ್ಯಾಥಿರ್ನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಲವು ಮಹನೀಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
    ಡಿ.ಆರ್​.ಪಾಟೀಲ, ಶಂಕ್ರಪ್ಪ ಅಣ್ಣಿಗೇರಿ, ಎಂ.ಪಿ.ಕೋಳಿವಾಡ, ಕಳಕಪ್ಪ ಕುರ್ತಕೋಟಿ. ಪರಶುರಾಮ ಮಂಗಳಗುಡ್ಡ, ವಿಠ್ಠಲ ಹೂಗಾರ, ಶಿವಾನಂದ ಕತ್ತಿ. ರವಿ ದಂಡಿನ, ಎಸ್​.ಆರ್​.ಪಾಟೀಲ, ವಿರುಪಾಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ಶಿವಾನಂದ ದಂಡಿನ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಪ್ಪ ಶಾಂತಗೇರಿ, ಬಸವರಾಜ ಬಿಂಗಿ, ಸಿದ್ದಣ್ಣ ಕವಲೂರ, ಬಸವರಾಜ ಚನ್ನಪ್ಪಗೌಡ್ರ, ಶಶಿಧರ ದಿಂಡೂರ ಸೇರಿದಂತೆ ಶಿಷ್ಯ ಬಳಗ, ಶಿಣ ಪ್ರೇಮಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts